
ಚಂಡೀಗಢ: ಕಳೆದ ವರ್ಷ ಟೆರರ್ ಡಾಕ್ಟರ್ಸ್‌ಗಳಿಂದ ಸುದ್ದಿಯಾಗಿದ್ದ ಅಲ್ ಫಲಾ ವಿವಿಯನ್ನು ಹರ್ಯಾಣ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಜತೆಗೆ ಆಡಳಿತಾಧಿಕಾರಿಯಾಗಿ ಹಿರಿಯ ಐಎಎಸ್ ಅಧಿಕಾರಿ ನೇಮಿಸಿದೆ.
ಸುಮಾರು 17000 ವಿದ್ಯಾರ್ಥಿಗಳಿರುವ ಈ ವಿವಿಯ ಶೈಕ್ಷಣಿಕ ಚಟುವಟಿಕೆಗಳ ಮೇಲ್ವಿಚಾರಣೆ ಹೊಣೆಯನ್ನು ಸರ್ಕಾರ ನಿಭಾಯಿಸಲಿದೆ. ಇದರ ಜತೆಗೆ ಹಣಕಾಸು ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ನಿರ್ವಹಿಸಲು ಹಿರಿಯ ಐಎಎಸ್ ಅಧಿಕಾರಿ ಅಮಿತ್ ಅಗರ್ವಾಲ್ ಅವರನ್ನು ನೇಮಕ ಮಾಡಿದೆ. ಇದು ಮಾತ್ರವಲ್ಲದೇ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೂ ಮೇಜರ್ ಸರ್ಜರಿ ಮಾಡಿದ್ದು, ಉಪಕುಲಪತಿ, ರಿಜಿಸ್ಟ್ರಾರ್, ಪರೀಕ್ಷಾ ನಿಯಂತ್ರಕ ಸೇರಿ ಇತರ ಹುದ್ದೆಗಳಿಗೆ ಹೊಸಬರ ನೇಮಕ ಮಾಡಿದೆ.
ಈ ವಿವಿಯಲ್ಲಿಯೇ ಕೆಂಪು ಕೋಟೆ ಸ್ಫೋಟದ ಸಂಚು, ಟೆರರ್ ಡಾಕ್ಟರ್ಸ್‌ಗಳ ಷಡ್ಯಂತ್ರಗಳು ರೂಪಿತವಾಗಿತ್ತು. ಮಾತ್ರವಲ್ಲದೇ ಇದರ ಮುಂದುವರೆದ ಭಾಗವಾಗಿ ಇದೇ ವರ್ಷದ ಜನವರಿಯಲ್ಲಿ ಇ.ಡಿ. ಅಲ್ ಫಲಾಗೆ ಸೇರಿದ ಸುಮಾರು 140 ಕೋಟಿ ರು. ಆಸ್ತಿಯನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ