'ನನ್ನ ಮಾತನ್ನು ನಿಲ್ಸೋ ಗಂಡ್ಸು ಹುಟ್ಟೇ ಇಲ್ಲ..' ಪೊಲೀಸ್‌ ಅಧಿಕಾರಿಗೆ ಓವೈಸಿ ಸಹೋದರನ ಬೆದರಿಕೆ!

By Santosh NaikFirst Published Nov 22, 2023, 3:45 PM IST
Highlights

Telangana Assembly Election: ತೆಲಂಗಾಣ ವಿಧಾನಸಭೆಯ ನವೆಂಬರ್‌ 30 ರಂದು ಚುನಾವಣೆ ನಡೆಯಲಿದೆ. ಇದರ ನಡುವೆ ಚುನಾವಣಾ ಪ್ರಚಾರ ಕಾರ್ಯಕ್ರಗಳು ರಾಜ್ಯದ ವಿವಿಧ ಭಾಗಗಳಲ್ಲಿ ಬಹಳ ಜೋರಾಗಿ ನಡೆಯುತ್ತಿದೆ.


ಹೈದರಬಾದ್‌ (ನ.22): ಪೊಲೀಸರು ಕೇವಲ 15 ನಿಮಿಷ ಟೈಮ್‌ ಕೊಡಿ ದೇಶದಲ್ಲಿ ಹಿಂದೂಗಳೇ ಇಲ್ಲದಂತೆ ಮಾಡುತ್ತೇವೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಫೈರ್‌ಬ್ರ್ಯಾಂಡ್‌ ಲೀಡರ್‌ ಅಕ್ಬರುದ್ದೀನ್‌ ಓವೈಸಿ ಮತ್ತೊಮ್ಮೆ ವಿವಾದಾತ್ಮಕ ಮಾತನಾಡಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥರಾಗಿರುವ ಅಸಾದುದ್ದೀನ್‌ ಓವೈಸಿ ಅವರ ಸಹೋದರನಾಗಿರುವ ಅಕ್ಬರುದ್ದೀನ್‌ ಓವೈಸಿ,  ಈ ಬಾರಿ ಚುನಾವಣೆಯ ಸಮಾವೇಶದ ವೇಳೆ ಪೊಲೀಸ್‌ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ. ತುಂಬಿದ ಸಭೆಯಲ್ಲಿ ಪೊಲೀಸ್‌ಗೆ ಆವಾಜ್‌ ಹಾಕಿರುವ ಅವರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಕ್ಬರುದ್ದೀನ್‌ ಓವೈಸಿ ಕಡೆಗೆ ಕೈ ತೋರಿಸಿದ ಪೊಲೀಸ್‌ ಅಧಿಕಾರಿ ನಿಮ್ಮ ಭಾಷಣವನ್ನು ಮುಗಿಸುವ ಸಮಯ ಬಂದಿದೆ ಎಂದು ಹೇಳಿದ್ದರು. ಇದೇ ಅಕ್ಬರುದ್ದೀನ್‌ ಓವೈಸಿಯ ಸಿಟ್ಟಿಗೆ ಕಾರಣವಾಗಿವದೆ. ಇದರಿಂದ ಕೋಪಗೊಂಡ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಸಹೋದರ ಅಕ್ಬರುದ್ದೀನ್ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಇದರ ಬೆನ್ನಲ್ಲಿಯೇ ಅವರ ವಿರುದ್ಧ ಕೇಸ್‌ ಕೂಡ ದಾಖಲಾಗಿದೆ.

ಮಂಗಳವಾರ ಅಕ್ಬರುದ್ದೀನ್‌ ಓವೈಸಿ ಸಾರ್ವಜನಿಕವಾಗಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಆವಾಜ್‌ ಹಾಕಿದ್ದಾರೆ. ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅಕ್ಬರುದ್ದೀನ್‌ ಓವೈಸಿಇಗೆ ಚುನಾವಣಾ ನೀತಿ ಸಂಹಿತೆ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದು ಅದನ್ನು ಪಾಲನೆ ಮಾಡುವಂತೆ ಹೇಳಿದ್ದಾರೆ. ಮಾದರಿ ನೀತಿ ಸಂಹಿತೆಯಡಿ ನಿಗದಿ ಪಡಿಸಿರುವ ಕಾಲಮಿತಿ ಮೀರಿರುವುದರಿಂದ ಈಗಲೇ ಭಾಷಣ ನಿಲ್ಲಿಸಬೇಕು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಕುರಿತು ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಓವೈಸಿ, ಪೊಲೀಸ್ ಅಧಿಕಾರಿಯನ್ನು ಸ್ಥಳದಿಂದ ತಕ್ಷಣವೇ ಹೊರಹೋಗುವಂತೆ ಬೆದರಿಕೆ ಹಾಕಿದ್ದಾರೆ.

ಅಕ್ಬರುದ್ದೀನ್ ಓವೈಸಿ ಹೇಳಿದ್ದೇನು?: ಸುದ್ದಿ ಸಂಸ್ಥೆ ಎಎನ್‌ಐ ಪ್ರಸಾರ ಮಾಡಿರುವ ವಿಡಿಯೋದಲ್ಲಿ  ಅಕ್ಬರುದ್ದೀನ್ ಓವೈಸಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಬೆದರಿಕೆ ಹಾಕಿದ್ದು ಕಂಡಿದೆ. ತಮ್ಮ ಬೆಂಬಲಿಗರ ಕಡೆ ಒಂದು ಸಣ್ಣ ಕೈ ತೋರಿಸಿದರೆ, ನೀವು ನೀವು ಇಲ್ಲಿಂದ ಓಡಿ ಹೋಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. 'ಚಾಕು ಇರಿತ ಹಾಗೂ ಗುಂಡುಗಳನ್ನು ತಿಂದು ನಾನು ದುರ್ಬಲನಾಗಿದ್ದೇನೆ ಎಂದು ನೀವು ಅಂದುಕೊಂಡಿದ್ದೀರಾ? ಅದು ಹಾಗಲ್ಲ. ಏಕೆಂದರೆ ನನ್ನೊಳಗೆ ಇನ್ನೂ ಸಾಕಷ್ಟು ಧೈರ್ಯವಿದೆ. ಈಗಲೂ ಕೂಡ ಐದು ನಿಮಿಷ ಬಾಕಿ ಇದೆ. ನಾನು ಈ ಐದು ನಿಮಿಷ ಮಾತನಾಡುತ್ತೇನೆ' ಎಂದು ಹೇಳಿದ್ದಾರೆ.

ಇನ್ನು ನನ್ನನ್ನು ತಡೆಯಲು ಯಾವ ತಾಯಿಯ ಮಗನೂ ಹುಟ್ಟಿಲ್ಲ. ನಾನು ಸಿಗ್ನಲ್ ಕೊಟ್ಟರೆ ನೀನು ಇಲ್ಲಿಂದ ಓಡಬೇಕು. ನಾನು ಅವರಿಗೆ ಸೂಚನೆ ನೀಡಬೇಕೇ? ಇವರು ನಮ್ಮನ್ನು ದುರ್ಬಲಗೊಳಿಸಲು ಬಂದಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.. ಅಕ್ಬರುದ್ದೀನ್ ಅವರು ಚಂದ್ರಾಯನಗುಟ್ಟಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿದ್ದಾರೆ. ಈ ಸ್ಥಾನ ಎಐಎಂಐಎಂನ ಭದ್ರಕೋಟೆಯಾಗಿದೆ. 2014 ಮತ್ತು 2018ರಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಈ ಕ್ಷೇತ್ರದಿಂದ ಗೆದ್ದಿದೆ.

\ಪ್ರೂಫ್ ಕೇಳಿದವ್ರಿಗೆ ಹೇಳಿ 'ಚಾರ್ ಮಿನಾರ್ ನಮ್ಮಪ್ಪ ಕಟ್ಟಿದ್ದು, ನಿಮ್ಮಪ್ಪ ಅಲ್ಲ'!

ಹಾಗೇನಾದರೂ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದಲ್ಲಿ, ಅಕ್ಬರುದ್ದೀನ್‌ ಓವೈಸಿ ಆಡಿರುವ ಈ ಮಾತಿಗೆ ಖಂಡಿತವಾಗಿಯೂ ಬುಲ್ಡೋಜರ್‌ ಆಕ್ಷನ್‌ ಇರುತ್ತಿತ್ತು ಎಂದು ತೆಲಂಗಾಣ ಬಿಜೆಪಿ ಹೇಳಿದೆ. ಎಐಎಂಐಎಂ ದಶಕಗಳಿಂದ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಬೆಂಬಲದೊಂದಿಗೆ ಕ್ರಿಮಿನಲ್ ಕೆಲಸ ಮಾಡಿಕೊಂಡು ಬಂದಿದೆ. ಇದು ಹೈದರಾಬಾದ್ ನಗರವನ್ನು ಅಪರಾಧ ಹಾಗೂ ವಂಚಕರ ರಾಜಧಾನಿ ರೀತಿ ಮಾಡಿದೆ.  ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವ ಈ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಸಮಯ ಬಂದಿದೆ. ಬಿಜೆಪಿ ಸರ್ಕಾರದಲ್ಲಿ ಅಕ್ಬರುದ್ದೀನ್ ಅವರ ಈ ಕ್ರಮಕ್ಕೆ ಬುಲ್ಡೋಜರ್ ಮೂಲಕ ಉತ್ತರ ನೀಡಲಾಗುವುದು ಎಂದು ತಿಳಿಸಿದೆ.

ಆರ್‌ಎಸ್‌ಎಸ್‌ ನನ್ನ ‘15 ನಿಮಿಷ’ದ ಭಾಷಣ ಸ್ಮರಿಸುತ್ತಿದೆ: ಒವೈಸಿ!

| Telangana: AIMIM leader Akbaruddin Owaisi threatened a police inspector who was on duty and asked him to leave the spot while he was addressing a campaign in Lalitabagh, Hyderabad yesterday. The police inspector asked him to conclude the meeting on time as per the Model… pic.twitter.com/rf2tJAOk3b

— ANI (@ANI)
click me!