
ನವದೆಹಲಿ(ಫೆ. 26) ದೆಹಲಿಯಲ್ಲಿನ ಹಿಂಸಾಚಾರವನ್ನು ಕಂಟ್ರೋಲ್ ಗೆ ತರುವ ಹೊಣೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರಿಗೆ ವಹಿಸಲಾಗಿದೆ.ಕಳೆದ ನಾಲ್ಕು ದಿನಗಳಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ದೇಶದ್ರೋಹಿಗಳ ಪುಂಡಾಟ ತಡೆಯಲು ಸ್ವತಃ ಅಜಿತ್ ದೋವೆಲ್ ಅಖಾಡಕ್ಕೆ ಇಳಿದಿದ್ದಾರೆ.
"
ಗುಂಪುಘರ್ಷಣೆಯುಲ್ಲಿ ಇದುವರೆಗೆ ಪೊಲೀಸ್ ಸಿಬ್ಬಂದಿ ಸೇರಿದಂತೆ 20 ಜನ ಪ್ರಾಣ ಕಳೆದುಕೊಂಡಿದ್ದಾರೆ. ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ದೋವೆಲ್ ದೆಹಲಿಯ ಗಲಭೆ ಪೀಡಿತ ಪ್ರದೇಶಗಳಲ್ಲಿ ರಾತ್ರಿಯೇ ರೌಂಡ್ಸ್ ಹಾಕಿ ಮಾಹಿತಿ ಕಲೆಹಾಕಿದ್ದಾರೆ.
ದೆಹಲಿ ಜನರ ಪ್ರಾಣ ಹೀರಿದ ಹಿಂಸಾಚಾರ
ದೋವೆಲ್ ಗೆ ದೆಹಲಿಯ ಕಮಿಷನರ್ ಅಮೂಲ್ಯಾ ಪಟ್ನಾಯಕ್ ಮತ್ತು ವಿಶೇಷ ಕಮಿಷನರ್ ಎಸ್ ಎನ್ ಶ್ರೀನಿವಾಸ ಸಾಥ್ ನೀಡಿದ್ದಾರೆ.
ಗಲಭೆ ಪೀಡಿತ ಜಫಾರಾಬಾದ್ ಮತ್ತು ಸೇಲಂಪುರದಲ್ಲಿ ದೋವೆಲ್ ರೌಂಡ್ಸ್ ಹಾಕಿದ್ದು ವಿಶೇಷ ತಂಡಗಳ ಮೂಲಕ ಮುಂದಿನ ಕಾರ್ಯನಿಯೋಜನೆ ಹಾಕಿಕೊಂಡಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ