
ನವದೆಹಲಿ(ಮೇ.23): ದೆಹಲಿ ಆಡಳಿತ ವಿಚಾರದಲ್ಲಿ ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆ ವಿರೋಧಿಸಿ ಅರವಿಂದ್ ಕೇಜ್ರಿವಾಲ್ ಇತರ ಪಕ್ಷಗಳ ಬೆಂಬಲ ಕೋರಿದ್ದಾರೆ. ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೆ ಬೆಂಬಲ ವಿಚಾರದಲ್ಲಿ ಹಿರಿಯ ನಾಯಕರು ಒಕೆ ಎಂದಿದ್ದರೆ, ದೆಹಲಿ ಕಾಂಗ್ರೆಸ್ ಕಾಂಗ್ರೆಸ್ ನಿರ್ಧಾರವನ್ನೇ ವಿರೋಧಿಸಿದೆ. ಇಷ್ಟೇ ಅಲ್ಲ ಭ್ರಷ್ಟ ಕೇಜ್ರಿವಾಲ್‌ಗೆ ಬೆಂಬಲ ಯಾಕೆ? ಈ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಇದೀಗ ಕೇಜ್ರಿವಾಲ್‌ಗೆ ಮಾತ್ರ ಯಾಕೆ ಸಮಸ್ಯೆಯಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಾಕೇನ್ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಜತೆ ದಿಲ್ಲಿಯಲ್ಲಿನ ಅಧಿಕಾರ ಹಂಚಿಕೆ ಕುರಿತಂತೆ ಸಂಘರ್ಷದಲ್ಲಿ ತೊಡಗಿರುವ ಆಪ್ ನೇತಾರ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿ ದಿನ ಒಬ್ಬೊಬ್ಬ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಬಳಿಕ ನಿತೀಶ್ ಕುಮಾರ್, ತೇಜಸ್ವಿ ಯಾದವ್ ಭೇಟಿಯಾಗಿ ಇದೀಗ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಕೇಂದ್ರ ಹಾಗೂ ಮೋದಿ ವಿರುದ್ಧದ ಹೋರಾಟವಾದ ಕಾರಣ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಆದರೆ ದೆಹಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಕಾಂಗ್ರೆಸ್ ನಿರ್ಧಾರವನ್ನು ವಿರೋಧಿಸಿದ್ದಾರೆ.
ಶೀಲಾ ದೀಕ್ಷಿತ್‌ರ ಸಲಹೆ ಪಾಲಿಸಿ, ಸುಗ್ರೀವಾಜ್ಞೆ ವಿವಾದದಲ್ಲಿ ಕೇಜ್ರಿವಾಲ್‌ಗೆ ತಿಳಿ ಹೇಳಿದ ಮಾಕೆನ್!
ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸಬಾರದು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಇದೀಗ ದೆಹಲಿಯಲ್ಲಿ ಸಂಪೂರ್ಣ ಅಧಿಕಾರ ಚಾಚಲು ಬಯಸುತ್ತಿದೆ. ಖಲಿಸ್ತಾನಿಗಳಿಗೆ ಬೆಂಬಲ ಸೂಚಿಸುವ ಕೇಜ್ರಿವಾಲ್‌ಗೆ ಬೆಂಬಲ ನೀಡುವುದೇ ತಪ್ಪು. ಅಷ್ಟಕ್ಕೆ ಕೇಂದ್ರ ತಂದಿರುವ ಸುಗ್ರೀವಾಜ್ಞೆ ಸರಿ ಇದೆ. ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳಿಗೆ ಇಲ್ಲದ ಸಮಸ್ಯೆ ಇದೀಗ ಕೇಜ್ರಿವಾಲ್‌ಗೆ ಯಾಕೆ ಬರುತ್ತಿದೆ? ಇದು ಬೇಕಂತಲೇ ಸೃಷ್ಟಿ ಮಾಡಲಾಗುತ್ತಿದೆ. ತನ್ನ ಭ್ರಷ್ಟಾಚಾರದ ಕಂತೆ ಕತೆಗಳನ್ನು ಮುಚ್ಚಿಡಲು ಆಡುತ್ತಿರುವ ನಾಟಕ ಎಂದು ಅಜಯ್ ಮಾಕೇನ್ ಹೇಳಿದ್ದಾರೆ.
ಮಾಕೇನ್ ಬೆನ್ನಲ್ಲೇ ದೆಹಲಿಯ ಹಿರಿಯ ಕಾಂಗ್ರೆಸ್ ನಾಯಕರು ಕೇಜ್ರಿವಾಲ್‌ಗೆ ಕಾಂಗ್ರೆಸ್ ಬೆಂಬಲ ನೀಡಬಾರದು ಎಂದು ಮನವಿ ಮಾಡಿದೆ. ಇದೇ ವೇಳೆ ಕೇಜ್ರಿವಾಲ್ ವಿರುದ್ದ ಹಲವು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. ಕೇಜ್ರಿವಾಲ್ ಅಪ್ರಾಣಿಕರಾಗಿದ್ದಾರೆ. ಸರ್ಕಾರ ನಡೆಸುತ್ತಿರುವ ರೀತಿಯೇ ಕ್ರೂರವಾಗಿದೆ. ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷವನ್ನು ವಿಸ್ತರಣೆಗಾಗಿ ಯಾವುದೇ ಕೆಲಸಕ್ಕೂ ಕೈಹಾಕುತ್ತಾರೆ. ಕೇಜ್ರಿವಾಲ್ ಬೆಂಬಲಿಸಿದರೆ ನಾವು ನಮ್ಮ ತತ್ವ ಸಿದ್ದಾಂತ ಹಾಗೂ ಸಂವಿಧಾನಕ್ಕೆ ಮಾಡಿದ ದ್ರೋಹವಾಗುತ್ತದೆ ಎಂದು ದೆಹಲಿ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದ್ದಾರೆ. ದೆಹಲಿಯ ಜನರ ಅನೂಕೂಲಕ್ಕಾಗಿ ಕಾಂಗ್ರೆಸ್ ಪಕ್ಷ ಆಪ್ ಬೆಂಬಲಿಸುವುದಿಲ್ಲ ಎಂದು ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪ್ಲಾನ್, ಕೇಜ್ರಿವಾಲ್ ಭೇಟಿಯಾದ ನಿತೀಶ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ