
ನವದೆಹಲಿ (ನ.16) ಗ್ರಾಹಕರಿಗೆ ಈಗ ಕೇವಲ ಫೋನ್ ಕಾಲ್, ಡೇಟಾ, ಮನರಂಜನೆ ಮಾತ್ರವಲ್ಲ ಭರ್ಜರಿ ಕೊಡುಗೆ ಮೂಲಕ ಏರ್‌ಟೆಲ್ ವಿಸ್ತಾರಗೊಂಡಿದೆ. ಇದೀಗ ಪ್ರೀಮಿಯಂ ಸಬ್‌ಸ್ಕ್ರಿಪ್ಸನ್, ಶಾಪಿಂಗ್ ಡೀಲ್ ಸೇರಿದಂತೆ ಪ್ರಯಾಣ, ಊಟ, ಎಂಟರ್ಟೈನ್ಮೆಂಟ್ ವರಗೆ ಏರ್‌ಟೆಲ್ ಇನ್‌ಸೈಡರ್ ಪ್ರಮುಖ ಬ್ರ್ಯಾಂಡ್‌ಗಳ ಆಫರ್ ಒಂದೇ ಸ್ಥಳದಲ್ಲಿ ನೀಡುತ್ತದೆ. ಹೀಗಾಗಿ ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಲಾಭದಾಯಕ ಯೋಜನೆ ಇದಾಗಿದೆ. ಏರ್‌ಟೆಲ್ ಇನ್‌ಸೈಡರ್ ಮೂಲಕ ಗ್ರಾಹಕರು ತಮ್ಮ ದೈನಂದಿನ ಜೀವನದಲ್ಲಿ ಬಳಸಬಹುದಾದ ಮತ್ತು ಆನಂದಿಸಬಹುದಾದ ವಿವಿಧ ಬ್ರ್ಯಾಂಡ್‌ಗಳು ಹಾಗೂ ಅನುಭವಗಳ ಮೇಲೆ 30,000 ರೂಪಾಯಿಗೂ ಅಧಿಕ ಮೌಲ್ಯದ ರಿವಾರ್ಡ್‌ಗಳು ಹಾಗೂ ಆಫರ್‌ಗಳನ್ನು ಪಡೆಯಬಹುದು.
ಏರ್‌ಟೆಲ್ ಇನ್‌ಸೈಡರ್ ಪರಿಕಲ್ಪನೆಯ ಹಿಂದಿನ ಉದ್ದೇಶ ಸಿಂಪಲ್. ಏರ್‌ಟೆಲ್ ಗ್ರಾಹಕರಾಗಿರುವುದರಿಂದ ಕೇವಲ ಸಂಪರ್ಕದಲ್ಲಿರುವುದಕ್ಕಿಂತ ಹೆಚ್ಚಿನ ಮೌಲ್ಯಯುತ ಪ್ರಯೋಜನಗಳು ಸಿಗಬೇಕು ಎಂಬುದೇ ಇದರ ಆಶಯ. ಡ್ಯುಯೆಲ್ ಲಿಂಗೋ ಮೂಲಕ ಹೊಸ ಭಾಷೆ ಕಲಿಯುವುದಾಗಲಿ, ಕ್ರೋಮಾ ಮಳಿಗೆಯಲ್ಲಿ ಗ್ಯಾಜೆಟ್‌ಗಳನ್ನು ಖರೀದಿಸುವುದಾಗಲಿ, ಸಿನೆಪೊಲಿಸ್‌ನಲ್ಲಿ ಸಿನಿಮಾ ವೀಕ್ಷಿಸುವುದಾಗಲಿ ಅಥವಾ ಪಾಕೆಟ್ ಎಫ್‌ಎಂನಲ್ಲಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಲಿಸುವುದಾಗಲಿ ಗ್ರಾಹಕರು ತಮ್ಮ ಆಸಕ್ತಿ ಮತ್ತು ಅಗತ್ಯಗಳಿಗೆ ತಕ್ಕಂತಹ ಪ್ರಯೋಜನಗಳನ್ನು ಇಲ್ಲಿ ಕಂಡುಕೊಳ್ಳಬಹುದು.
ಪ್ರಸ್ತುತ ಲಭ್ಯವಿರುವ ಎಲ್ಲಾ ಆಫರ್‌ಗಳನ್ನು ಬಳಸಿಕೊಳ್ಳುವ ಮೂಲಕ ಗ್ರಾಹಕರು 30,000 ರೂಪಾಯಿಗೂ ಅಧಿಕ ಮೌಲ್ಯದ ರಿವಾರ್ಡ್‌ಗಳನ್ನು ಅನ್‌ಲಾಕ್ ಮಾಡಬಹುದು. ಹೊಸದನ್ನು ಕಲಿಯುವುದರಿಂದ ಮತ್ತು ತಮ್ಮ ಗ್ಯಾಜೆಟ್‌ಗಳನ್ನು ಅಪ್‌ಗ್ರೇಡ್ ಮಾಡುವುದರಿಂದ ಹಿಡಿದು ತಮ್ಮ ಮುಂದಿನ ಪ್ರವಾಸವನ್ನು ಯೋಜಿಸುವ ಅಥವಾ ಹೊರಗೆ ಊಟವನ್ನು ಆನಂದಿಸುವವರೆಗೆ, ಏರ್‌ಟೆಲ್ ಇನ್‌ಸೈಡರ್ ಗ್ರಾಹಕರಿಗೆ ತಮ್ಮ ದೈನಂದಿನ ಖರ್ಚಿನಿಂದ ಗರಿಷ್ಠ ಪ್ರಯೋಜನ ಪಡೆಯಲು ಹೆಚ್ಚಿನ ಹಲವು ದಾರಿಗಳನ್ನು ನೀಡುತ್ತದೆ.
ಇದನ್ನು ಬಳಸಲು ಆರಂಭಿಸುವುದು ತುಂಬಾ ಸುಲಭ. ಅರ್ಹ ಏರ್‌ಟೆಲ್ ಮೊಬೈಲ್ ಮತ್ತು ಏರ್‌ಟೆಲ್ ಹೋಮ್ ಗ್ರಾಹಕರು ಏರ್‌ಟೆಲ್ ಆ್ಯಪ್ ತೆರೆದು, ಏರ್‌ಟೆಲ್ ಇನ್‌ಸೈಡರ್ ವಿಭಾಗಕ್ಕೆ ಭೇಟಿ ನೀಡಿ ಲಭ್ಯವಿರುವ ಆಫರ್‌ಗಳನ್ನು ವೀಕ್ಷಿಸಬಹುದು. ಅವರು ತಮಗೆ ಆಸಕ್ತಿಯಿರುವ ಪ್ರಯೋಜನಗಳನ್ನು ಆಯ್ಕೆ ಮಾಡಿ, ಆಫರ್ ನಿಯಮಗಳ ಪ್ರಕಾರ ಅವುಗಳನ್ನು ಪಡೆಯಬಹುದು.
ಏರ್‌ಟೆಲ್ ಇನ್‌ಸೈಡರ್ ಈ ಹಿಂದೆಯೂ ಪ್ರಮುಖ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, ಗ್ರಾಹಕರಿಗೆ ಲಿಂಕ್ಡ್‌ಇನ್ ಪ್ರೀಮಿಯಂ ಚಂದಾದಾರಿಕೆ, ಈಸಿಡೈನರ್ ಮತ್ತು ಮೇಕ್‌ಮೈಟ್ರಿಪ್ ಸದಸ್ಯತ್ವದಂತಹ ಹಲವು ಸೌಲಭ್ಯಗಳನ್ನು ಒದಗಿಸಿದೆ. ಏರ್‌ಟೆಲ್ ಇನ್‌ಸೈಡರ್ ಮುಂದೆಯೂ ಈ ವೇದಿಕೆಗೆ ಹೆಚ್ಚಿನ ಬ್ರ್ಯಾಂಡ್‌ಗಳು ಮತ್ತು ಆಫರ್‌ಗಳನ್ನು ತರುವುದನ್ನು ಮುಂದುವರಿಸಲಿದೆ ಎಂದಿದೆ. ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಒದಗಿಸಲಿದೆ. ಗ್ರಾಹಕರೊಂದಿಗಿನ ಸಂಬಂಧಕ್ಕೆ ಮೌಲ್ಯವನ್ನು ಸೇರಿಸುವ ಮತ್ತು ಏರ್‌ಟೆಲ್ ಸಂಪರ್ಕವನ್ನು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಲಾಭದಾಯಕವಾಗಿಸುವ ಏರ್‌ಟೆಲ್‌ನ ಮತ್ತೊಂದು ಪ್ರಯತ್ನ ಇದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ