
ನವದೆಹಲಿ(ಸೆ.29): ಸದಾ ಕಾಲು ಕೆರೆದು ನಿಂತಿರುವ ಚೀನಾಗೆ ಅದೇ ಭಾಷೆಯಲ್ಲಿ ಉತ್ತರ ನೀಡಲು ಭಾರತೀಯ ಸೇನೆ ಸಜ್ಜಾಗಿದೆ. ಲಡಾಖ್ ಪ್ರಾಂತ್ಯದಲ್ಲಿನ ಬೆಳವಣೆಗೆ ಅಹಿತಕವಾಗಿದ್ದು, ವಾಯು ಸೇನೆ ಎಲ್ಲ ಸಂದರ್ಭ ಎದುರಿಸಲು ಸಜ್ಜಾಗಿದೆ ಎಂದು ಭಾರತೀಯ ವಾಯು ಸೇನೆ ಮುಖ್ಯಸ್ಥ ಆರ್‌ಕೆಎಸ್ ಬದೌರಿಯಾ ಹೇಳಿದ್ದಾರೆ.
ಲಡಾಖ್ ಬೆನ್ನಲ್ಲೇ ಪಾಕಿಸ್ತಾನ ಗಡಿ ಬಳಿ ತೇಜಸ್ ಯುದ್ದ ವಿಮಾನ ನಿಯೋಜಿಸಿದ IAF!
ಮುಂಬರುವ ದಿನಗಳಲ್ಲಿ ವಾಯುಸೇನೆ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಗೆಲುವು ನಿರ್ಧರಿಸುವುದೇ ವಾಯುಸೇನೆ. ಇದೀಗ ಭಾರತದ ವಾಯುಸೇನೆಗೆ ರಾಫೆಲ್ ಯುದ್ಧವಿಮಾನ, ಚಿನೂಕ್, ಅಪಾಚೆ ಸೇರಿತಂದೆ ಅತ್ಯಾಧುನಿಕ ಚಾಪರ್ ಸೇರಿಕೊಂಡಿವೆ. ಹಿಂದೆಂದಿಗಿಂತೂ ಭಾರತ ವಾಯುಸೇನೆ ಬಲಿಷ್ಠವಾಗಿದೆ ಎಂದು ಬದೌರಿಯಾ ಹೇಳಿದರು.
ಮಿಗ್ 21 ಮೂಲಕ ಗಡಿಯಲ್ಲಿ IAF ಮುಖ್ಯಸ್ಥ RKS ಬದೌರಿಯಾ ಹಾರಾಟ; ಸಿದ್ಧತೆ ಪರಿಶೀಲನೆ!.
ಚಳಿಗಾಲ ಸನಿಹವಾಗುತ್ತಿದೆ. ಇದೀಗ ಲಡಾಖ್ ಪ್ರಾಂತ್ಯದಲ್ಲಿ ಪಹರೆ ಅತ್ಯಂತ ಸವಾಲಾಗಿದೆ. ಆದರೆ ಭಾರತೀಯ ಸೇನೆ ಈಗಾಗಲೇ ಗಡಿ ಭಾಗಕ್ಕೆ ಯುದ್ಧ ಶಸ್ತ್ರಾಸ್ತ್ರ, ಮದ್ದುಗುಂಡುಗಳು, ಆಹಾರ ಸೇರಿದಂತೆ ಎಲ್ಲಾ ಪೂರೈಕೆ ಮಾಡಲಾಗಿದೆ.
ಚೀನಾದ ಅಪ್ರಚೋದಿತ ದಾಳಿಗಳಿಂದ ಗಡಿಯಲ್ಲಿ ಅಹಿತಕರ ಘಟನೆ ನಿರ್ಮಾಣವಾಗಿದೆ. ಭಾರತ ಶಾಂತಿ ಬಯಸುತ್ತದೆ. ಇದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಭಾರತ ಮಾಡಲಿದೆ. ಮಾತುಕತೆಗೆ ಮೊದಲ ಆದ್ಯತೆ ನೀಡಲಿದೆ. ಆದರೆ ಚೀನಾದ ಅತಿಕ್ರಮಣ ಪ್ರವೇಶದಿಂದ ಶಾಂತಿಯೂ ಇಲ್ಲ, ಯುದ್ಧ ನಮ್ಮ ಆಯ್ಕೆಯೂ ಅಲ್ಲ ಎಂದು ಬದೌರಿಯಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ