ಏರಿಂಡಿಯಾದ ಆಯ್ದ ಸಿಬ್ಬಂದಿಗೆ 5 ವರ್ಷ ವೇತನ ರಹಿತ ರಜೆ!

By Suvarna News  |  First Published Jul 16, 2020, 11:47 AM IST

ಕೊರೋನಾದಿಂದ ಉಂಟಾಗಿರುವ ಮಹಾನಷ್ಟಕ್ಕೆ ಬೆಚ್ಚಿ ಬಿದ್ದಿರುವ ಏರ್‌ ಇಂಡಿಯಾ ವಿಮಾನ ಸಂಸ್ಥೆ| ಉದ್ಯೋಗಿಗಳನ್ನು ಬರೋಬ್ಬರಿ 5 ವರ್ಷದಗಳ ವರೆಗೆ ವೇತನ ರಹಿತ ರಜೆಯಲ್ಲಿ ಕಳುಹಿಸಲು ಮುಂದಾ


ನವದೆಹಲಿ(ಜು.16): ಕೊರೋನಾದಿಂದ ಉಂಟಾಗಿರುವ ಮಹಾನಷ್ಟಕ್ಕೆ ಬೆಚ್ಚಿ ಬಿದ್ದಿರುವ ಏರ್‌ ಇಂಡಿಯಾ ವಿಮಾನ ಸಂಸ್ಥೆ, ಹಲವು ಉದ್ಯೋಗಿಗಳನ್ನು ಬರೋಬ್ಬರಿ 5 ವರ್ಷದಗಳ ವರೆಗೆ ವೇತನ ರಹಿತ ರಜೆಯಲ್ಲಿ ಕಳುಹಿಸಲು ಮುಂದಾಗಿದೆ.

ಈ ಬಗ್ಗೆ ಕಂಪನಿಯ ನಿರ್ವಾಹಕ ನಿರ್ದೇಶಕ ರಾಜೀವ್‌ ಬನ್ಸಾಲ್‌ ಅವರಿಗೆ ನಿರ್ದೇಶಕ ಮಂಡಳಿ ಸೂಚನೆ ನೀಡಿದ್ದು, ನೌಕರರನ್ನು ದಕ್ಷತೆ, ಆರೋಗ್ಯ ಹಾಗೂ ಅನಗತ್ಯ ಹೀಗೆ ಮೂರು ವಿಭಾಗಗಳಲ್ಲಿ ವಿಂಗಡಿಸಿ ವರದಿ ನೀಡಬೇಕು ಎಂದು ಹೇಳಿದೆ.

Tap to resize

Latest Videos

undefined

1966ರಲ್ಲಿ ಪತನವಾದ ಏರಿಂಡಿಯಾದಲ್ಲಿದ್ದ 2 ಭಾರತೀಯ ಪತ್ರಿಕೆ ಪತ್ತೆ!

ವರದಿ ಆಧರಿಸಿ ನೌಕರರನ್ನು ಆರು ತಿಂಗಳಿನಿಂದ ಹಿಡಿದು ಎರಡು ವರ್ಷಗಳ ವರೆಗೆ ರಜೆಯಲ್ಲಿ ಕಳುಹಿಸಲಾಗುದು. ಇದನ್ನು ಐದು ವರ್ಷದ ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಇಲಾಖೆ ಮುಖ್ಯಸ್ಥರು ಹಾಗೂ ಪ್ರಾದೇಶಿಕ ನಿರ್ದೇಶಕರು ನೌಕರರನ್ನು ಈ ಮೇಲಿನ ಮಾನದಂಡಗಳ ಮೂಲಕ ಅಳೆದು ವರದಿ ಸಲ್ಲಿಸಲಿದ್ದಾರೆ. ವರದಿ ಆಧಾರದಲ್ಲಿ ನೌಕರರ ವೇತನ ರಹಿತ ರಜೆಯ ಅವಧಿ ನಿರ್ಣಯವಾಗಲಿದೆ.

click me!