12 ಗಂಟೆಯಿಂದಲೂ ಮಂಗೋಲಿಯಾ ಏರ್‌ಪೋರ್ಟ್‌ಲ್ಲಿ ಸಿಲುಕಿದ್ದ ಪ್ರಯಾಣಿಕರ ಕರೆತರಲಿರುವ ಏರ್ ಇಂಡಿಯಾ

Published : Nov 04, 2025, 07:03 PM ISTUpdated : Nov 04, 2025, 07:04 PM IST
Air India

ಸಾರಾಂಶ

ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ತೊಂದರೆಯ ಅನುಮಾನದಿಂದ ಮಂಗೋಲಿಯಾದ ಉಲಾನ್‌ಬತಾರ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಇದರಿಂದಾಗಿ 228 ಪ್ರಯಾಣಿಕರು 12 ಗಂಟೆಗಳ ಕಾಲ ಅಲ್ಲಿ ಸಿಲುಕಿದ್ದಾರೆ.

ತಾಂತ್ರಿಕ ತೊಂದರೆಯ ಬಳಿಕ ವಿಮಾನ ತುರ್ತು ಲ್ಯಾಂಡಿಂಗ್

ಭಾನುವಾರ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮಂಗೋಲಿಯಾದ ಉಲಾನ್‌ಬತಾರ್‌ನಲ್ಲಿ ತಾಂತ್ರಿಕ ತೊಂದರೆಯ ಅನುಮಾನದ ಹಿನ್ನೆಲೆ ತುರ್ತು ಲ್ಯಾಂಡ್ ಆಗಿತ್ತು. ಹೀಗಾಗಿ ದೆಹಲಿ ತಲುಪಬೇಕಿದ್ದ ಏರ್ ಇಂಡಿಯಾದಲ್ಲಿದ್ದ 228 ಪ್ರಯಾಣಿಕರು ಹಾಗೂ ಸಿಬ್ಬಮದಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ 12ಗಂಟೆಗೂ ಅಧಿಕ ಕಾಲ ಸಿಲುಕುವಂತಾಗಿದೆ. ಈಗ ಅವರನ್ನು ಭಾರತಕ್ಕೆ ಕರೆತರಲು ಏರ್ ಇಂಡಿಯಾದ ಮತ್ತೊಂದು ವಿಮಾನವನ್ನು ಕಳುಹಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಘೋಷಿಸಿದೆ. ಈ ವಿಮಾನದಲ್ಲಿದ್ದ ಪ್ರಯಾಣಿಕರು 12 ಗಂಟೆಗಳಿಗೂ ಹೆಚ್ಚು ಕಾಲ ಉಲಾನ್‌ಬತಾರ್‌ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು ಮತ್ತು ಅವರನ್ನು ಕರೆತರಲು ಮತ್ತೊಂದು ಏರ್ ಇಂಡಿಯಾ ವಿಮಾನ ಅಲ್ಲಿಗೆ ತಲುಪಲಿದೆ. ಮಧ್ಯಾಹ್ನದ ನಂತರ ದೆಹಲಿಯಿಂದ ಹೊರಟ ಏರ್ ಇಂಡಿಯಾ ವಿಮಾನ ಅಲ್ಲಿ ಸಿಲುಕಿದ ಪ್ರಯಾಣಿಕರನ್ನು ಕರೆದುಕೊಂಡು ಬರಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಏರ್ ಇಂಡಿಯ ವಕ್ತಾರರು ಮಾಹಿತಿ ನೀಡಿದ್ದಾರೆ.

ಮಂಗೋಲಿಯಾದ ಉಲಾನ್‌ಬತಾರ್ ಏರ್‌ಪೋರ್ಟ್‌ನಲ್ಲಿ ಸಿಲುಕಿದ 228 ಪ್ರಯಾಣಿಕರು

ಸೋಮವಾರ ಉಲಾನ್‌ಬತಾರ್‌ನಲ್ಲಿ ತುರ್ತು ಲ್ಯಾಂಡ್ ಆಗಿದ್ದ AI174 ವಿಮಾನದ ನವೆಂಬರ್ 02 ರಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ ಬರುತ್ತಿತ್ತು. ಈ ವಿಮಾನದ ಪ್ರಯಾಣಿಕರನ್ನು ಕರೆದೊಯ್ಯಲು ಏರ್ ಇಂಡಿಯಾ ಪರಿಹಾರ ವಿಮಾನವನ್ನು ಕಳುಹಿಸಿದೆ. AI183 ಸಂಖ್ಯೆಯ ಏರ್ ಇಂಡಿಯಾ ವಿಮಾನವು ಇಂದು ಮಧ್ಯಾಹ್ನ ದೆಹಲಿಯಿಂದ ಹೊರಟು ಬುಧವಾರ ಬೆಳಗ್ಗೆ ಅಲ್ಲಿಂದ ತೊಂದರೆಗೊಳಗಾದ ಪ್ರಯಾಣಿಕರೊಂದಿಗೆ ಹಿಂತಿರುಗಲಿದೆ. ಹೀಗೆ ತೊಂದರೆಗೆ ಸಿಲುಕಿದ ಪ್ರಯಾಣಿಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಏರ್ ಇಂಡಿಯಾ, ಸ್ಥಳೀಯ ಅಧಿಕಾರಿಗಳು ಮತ್ತು ಮಂಗೋಲಿಯಾದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಹೋಟೆಲ್ ವಸತಿ ಸೇರಿದಂತೆ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ನೋಡಿಕೊಳ್ಳುತ್ತಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣಿಕರ ಕರೆ ತರಲು ವಿಮಾನ ಕಳುಹಿಸಿದ ಏರ್ ಇಂಡಿಯಾ

ಪ್ರಯಾಣಿಕರನ್ನು ದೆಹಲಿಗೆ ವಿಮಾನದಲ್ಲಿ ಕರೆದೊಯ್ಯಲು ಮಾಡಲಾಗುತ್ತಿರುವ ವ್ಯವಸ್ಥೆಗಳ ಬಗ್ಗೆ ಅವರಿಗೆ ತಿಳಿಸಲಾಗಿದೆ ಎಂದು ಅದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ. ಏರ್ ಇಂಡಿಯಾದಲ್ಲಿ ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ.

ಹಾಗೆಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಂಗೋಲಿಯಾದ ಭಾರತೀಯ ರಾಯಭಾರ ಕಚೇರಿಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 228 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವಲಸೆ ಮತ್ತು ಹೋಟೆಲ್ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ರಾಯಭಾರ ಕಚೇರಿಯ ಅಧಿಕಾರಿಗಳ ತಂಡವನ್ನು ವಿಮಾನ ನಿಲ್ದಾಣದಲ್ಲಿ ತಕ್ಷಣವೇ ನಿಯೋಜಿಸಲಾಗಿದೆ.

ರಾಯಭಾರ ಕಚೇರಿಯ ಕಾನ್ಸುಲರ್ ತಂಡದ ಸಹಾಯದಿಂದ, ಎಲ್ಲಾ ವಲಸೆ ಮತ್ತು ವೀಸಾ ಸೌಲಭ್ಯ, ಸಾರಿಗೆ, ಹೋಟೆಲ್ ವಸತಿ ಇತ್ಯಾದಿಗಳನ್ನು ಮಂಗೋಲಿಯನ್ ಅಧಿಕಾರಿಗಳೊಂದಿಗೆ ಸಮನ್ವಯದಿಂದ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರನ್ನುಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಅದು ಎಕ್ಸ್‌ನನಲ್ಲಿ ಬರೆದಿದೆ. ಮಂಗಳವಾರ ರಾತ್ರಿಯ ನಂತರ ಪ್ರಯಾಣಿಕರು ಭಾರತಕ್ಕೆ ಮರಳಲಿದ್ದಾರೆ ಎಂದು ರಾಯಭಾರ ಕಚೇರಿ ಬರೆದುಕೊಂಡಿದೆ.

ಏರ್ ಇಂಡಿಯಾ ವಿಮಾನವನ್ನು ಮಂಗೋಲಿಯಾಕ್ಕೆ ತಿರುಗಿಸಿದ್ದೇಕೆ?

ಭಾನುವಾರ ನವೆಂಬರ್ 2 ರಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದ ಸಿಬ್ಬಂದಿಗೆ ಮಾರ್ಗಮಧ್ಯೆ ತಾಂತ್ರಿಕ ಸಮಸ್ಯೆ ಇದೆ ಎಂದು ಅನುಮಾನ ಬಂದ ಕಾರಣ ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಇಳಿಸಲಾಯ್ತು. ಈ ವಿಮಾನವೂ ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತ್ತಾ ಮೂಲಕ ದೆಹಲಿಗೆ ಆಗಮಿಸುತಿತ್ತು.

ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಅಶೋಕ್ ಲೇಲ್ಯಾಂಡ್ ಮೇಲೆತ್ತಿದ್ದ ಹಿಂದೂಜಾ ಗ್ರೂಪ್ ಅಧ್ಯಕ್ಷ ಗೋಪಿಚಂದ್ ಇನ್ನಿಲ್ಲ

ಇದನ್ನೂ ಓದಿ: ನಿನಗಾಗಿ ಹೆಂಡ್ತಿ ಕೊಂದೇ: ಒಂದೇ ಮೆಸೇಜ್‌ 4-5 ಹೆಂಗಸರಿಗೆ ಕಳುಹಿಸಿದ್ದ ಸ್ತ್ರೀಲೋಲ ಡಾ. ಮಹೇಂದ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ