ಏರ್‌ ಇಂಡಿಯಾ ಸಂಸ್ಥೆ ಮಾರಾಟಕ್ಕಿಟ್ಟಿದ್ದರೂ ಖರೀದಿದಾರರೇ ಸಿಗ್ತಿಲ್ಲ!

By Suvarna News  |  First Published Dec 24, 2019, 9:59 AM IST

ವಿಮಾನಯಾನ ಸಂಸ್ಥೆ ದೀರ್ಘಕಾಲದಿಂದ ಭಾರೀ ನಷ್ಟ | ಏರಿಂಡಿಯಾದ ಸಂಪೂರ್ಣ ಪಾಲು ಖಾಸಗಿಗೆ ಮಾರಾಟ ಮಾಡಲು ಕೇಂದ್ರ ನಿರ್ಧಾರ | 


ನವದೆಹಲಿ (ಡಿ. 24): ತನ್ನ ಹಲವು ಯತ್ನಗಳ ಹೊರತಾಗಿಯೂ, ತೀವ್ರ ನಷ್ಟದ ಸುಳಿಗೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಏರಿಂಡಿಯಾ ವಿಮಾನ ಸಂಸ್ಥೆಯನ್ನು ಮಾರಾಟ ಮಾಡುವುದು ಕೇಂದ್ರ ಸರ್ಕಾರಕ್ಕೆ ದುಸ್ತರವಾಗಿ ಪರಿಣಮಿಸಿದೆ.

‘ಮಹಾರಾಜ’ನ ಮಾರಾಟ! ಸತತ ನಷ್ಟದಲ್ಲಿರುವ ಏರ್‌ಇಂಡಿಯಾವನ್ನು ಖರೀದಿಸುವವರು ಯಾರು?

Tap to resize

Latest Videos

ಏರ್‌ ಇಂಡಿಯಾ ವಿಮಾನ ಸಂಸ್ಥೆಯ ಖರೀದಿಗೆ ಹೂಡಿಕೆದಾರರ ಆಸಕ್ತಿ ಪರಿಶೀಲನೆಗಾಗಿ ಸಿಂಗಾಪುರ ಮತ್ತು ಲಂಡನ್‌ನಲ್ಲಿ ರೋಡ್‌ ಶೋಗಳನ್ನು ಏರ್ಪಡಿಸಲಾಗಿತ್ತು. ಆದರೆ, ವಿಮಾನ ಸಂಸ್ಥೆಯ ಖರೀದಿ ಕುರಿತು ಹೂಡಿಕೆದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಗೊತ್ತಿರುವ ಸರ್ಕಾರದ ಹಿರಿಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಏರಿಂಡಿಯಾದ ಸಂಪೂರ್ಣ ಪಾಲು ಖಾಸಗಿಗೆ ಮಾರಾಟ ಮಾಡಲು ಕೇಂದ್ರ ನಿರ್ಧಾರ!

ಆದಾಗ್ಯೂ, ಏರ್‌ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಸರ್ಕಾರದ ಪ್ರಯತ್ನಕ್ಕೆ ಯಾವುದೇ ಹಿನ್ನಡೆಯಾಗಿಲ್ಲ ಎಂದೂ ಅವರು ಇದೇ ವೇಳೆ ತಿಳಿಸಿದ್ದಾರೆ.

 

click me!