ಕೆನಡಾದಲ್ಲಿ ಆಶ್ರಯ ಪಡೆದಿದ್ದ ಖಲಿಸ್ತಾನಿ ಉಗ್ರ, ಭಾರತಕ್ಕೇ ಮೋಸ್ಟ್ ವಾಂಟೆಡೆ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತ ಕೈವಾಡವಿದೆ ಅನ್ನೋ ಕೆನಡಾ ಆರೋಪಕ್ಕೆ ಜೈಶಂಕರ್ ಖಡಕ್ ಉತ್ತರ ನೀಡಿದ್ದಾರೆ. ಸಚಿವರ ಮಾತಿಗೆ ಕನಡಾ ಬೆತ್ತಲಾಗಿದೆ.
ಭುವನೇಶ್ವರ್(ಮೇ.05) ಕೆನಾಡದಲ್ಲಿ ಹತ್ಯೆಯಾದ ಹರ್ದೀಪ್ ಸಿಂಗ್ ನಿಜ್ಜರ್ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ.ಕೆನಡಾ ತನಿಖಾ ಏಜೆನ್ಸಿಗಳು ನಿಜ್ಜರ್ ಹತ್ಯೆ ಆರೋಪದಡಿ ಮೂವರು ಭಾರತೀಯ ಮೂಲದವರನ್ನು ಕೆನಡಾದಲ್ಲಿ ಅರೆಸ್ಟ್ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಕೆನಡಾ ನಾಟಕವನ್ನು ಬಯಲು ಮಾಡಿದ್ದಾರೆ. ನಿಜ್ಜರ್ ಹತ್ಯೆಯಲ್ಲಿ ಭಾರತ ಕೈವಾಡವಿದೆ ಅನ್ನೋ ಕೆನಾಡ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ. ಕಳೆದೊಂದು ವರ್ಷದಿಂದ ಕೆನಾಡ ಸರ್ಕಾರ ಭಾರತದ ಮೇಲೆ ಆರೋಪ ಮಾಡುತ್ತಲೇ ಇದೆ. ಆದರೆ ಒಂದೇ ಒಂದು ಸಾಕ್ಷ್ಯ ಒದಗಿಸಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಾಡಾ ತನಿಖಾ ಎಜೆನ್ಸಿ, ಗ್ಯಾಂಗ್‌ಸ್ಟರ್ ಕರಣ್ ಬ್ರಾರ್, ಕಮಲಪ್ರೀತ್ ಸಿಂಗ್ ಹಾಗೂ ಕರಣಪ್ರೀತ್ ಸಿಂಗ್ ಅರೆಸ್ಟ್ ಮಾಡಿದೆ. ಇದೀಗ ಅರೆಸ್ಟ್ ಆಗಿರುವ ಮೂವರಿಗೆ ಭಾರತ ಎಜೆನ್ಸಿಗಳ ಜೊತೆ ಸಂಬಂಧವಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಈ ಬಂಧನ ಕುರಿತು ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ನಿಜ್ಜರ್ ಹತ್ಯೆ ಹಾಗೂ ಅದರ ತನಿಖಾ ಭಾಗವಾಗಿ ಆಗಿರುವ ಅರೆಸ್ಟ್ ಕೆನಡಾದ ಆಂತರಿಕ ವಿಚಾರ. ಕೆನಡಾದ ಆಂತರಿಕ ವಿಚಾರದಲ್ಲಿ ಭಾರತ ಮೂಗು ತೂರಿಸುವುದಿಲ್ಲ ಎಂದಿದ್ದಾರೆ.
ವಿದೇಶಾಂಗ ಸಚಿವ ಜೈಶಂಕರ್‌ಗೆ ಭದ್ರತೆ ಹೆಚ್ಚಿಸಿದ ಕೇಂದ್ರ ಸರ್ಕಾರ, Y ಕೆಟಗರಿಯಿಂದ Z ಸೆಕ್ಯೂರಿಟಿ!
ಕೆನಾಡ ಕಳೆದೊಂದು ವರ್ಷದಿಂದ ಸತತವಾಗಿ ಭಾರತದ ಮೇಲೆ ಆರೋಪ ಹೊರಿಸುತ್ತಿದೆ. ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಅನ್ನೋ ಆರೋಪವನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಇದಕ್ಕೆ ಪೂರಕವಾಗಿ ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ. ಭಾರತ ಸರ್ಕಾರ ಅಧಿಕೃತವಾಗಿ ದಾಖಲೆ ಹಾಗೂ ಸಾಕ್ಷ್ಯ ಒದಗಿಸುವಂತೆ ಕೆನಾಡಗೆ ಕೇಳಿಕೊಂಡಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಸದ್ಯ ಬಂಧಿತವಾಗಿರುವ ಮೂವರು ಭಾರತೀಯ ಮೂಲದವರಾಗಿದ್ದು, ಕೆನಾಡದಲ್ಲಿ ನೆಲಸಿದ್ದರು. ಇವರಿಗೆ ಕೆಲ ಗ್ಯಾಂಗ್ ಹಿನ್ನಲೆಯಿದೆ. ಈ ಕುರಿತು ಕೆನಡಾ ತನಿಖಾ ಎಜೆನ್ಸಿಗಳು, ಪೊಲೀಸರು ಸಾಕ್ಷ್ಯ ನೀಡಬೇಕಿದೆ. ಭಾರತ ಈ ವರದಿಗಾಗಿ ಕಾಯುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಭಾರತದ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಗೈರಾಗಿದ್ದೇಕೆ? ಸಚಿವ ಜೈಶಂಕರ್ ಜೊತೆ ವಿಶೇಷ ಸಂದರ್ಶನ!
2023ರ ಜೂನ್ ತಿಂಗಳಲ್ಲಿ ಕೆನಡಾದ ಸರೆಯಲ್ಲರುವ ಗುರುದ್ವಾರದ ಹೊರಭಾಗದಲ್ಲಿ ನಿಜ್ಜರ್ ಹತ್ಯೆ ನಡೆದಿತ್ತು. ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ನಿಜ್ಜರ್ ಹತ್ಯೆಯಾಗಿತ್ತು. ಭಾರತ ರಾ ಎಜೆನ್ಸಿ ಈ ಹತ್ಯೆ ಮಾಡಿಸಿದೆ ಎಂದು ಕೆನಡಾ ಆರೋಪಿಸಿತ್ತು.