ಏರ್ ಇಂಡಿಯಾ ಖಾಸಗೀಕರಣ; ಪ್ರಧಾನಿ,VVIP ಪ್ರಯಾಣ, ಹಜ್ ಯಾತ್ರೆ ಹೇಗೆ? ಹಲವು ಪ್ರಶ್ನೆಗೆ ಇಲ್ಲಿದೆ ಉತ್ತರ!

By Suvarna News  |  First Published Oct 9, 2021, 7:08 PM IST
  • ನಷ್ಟದಲ್ಲಿದ್ದ ಏರ್ ಇಂಡಿಯಾ ಸರ್ಕಾರಿ ವಿಮಾನ ಸಂಸ್ಥೆ ಮಾರಾಟ
  • ಏರ್ ಇಂಡಿಯಾ ಖರೀದಿಸಿದ ಟಾಟಾ ಗ್ರೂಪ್, ಸರ್ಕಾರಿ ವಿಮಾನ ಇನ್ನು ಖಾಸಗಿ
  • ಖಾಸಗೀಕರಣದಿಂದ ಪ್ರಧಾನಿ, ರಾಷ್ಟ್ರಪತಿ ಪ್ರಯಾಣ ಹೇಗೆ?
  • ಹಜ್ ಸಬ್ಸಡಿ ಯಾತ್ರೆ ಹೇಗೆ ಸಾಧ್ಯ? ಹಲವು ಗೊಂದಲಕ್ಕೆ ಉತ್ತರ
     

ನವದೆಹಲಿ(ಅ.09): ಭಾರತದ ಸರ್ಕಾರಿ ವಿಮಾನಯಾನ ಸಂಸ್ಥೆ ಇದೀಗ ಖಾಸಗೀಕರಣಗೊಂಡಿದೆ(Privatisation). ಬರೋಬ್ಬರಿ 61 ಸಾವಿರ ಕೋಟಿ ರೂಪಾಯಿ ಸಾಲದಲ್ಲಿದ್ದ ಸಂಸ್ಥೆಯನ್ನು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ ಬಹುದೊಡ್ಡ ಆರ್ಥಿಕ ಹೊರೆಯಿಂದ ಹೊರಬಂದಿದೆ. 68 ವರ್ಷಗಳ ಬಳಿಕ ಏರ್ ಇಂಡಿಯಾ(Air India) ಇದೀಗ ಮತ್ತೆ ಟಾಟಾ ಗ್ರೂಪ್(Tata Sons) ಪಾಲಾಗಿದೆ. ಟಾಟಾ ಸನ್ಸ್ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖರೀದಿಸಿದೆ. ಬೆಳವಣೆಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Tap to resize

Latest Videos

undefined

ಸರ್ಕಾರಿ ವಿಮಾನಯಾನ ಸಂಸ್ಥೆಯಾಗಿದ್ದ ಏರ್ ಇಂಡಿಯಾ ಖಾಸಗೀಕರಣದಿಂದ ಪ್ರಧಾನಿ(PM), ರಾಷ್ಟ್ರಪತಿ(President) ಸೇರಿದಂತೆ ವಿವಿಐಪಿ ಪ್ರಯಾಣ ಹೇಗೆ? ಟಾಟಾ ಸನ್ಸ್ ಮಾಲೀಕತ್ವದ ಏರ್ ಇಂಡಿಯಾದಲ್ಲಿ ವಿವಿಐಪಿಗಳು ಪ್ರಯಾಣಿಸಬೇಕಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ ಈ ಪ್ರಶ್ನಗೆ ಉತ್ತರ ಸಿಕ್ಕಿದೆ.  ಏರ್ ಇಂಡಿಯಾ ಖಾಸಗೀಕರಣದಿಂದ ಪ್ರಧಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಪ್ರಯಾಣ ಖಾಸಗಿ ವಿಮಾನದಲ್ಲಿ ಆಗುವುದಿಲ್ಲ. ಕಾರಣ ವಿವಿಐಪಿ ಪ್ರಯಾಣಕ್ಕೆ ಭಾರತ 3 ಬೋಯಿಂಗ್ 777 ವಿಮಾನ ಖರೀದಿಸಿದೆ. ಈ ಮೂರು ಏರ್ ಇಂಡಿಯಾ ವಿಮಾನಗಳನ್ನು ಭಾರತೀಯ ವಾಯುಪಡೆ(Indian Air Force) ನಿರ್ವಹಣೆ ಮಾಡುತ್ತಿದೆ. ಇದರ ಪೈಲೆಟ್ ಕೂಡ ನುರಿತ ವಾಯುಪಡೆ ಪೈಲೆಟ್ ಆಗಿರುತ್ತಾರೆ. ಹೀಗಾಗಿ ಈ ಮೂರು ಏರ್ ಇಂಡಿಯಾ ವಿಮಾನಗಳು ಟಾಟಾ ಸನ್ಸ್ ಮಾಲೀಕತ್ವದಲ್ಲಿ ಇರುವುದಿಲ್ಲ.

Air India Sale| ಏರ್‌ ಇಂಡಿಯಾ ಗೆದ್ದ ಟಾಟಾಗೆ ಹೊಸ ಸವಾಲು!

ಕೊರೋನಾ ಸಂದರ್ಭದಲ್ಲಿ ವಿದೇಶದಲ್ಲಿರುವ ಭಾರತೀಯರ ರಕ್ಷಣೆಗೆ ವಂದೆ ಭಾರತ್ ಮಿಷನ್(Vande Bharat) ಅಡಿ ಏರ್ ಇಂಡಿಯಾ ಹಗಲು ರಾತ್ರಿ ಕಾರ್ಯನಿರ್ವಹಿಸಿತ್ತು. ಈ ರೀತಿಯ ಸಂದರ್ಭ ಬಂದರೆ ಸರ್ಕಾರ ವಿದೇಶದಲ್ಲಿರುವ ರಕ್ಷಣೆ ಹೇಗೆ ಮಾಡಲು ಸಾಧ್ಯ ಅನ್ನೋ ಪ್ರಶ್ನೆ ಹುಟ್ಟುಕೊಂಡಿತ್ತು. ವಂದೇ ಭಾರತ್ ಮಿಷನ್ ಅಡಿ ವಿದೇಶದಲ್ಲಿರುವ ಭಾರತೀಯ ರಕ್ಷಣೆ ಮಾಡಿದ ಏರ್ ಇಂಡಿಯಾಗೆ ಕೇಂದ್ರ ಸರ್ಕಾರ ಇಂತಿಷ್ಟು ಹಣ ಬಿಡುಗಡೆ ಮಾಡಿದೆ. ಇದೀಗ ಈ ರೀತಿಯ ಸಂದರ್ಭ ಬಂದರೆ ಖಾಸಗಿ ವಿಮಾನವನ್ನು ಸರ್ಕಾರ ಬಳಸಿಕೊಳ್ಳಲಿದೆ.

ಖಾಸಗೀಕರಣದಿಂದ ಏರ್ ಇಂಡಿಯಾ ಬ್ರ್ಯಾಂಡ್‌ನಲ್ಲಿ ಬದಲಾವಣೆ ಆಗಲಿದೆಯಾ? ಟಾಟಾ ಸನ್ಸ್ ಏರ್ ಇಂಡಿಯಾ ಖರೀದಿಸಿದೆ. ಆದರೆ ಹೆಸರಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಏರ್ ಇಂಡಿಯಾ ಹೆಸರಿನಲ್ಲೇ ವಿಮಾನಯಾನ ಸಂಸ್ಥೆ ಕಾರ್ಯನಿರ್ವಹಿಸಲಿದೆ.

ಏರ್ ಇಂಡಿಯಾ ಮೂಲಕ ಹಜ್(Haj) ಸಬ್ಸಡಿ ಯಾತ್ರೆ ಭವಿಷ್ಯವೇನು? ಅನ್ನೋ ಪ್ರಶ್ನೆ ಕಳೆದ ಕೆಲ ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಹಜ್ ಯಾತ್ರೆ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಖಾಸಗಿ ವಿಮಾನ ಪ್ರಯಾಣ ಘೋಷಿಸುವ ಸಾಧ್ಯತೆ ಹೆಚ್ಚು. ಆದರೆ ಹಜ್ ಯಾತ್ರೆಗೆ ಸರ್ಕಾರಿ ಆರ್ಥಿಕ ನೆರವು ಮುಂದಿನ ವರ್ಷ ಅಂತ್ಯಗೊಳ್ಳಲಿದೆ. 2012ರಲ್ಲಿ ಸುಪ್ರೀಂ ಕೋರ್ಟ್(Supreme Court) ಹಜ್ ಯಾತ್ರೆ ಸಬ್ಸಿಡಿಯನ್ನು ಮುಂದಿನ 10 ವರ್ಷದಲ್ಲಿ ಅಂತ್ಯಗೊಳಿಸಬೇಕು ಎಂದು ಆದೇಶ ನೀಡಿದೆ.

ಏರ್ ಇಂಡಿಯಾ ಖಾಸಗೀಕರಣದಿಂದ ಏರ್ ಇಂಡಿಯಾ ಕುಟುಂಬಕ್ಕೆ ನೀಡಿದ್ದ ಉಚಿತ ಏರ್ ಇಂಡಿಯಾ ಪ್ರಯಾಣವನ್ನು ನಿರ್ಬಂಧಿಸಲಾಗುತ್ತದೆ. ನಿವೃತ್ತಿ ಉದ್ಯೋಗಿಗಳ ಆರೋಗ್ಯ ವಿಮೆ ಸೇರಿದಂತೆ ಇತರ ಭತ್ಯೆಗಳಲ್ಲಿ ಕೆಲ ಬದಲಾವಣೆಗಳಾಗಲಿವೆ. ನಿವತ್ತ ನೌಕರರ ಆರೋಗ್ಯ ವಿಮೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ವಿಮೆ ಅಥವಾ ಇತರೆ ವಿಮಾ ಕಂಪನಿಗೆ ವರ್ಗಾವಣೆ ಮಾಡಲಾಗುತ್ತದೆ.

click me!