ಏರ್ ಇಂಡಿಯಾ ಎಡವಟ್ಟು: 7 ಗಂಟೆ ಜರ್ನಿ ಬಳಿಕ ವಾಪಸ್ ಬಂದ 300 ಪ್ರಯಾಣಿಕರಿದ್ದ ವಿಮಾನ: ಆದ ನಷ್ಟವೆಷ್ಟು?

Published : Mar 20, 2026, 07:33 PM IST
Air India 787

ಸಾರಾಂಶ

ಏರ್ ಇಂಡಿಯಾದ ಅವಾಂತರವೊಂದು ತಡವಾಗಿ ಬೆಳಕಿಗೆ ಬಂದಿದೆ. 300 ಜನರಿದ್ದ ವಿಮಾನವನ್ನು ತಪ್ಪಾಗಿ ಕೆನಡಾಗೆ ಕಳುಹಿಸಿದ್ದರಿಂದ ಆ ವಿಮಾನವೂ 7 ಗಂಟೆಗಳ ಕಾಲ ನಿರಂತರ ಪ್ರಯಾಣ ಮಾಡಿ ಚೀನಾ ಮೂಲಕ ವಾಪಸ್ ಬಂದಿದ್ದು, ಇದರಿಂದ ಏರ್ ಇಂಡಿಯಾಗೆ ಭಾರಿ ನಷ್ಟ ಉಂಟಾಗಿದೆ.

ಏರ್ ಇಂಡಿಯಾದ ಅವಾಂತರ: 7 ಗಂಟೆಯ ಪ್ರಯಾಣದ ಬಳಿಕ ವಾಪಸ್ ದೆಹಲಿಗೆ ಬಂತು ವಿಮಾನ:

ಏರ್ ಇಂಡಿಯಾದ ಅವಾಂತರವೊಂದು ತಡವಾಗಿ ಬೆಳಕಿಗೆ ಬಂದಿದೆ. 300 ಜನರಿದ್ದ ವಿಮಾನವನ್ನು ತಪ್ಪಾಗಿ ಕೆನಡಾಗೆ ಕಳುಹಿಸಿದ್ದರಿಂದ ಆ ವಿಮಾನವೂ 7 ಗಂಟೆಗಳ ಕಾಲ ನಿರಂತರ ಪ್ರಯಾಣ ಮಾಡಿ ಚೀನಾ ಮೂಲಕ ವಾಪಸ್ ಬಂದಿದ್ದು, ಇದರಿಂದ ಏರ್ ಇಂಡಿಯಾಗೆ ಭಾರಿ ನಷ್ಟ ಉಂಟಾಗಿದೆ. ಏರ್ ಇಂಡಿಯಾ AI-185ಸಂಖ್ಯೆಯ ವಿಮಾನವೊಂದು ದೆಹಲಿಯಿಂದ ಕೆನಡಾದ ವ್ಯಾಂಕೋವರ್‌ಗೆ ಹೊರಟಿತ್ತು. ಆದರೆ ಟೇಕಾಫ್ ಆಗಿ ಸುಮಾರು 7 ಗಂಟೆಗಳ ಪ್ರಯಾಣದ ನಂತರ 300 ಪ್ರಯಾಣಿಕರಿದ್ದ ಈ ವಿಮಾನ ದೆಹಲಿಗೆ ವಾಪಸ್ ಬಂದಿದೆ.

ಬೋಯಿಂಗ್ 777-300 ER ಬದಲು ಕೆನಡಾಗೆ ಹೊರಟ ಬೋಯಿಂಗ್ 777-200 LR 

ಗುರುವಾರ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಬೋಯಿಂಗ್ 777-300 ER ಬದಲಿಗೆ ಬೋಯಿಂಗ್ 777-200 LR ಅನ್ನು ತಪ್ಪಾಗಿ ಬಳಸಿದೆ. ವಾಯುಯಾನ ನಿಯಮಗಳ ಅಡಿಯಲ್ಲಿ, ವಿವಿಧ ದೇಶಗಳಿಗೆ ವಿಭಿನ್ನ ವಿಮಾನ ಮಾದರಿಗಳಿವೆ. ಕೆನಡಾವು ಭಾರತದ ಏರ್ ಇಂಡಿಯಾದ B777-300 ER ಗೆ ಮಾತ್ರ ಅನುಮೋದಿಸಿದೆ, LR ಆವೃತ್ತಿಗೆ ಅನುಮತಿ ನೀಡಿಲ್ಲ, ಈ ವಿಚಾರ ಸುಮಾರು ನಾಲ್ಕು ಗಂಟೆಗಳ ನಂತರ ಪ್ರಯಾಣದ ನಂತರ ವಿಮಾನವು ಚೀನಾದ ಕುನ್ಮಿಂಗ್ ವಾಯುಪ್ರದೇಶವನ್ನು ತಲುಪಿದ ಬಳಿಕವಷ್ಟೇ ಬೆಳಕಿಗೆ ಬಂದಿದೆ. ನಂತರ ವಿಮಾನವು ಅಲ್ಲಿಂದ ತಿರುಗಿ ದೆಹಲಿಗೆ ಬಂದು ಇಳಿದಿದೆ. ಪರಿಣಾಮ ವಿಮಾನವು ಬೆಳಗ್ಗೆ 11:34 ಕ್ಕೆ ದೆಹಲಿಯಿಂದ ಹೊರಟು ಸಂಜೆ 7:19 ಕ್ಕೆ ವಾಪಸ್ ಬಂದಿದೆ. ವಿಮಾನದಲ್ಲಿ 300 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ವರದಿಯಾಗಿದ್ದು, ಇಂದು ಈ ಘಟನೆ ಬೆಳಕಿಗೆ ಬಂದಿದೆ.

ವಿಮಾನ ಹಾರಾಟಕ್ಕೆ ಗಂಟೆಗೆ 9 ಟನ್ ಇಂಧನ, ಸುಮಾರು 60 ಲಕ್ಷ ರೂ. ನಷ್ಟ

ಈ ಘಟನೆಯನ್ನು ಕಾರ್ಯಾಚರಣೆಯ ಸಮಸ್ಯೆ ಎಂದು ವಿವರಿಸಿದ ಏರ್ ಇಂಡಿಯಾ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಪ್ರಯಾಣಿಕರಿಗೆ ಹೋಟೆಲ್ ವಸತಿ ಕಲ್ಪಿಸಿ, ಮರುದಿನ, ಮಾರ್ಚ್ 20 ರಂದು ಬೆಳಗ್ಗೆ ವ್ಯಾಂಕೋವರ್‌ಗೆ ವಿಮಾನದಲ್ಲಿ ಕಳುಹಿಸಲಾಯಿತು ಎಂದು ಎಂದು ಹೇಳಿದೆ. ಈ ತಪ್ಪನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬೋಯಿಂಗ್ 777 ವಿಮಾನವು ಗಂಟೆಗೆ ಸುಮಾರು 8 ರಿಂದ 9 ಟನ್ ಇಂಧನವನ್ನು ಬಳಸುತ್ತದೆ, ಇದರಿಂದಾಗಿ ಈ ದೋಷದಿಂದ ದುಬಾರಿ ನಷ್ಟ ಸಂಭವಿಸಿದೆ.

ಈ ತಪ್ಪನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬೋಯಿಂಗ್ 777 ವಿಮಾನವು ಗಂಟೆಗೆ ಸುಮಾರು 8–9 ಟನ್ ಇಂಧನವನ್ನು ಬಳಸುತ್ತದೆ, ಇದರಿಂದಾಗಿ ಈ ದೋಷವು ದುಬಾರಿಯಾಗುತ್ತದೆ ಎಂದು ವರದಿಯಾಗಿದೆ. ಈಗಿನ ಇಂಧನ ದರಗಳಲ್ಲಿ ಹೇಳುವುದಾದರೆ 8 ಟನ್ ಜೆಟ್ ಇಂಧನಕ್ಕೆ ಗಂಟೆಗೆ ಸುಮಾರು ₹7ರಿಂದ 9 ಲಕ್ಷ ವೆಚ್ಚವಾಗಬಹುದು. ಇದರಿಂದ ಏಳು ಗಂಟೆಗಳಲ್ಲಿ, ವಿಮಾನಯಾನ ಸಂಸ್ಥೆಯು ಇಂಧನಕ್ಕಾಗಿಯೇ ಸುಮಾರು ₹60 ಲಕ್ಷ ಖರ್ಚು ಮಾಡಿದೆ ಎಂದು ಅಂದಾಜಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್‌ನಲ್ಲಿ ಅನಿರೀಕ್ಷಿತ ಬೆಳವಣಿಗೆ, ಮುಖ್ಯ ಹಣಕಾಸು ಅಧಿಕಾರಿ ಶ್ರೀರಾಮ್ ರಾಜೀನಾಮೆ!
ಮೊನಾಲಿಸಾ ಮದುವೆಗೂ ಮುನ್ನ ಭಿಕ್ಷುಕನಿಗಿಂತಲೂ ಕಡೆಯಾಗಿದ್ದ ಫರ್ಮಾನ್ ಖಾನ್; ಹಳೆಯ ವಿಡಿಯೋ ಈಗ ವೈರಲ್!