
ನವದೆಹಲಿ (ಫೆ.28) ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಸತತ ದಾಳಿ ನಡೆಸುತ್ತಿದೆ. ಅಮೆರಿಕ ಯುದ್ಧ ವಿಮಾನಗಳು, ಮಿಸೈಲ್‌ಗಳು ಇರಾನ್ ಟೆಹೆರಾನ್ ಸೇರಿದಂತೆ ಎಲ್ಲಡೆ ಧ್ವಂಸ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ದಾಳಿ ಆರಂಭಿಸಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಅಬುಧಾಬಿ, ಬಹ್ರೈನ್, ಕುವೈತ್ ಸೇರಿದಂತೆ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದೆ. ಇದರ ಪರಿಣಾಮ ಭಾರತದ ಮೇಲೆ ತಟ್ಟಿದೆ. ಮಧ್ಯಪ್ರಾಚ್ಯ ದೇಶಗಳ ಎಲ್ಲಾ ವಿಮಾನ ಸೇವೆಗಳು ರದ್ದಾಗಿದೆ. ಏರ್ ಇಂಡಿಯಾ ಹಾಗೂ ಇಂಡೋಗೋ ತನ್ನ ಎಲ್ಲಾ ಮಧ್ಯಪ್ರಾಚ್ಯ ದೇಶಗಳ ವಿಮಾನ ಸೇವೆ ರದ್ದುಗೊಳಿಸಿದೆ.
ಯುನೈಟೆಡ್ ಅರಬ್ ಎಮಿರೈಟ್ಸ್, ಬಹ್ರೈನ್, ಸೌದಿ ಅರೆಬಿಯಾ, ಜೋರ್ಡಾನ್, ಇರಾಕ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಅತೀ ಹೆಚ್ಚು ಭಾರತೀಯರು ನಲೆಸಿದ್ದಾರೆ. ಇದೀಗ ಭಾರತದಲ್ಲೂ ಆತಂಕದ ಪರಿಸ್ಥಿತಿ ಎದುರಾಗಿದೆ. ಮಧ್ಯ ಪ್ರಾಚ್ಯಗಳ ಮೇಲಿನ ದಾಳಿಯಿಂದ ಭಾರತದ ಏರ್ ಇಂಡಿಯಾ ಹಾಗೂ ಇಂಡಿಗೋ ಮಧ್ಯಪ್ರಾಚ್ಯ ದೇಶಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನ ಸೇವೆಗಳನ್ನು ರದ್ದುಮಾಡಿದೆ.
IX 831 (ಮಂಗಳೂರು–ದುಬೈ) ವಿಮಾನ ಟೇಕಾಫ್ ಬಳಿಕ ಮತ್ತೆ ಮಂಗಳೂರು ಏರ್ಪೋರ್ಟ್ ಗೆ ವಾಪಸ್ ಆಗಿದೆ. ಮಧ್ಯಾಹ್ನ 3 ಗಂಟೆಗೆ ವಿಮಾನ ರದ್ದುಗೊಳಿಸಲಾಗಿದೆ ಎಂದು ಘೋಷಣೆ ಮಾಡಲಾಗಿದೆ. 174 ಪ್ರಯಾಣಿಕರು + 6 ಸಿಬ್ಬಂದಿ ಸೇರಿ ಎಲ್ಲರು ಮತ್ತೆ ಸ್ವಸ್ಥಾನಕ್ಕೆ ವಾಪಸ್ ಆಗಿದ್ದಾರೆ.
IX 821 (ಮಂಗಳೂರು–ದೋಹಾ)
ವಿಮಾನವನ್ನು ಮುಂಬೈ (BOM)ಗೆ ಡೈವರ್ಟ್
6E 1467 (ಮಂಗಳೂರು–ದುಬೈ)
ವಿಮಾನ ಸಂಪೂರ್ಣವಾಗಿ ರದ್ದು
IX 822 (ದೋಹಾ–ಮಂಗಳೂರು) ವಿಮಾನ ರದ್ದು- ಆಗಮನ ಸಮಯ: 20:45
IX 832 (ದುಬೈ–ಮಂಗಳೂರು) – ಆಗಮನ ಸಮಯ: 22:10
ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ಹೊರಡಲಿದ್ದ ಎಲ್ಲಾ ವಿಮಾನಗಳು ರದ್ದು
IX 831 (ಮಂಗಳೂರು–ದುಬೈ) – ಹೊರಡಲಿದ್ದ ಸಮಯ: 13:20
IX 847 (ಮಂಗಳೂರು–ದಮ್ಮಾಮ್) – ಹೊರಡಲಿದ್ದ ಸಮಯ: 23:10
IX 813 (ಮಂಗಳೂರು–ದುಬೈ) – ಹೊರಡಲಿದ್ದ ಸಮಯ: 20:15
IX 851 (ಮಂಗಳೂರು–ಕುವೈತ್) – ಹೊರಡಲಿದ್ದ ಸಮಯ: 22:05
IX 815 (ಮಂಗಳೂರು–ಅಬುಧಾಬಿ) – ಹೊರಡಲಿದ್ದ ಸಮಯ: 23:20
6E 1467 (ಮಂಗಳೂರು–ದುಬೈ) – ಹೊರಡಲಿದ್ದ ಸಮಯ: 19:15
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ