ಬರೋಬ್ಬರಿ 30 ಗಂಟೆ ಬಳಿಕ ಟೇಕ್‌ ಆಫ್ ಏರ್ ಇಂಡಿಯಾ ವಿಮಾನ; ಪ್ರಯಾಣಿಕರ ಸ್ಥಿತಿ ದೇವರಿಗೆ ಪ್ರೀತಿ!

Published : Jun 01, 2024, 10:39 AM ISTUpdated : Jun 01, 2024, 10:49 AM IST
ಬರೋಬ್ಬರಿ 30 ಗಂಟೆ ಬಳಿಕ ಟೇಕ್‌ ಆಫ್ ಏರ್ ಇಂಡಿಯಾ ವಿಮಾನ; ಪ್ರಯಾಣಿಕರ ಸ್ಥಿತಿ ದೇವರಿಗೆ ಪ್ರೀತಿ!

ಸಾರಾಂಶ

Delhi-San Francisco Air India flight: ಸ್ಯಾನ್‌ ಫ್ರಾನ್ಸಿಸ್ಕೋಗೆ ವಿಮಾನ ಗುರುವಾರ ಮಧ್ಯಾಹ್ನ 3.30ಕ್ಕೆ ಹೊರಡಬೇಕಿತ್ತು. ಆದರೆ ಮೊದಲು ಆರು ಗಂಟೆಗಳ ಕಾಲ ವಿಮಾನ ವಿಳಂಬವಾಗಲಿದೆ ಎಂದು ಮಾಹಿತಿಯೊಂದು ಹೊರ ಬಂತು. ಕೊನೆಗೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿಮಾನ ಪ್ರಯಾಣವನ್ನು ರಿಶೆಡ್ಯೂಲ್ ಮಾಡಲಾಗಿತ್ತು.

ನವದೆಹಲಿ: 30 ಗಂಟೆ ವಿಳಂಬದ ನಂತರ ಏರ್ ಇಂಡಿಯಾ ಪ್ಲೇನ್ (Air India Plane) ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Indira Gandhi International Airport) ಟೇಕಾಫ್ ಆಗಿದೆ. ಇರ್ ಇಂಡಿಯಾ ವಿಮಾನ ದೆಹಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋನತ್ತ ಪ್ರಯಾಣ ( Delhi-San Francisco Air India flight) ಬೆಳೆಸಿದ್ದು, 200 ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಯಾಣ ವಿಳಂಬದ ಕುರಿತು ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು ಪೋಸ್ಟ್‌ಗಳು ವೈರಲ್ ಆಗಿವೆ. ಶುಕ್ರವಾರ ಸಂಜೆ ಬೋರ್ಡಿಂಗ್ ಆರಂಭಿಸಿದ್ದ ವಿಮಾನ ರನ್‌ವೇಯಿಂದ ಮತ್ತೆ ಹಿಂದಿರುಗಿತು ಎಂದು ಕೆಲ ಪ್ರಯಾಣಿಕರು ಹೇಳಿಕೊಂಡಿದ್ದಾರೆ. ಅಂತಿಮವಾಗಿ ವಿಮಾನ ದೆಹಲಿಯಿಂದ ರಾತ್ರಿ 9.30ಕ್ಕೆ ಟೇಕಾಫ್ ಆಗಿದೆ ಎಂದು ಪಿಟಿಐ ವರದಿ ಮಾಡಿದೆ. 

ಸ್ಯಾನ್‌ ಫ್ರಾನ್ಸಿಸ್ಕೋಗೆ ವಿಮಾನ ಗುರುವಾರ ಮಧ್ಯಾಹ್ನ 3.30ಕ್ಕೆ ಹೊರಡಬೇಕಿತ್ತು. ಆದರೆ ಮೊದಲು ಆರು ಗಂಟೆಗಳ ಕಾಲ ವಿಮಾನ ವಿಳಂಬವಾಗಲಿದೆ ಎಂದು ಮಾಹಿತಿಯೊಂದು ಹೊರ ಬಂತು. ಕೊನೆಗೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿಮಾನ ಪ್ರಯಾಣವನ್ನು ರಿಶೆಡ್ಯೂಲ್ ಮಾಡಲಾಗಿತ್ತು. ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ ಪ್ರಯಾಣದ ಅವಧಿ 16 ಗಂಟೆಗಳಾಗಿದ್ದು, ಅಲ್ಲಿ ಲ್ಯಾಂಡಿಂಗ್ ಬಗ್ಗೆ ಅನುಮತಿ ಪಡೆಯುವ ಕುರಿತು ಕೆಲ ಗೊಂದಲ ಉಂಟಾದ ಹಿನ್ನೆಲೆ ಈ ವಿಳಂಬಕ್ಕೆ ಕಾರಣವಾಯ್ತು ಎಂದು ವರದಿಯಾಗಿದೆ.

ಹೋಟೆಲ್ ವಾಸ್ತವ್ಯ, ರೀಫಂಡ್ ಅವಕಾಶ

ವಿಮಾನ ಪ್ರಯಾಣದ ಸಮಯದಲ್ಲಿ ವ್ಯತ್ಯಾಸ ಉಂಟಾದ ಹಿನ್ನೆಲೆ ಸಿಬ್ಬಂದಿಯನ್ನು ಮರುಹೊಂದಾಣಿಕೆ ಮಾಡಲು ಸಹ ಏರ್ ಸಿಬ್ಬಂದಿ ಕಷ್ಟ ಅನುಭವಿಸಿದೆ. ಕೊನೆಗೆ ಎಲ್ಲಾ ಪ್ರಯಾಣಿಕರಿಗೆ ಸಂಪೂರ್ಣ ರಿಫಂಡ್ ಮತ್ತು ಹೋಟೆಲ್ ವಾಸ್ತವ್ಯವದ ಸೌಲಭ್ಯವನ್ನು ಒದಗಿಸಿತ್ತು. 

ಗುರುವಾರ ವಿಮಾನ ಬೋರ್ಡಿಂಗ್ ಆರಂಭಿಸಿದ ನಂತರ ಪ್ರಯಾಣಿಕರು ತಮ್ಮ ಸೀಟ್‌ಗಳಲ್ಲಿ ಕುಳಿತಿದ್ದರು. ಗಂಟೆಗಟ್ಟಲೇ ವಿಮಾನ ಟೇಕ್‌ ಆಫ್ ಆಗದ ಕಾರಣ ಪ್ರಯಾಣಿಕರು ಎಸಿಯೂ ಇಲ್ಲದೇ, ಬಿಸಿಲಿಗೆ ತತ್ತರಿಸಿದ್ದರು. ಒಂದಿಷ್ಟು ಜನರು ವಿಮಾನ ಬೋರ್ಡಿಂಗ್ ಮಾರ್ಗದಲ್ಲಿ ಕಾಯುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲ ಪ್ರಯಾಣಿಕರು ಬಿಸಿಲಿನಿಂದಾಗಿ ಮೂರ್ಛೆ ಹೋಗಿರುವ ಘಟನೆಯೂ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮಾ ತುಜೆ ಸಲಾಂ ಹಾಡುತ್ತಲೇ ಪ್ರಾಣ ಬಿಟ್ಟ ಯೋಧ, ವಿದ್ಯಾರ್ಥಿಗಳಿಗೆ ತಿಳಿಯಲೇ ಇಲ್ಲ ಸಾವು!

ವೃದ್ಧರು, ಮಹಿಳೆಯರು, ಮಕ್ಕಳು ಸೇರಿ 200 ಪ್ರಯಾಣಿಕರು 2 ತಾಸುಗಳ ಕಾಲ ಏರೋಬ್ರಿ ಡ್ಜ್ಜ್‌ನಲ್ಲೇ ನಿಂತು ಕಾಯುವಂತಾಯಿತು. ‘ತಾಂತ್ರಿಕ ಕಾರಣ’ ನೀಡಿ ಮೊದಲಿಗೆ ವಿಮಾನವನ್ನು ಗುರುವಾರ ರಾತ್ರಿ 8 ಗಂಟೆಗೆ ಮುಂದೂಡಲಾಯಿತು. 7:20ರಿಂದ ಬದಲಿ ವಿಮಾನ ಹತ್ತಿದ ಪ್ರಯಾಣಿಕರಿಗೆ ಭಾರೀ ಉಷ್ಣಹವೆಯ ನಡುವೆ ಹವಾನಿಯಂತ್ರಕ ಕೈಕೊಟ್ಟು ಮಹಿಳೆಯರು, ವೃದ್ಧರು ಸರಿಯಾದ ಗಾಳಿ ಇಲ್ಲದೆ ಉಸಿರಾಡಲೂ ಕಷ್ಟವಾಗುವಂತಾಯಿತು. 

ಕಳೆದ ವಾರ ಮುಂಬೈನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಬೇಕಿದ್ದ ಏರ್ ಇಂಡಿಯಾ ಸುಮಾರು ಆರು ಗಂಟೆ ವಿಳಂಬವಾಗಿತ್ತು. ಪ್ರಯಾಣಿಕರು ಹವಾನಿಯಂತ್ರಿತ ಇಲ್ಲದ ಕ್ಯಾಬಿನ್‌ನಲ್ಲಿಯೇ ಆರು ಗಂಟೆ ಸಿಲುಕಿದ್ದರು. ಒಂದು ವಾರದೊಳಗೆ ಎರಡನೇ ಘಟನೆ ಇದಾಗಿದೆ. 

ಅಬ್ಬಬ್ಬಾ..ಅನಂತ್‌-ರಾಧಿಕಾ ಮದ್ವೆಗೆ ಅನಿಲ್‌ ಅಂಬಾನಿ ಬಂದಿಳಿದ ಕಾರಿನ ಬೆಲೆ ಇಷ್ಟೊಂದಾ?

ಏರ್‌ ಇಂಡಿಯಾಗೆ ಶೋಕಾಸ್ ನೋಟಿಸ್ 

ಸೇವೆಯಲ್ಲಿ ಅನಾನುಕೂಲತೆಯನ್ನುಂಟು ಮಾಡುತ್ತಿರುವ ಹಿನ್ನೆಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ (Directorate General of Civil Aviation) ಏರ್‌ ಇಂಡಿಯಾಗೆ ಶೋಕಾಸ್ ನೋಟಿಸ್ (show cause Notice) ಜಾರಿ ಮಾಡಿದೆ. ಈ ಶೋಕಾಸ್ ನೋಟಿಸ್‌ನಲ್ಲಿ  AI 183 ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ ಮತ್ತು AI 179 ಮುಂಬೈ-ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ವಿಳಂಬದ ಕುರಿತು ಉಲ್ಲೇಖಿಸಲಾಗಿದೆ. ವಿಮಾನಯಾನ ವಿಳಂಬ ಮತ್ತು ಶೋಕಾಸ್ ನೋಟಿಸ್ ಕುರಿತು ಏರ್ ಇಂಡಿಯಾ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ