ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ದುರಂತ, ಉಳಿತು ಪ್ರಯಾಣಿಕರ ಪ್ರಾಣ

Published : Dec 22, 2025, 12:06 PM IST
air india

ಸಾರಾಂಶ

air india : ಸೋಮವಾರ ಏರ್ ಇಂಡಿಯಾದ ಎರಡು ವಿಮಾನಗಳು ತುರ್ತು ಭೂಸ್ಪರ್ಶ ಮಾಡಿವೆ. ಒಂದು ದೆಹಲಿಯಲ್ಲಿ ಇನ್ನೊಂದು ಕೊಚ್ಚಿನ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದು, ಪ್ರಯಾಣಿಕರ ಜೀವ ಉಳಿದಿದೆ.

ಪೈಲಟ್ ಸಮಯ ಪ್ರಜ್ಞೆಯಿಂದ ಬಾರಿ ದುರಂತವೊಂದು ತಪ್ಪಿದೆ. ವಿಮಾನದಲ್ಲಿದ್ದ ಪ್ರಯಾಣಿಕರ ಜೀವ ಹೋಗಿ ಬಂದಂತಾಗಿದೆ. ಸೋಮವಾರ ದೆಹಲಿಯಿಂದ ಮುಂಬೈಗೆ ಹಾರಾಟ ಶುರು ಮಾಡಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ವಾಪಸ್ ಲ್ಯಾಂಡ್ ಆಗಿದೆ. ಎಂಜಿನ್ ನಲ್ಲಿ ತಾಂತ್ರಿಕ ದೋಷ ಪತ್ತೆ ಮಾಡಿದ ಪೈಲಟ್, ತಕ್ಷಣ ನಿರ್ಧಾರ ತೆಗೆದುಕೊಂಡಿದ್ದಾರೆ. ಸುರಕ್ಷತೆಗೆ ಆದ್ಯತೆ ನೀಡಿ ಏರ್ ಟರ್ನ್ಅರೌಂಡ್ ಮಾಡಲು ನಿರ್ಧರಿಸಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

ಎಂಜಿನ್ ನಲ್ಲಿ ತಾಂತ್ರಿಕ ದೋಷ 

ಏರ್ ಇಂಡಿಯಾ ವಿಮಾನ (Air India flight) AI-887 ನಲ್ಲಿ ಈ ಘಟನೆ ನಟೆದಿದೆ. ವಿಮಾನವನ್ನು ಬೋಯಿಂಗ್ 777-300ER (VT-ALS) ನೊಂದಿಗೆ ನಿರ್ವಹಿಸಲಾಗಿತ್ತು. ಮೂಲಗಳ ಪ್ರಕಾರ, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತ್ರ, ವಿಮಾನದ ಫ್ಲಾಪ್ಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾಗ, ವಿಮಾನ ಸಿಬ್ಬಂದಿಗೆ ಬಲ ಎಂಜಿನ್ನಲ್ಲಿ ಕಡಿಮೆ ತೈಲ ಒತ್ತಡದ ಎಚ್ಚರಿಕೆ ದೊರೆದಿದೆ. ಕೆಲ ಕ್ಷಣದಲ್ಲೇ, ಎಂಜಿನ್ನ ತೈಲ ಒತ್ತಡ ಸಂಪೂರ್ಣವಾಗಿ ಶೂನ್ಯಕ್ಕೆ ಇಳಿದಿದೆ. ಇದು ತಾಂತ್ರಿಕ ಅಪಾಯವನ್ನು ಸೃಷ್ಟಿಸುತ್ತದೆ. ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ, ಪೈಲಟ್ಗಳು ತಕ್ಷಣವೇ ಏರ್ ಟರ್ನ್ಅರೌಂಡ್ ಮಾಡಲು ನಿರ್ಧರಿಸಿದ್ದಾರೆ. ವಿಮಾನವನ್ನು ಎಚ್ಚರಿಕೆಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಿದ್ದಾರೆ. ಎಲ್ಲಾ ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಿ ಸುರಕ್ಷಿತವಾಗಿ ವಿಮಾನವನ್ನು ಕೆಳಗಿಳಿಸಲಾಗಿದೆ. ವಿಮಾನ ಸುರಕ್ಷಿತವಾಗಿ ಇಳಿದ ನಂತರ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಲ್ಯಾಂಡಿಂಗ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ. 

RTE ಕಾಯ್ದೆಯಡಿ ಪ್ರವೇಶ ಪಡೆದ ಬಾಲಕಿಗೆ ಖಾಸಗಿ ಶಾಲೆ ಕಿರುಕುಳ: ರಸ್ತೆಯಲ್ಲೇ ಕುಳಿತು ಬಾಲಕಿ ಪ್ರತಿಭಟನೆ

ಏರ್ ಇಂಡಿಯಾ ಪ್ರಕಾರ, ವಿಮಾನದ ಬಗ್ಗೆ ತಾಂತ್ರಿಕ ತನಿಖೆ ಶುರುವಾಗಿದೆ. ಹಿಂದಿನ ದಾಖಲೆಗಳಲ್ಲಿ ಎಂಜಿನ್ ತೈಲ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಅಸಹಜತೆಗಳು ದಾಖಲಾಗಿಲ್ಲ ಎಂದು ಆರಂಭಿಕ ತನಿಖೆಗಳು ಬಹಿರಂಗಪಡಿಸಿವೆ. ವಿಮಾನವನ್ನು ಪ್ರಸ್ತುತ ಸೇವೆಯಿಂದ ಹೊರಗಿಡಲಾಗಿದೆ. ಅಗತ್ಯವಿರುವ ಎಲ್ಲಾ ತನಿಖೆಗಳು ಪೂರ್ಣಗೊಂಡ ನಂತರವೇ ಅದನ್ನು ಮತ್ತೆ ಸೇವೆಗೆ ಸೇರಿಸಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ತೊಂದರೆಗೊಳಗಾದ ಎಲ್ಲಾ ಪ್ರಯಾಣಿಕರಿಗೆ ಪರ್ಯಾಯ ವಿಮಾನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ವಿಮಾನದಲ್ಲಿ ಪ್ರಯಾಣ ನಡೆಸುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಕ್ರಿಸ್ಮಸ್ ಹಾಗೂ ಇಯರ್ ಆಂಡ್ ರಜೆ ಶುರುವಾಗ್ತಿದ್ದು, ವಿಮಾನಗಳು ಸಾಮಾನ್ಯ ದಿನಕ್ಕಿಂತ ಹೆಚ್ಚು ಜನದಟ್ಟಣೆಯಿಂದ ಕೂಡಿರಲಿದೆ. ದೆಹಲಿ-ಮುಂಬೈ ಮಾರ್ಗವು ದೇಶದಲ್ಲಿ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾಗಿದ್ದು, ಪ್ರತಿದಿನ ಹೆಚ್ಚಿನ ಸಂಖ್ಯೆಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ

ಕೊಚ್ಚಿನ್ ನಲ್ಲಿ ಇನ್ನೊಂದು ವಿಮಾನ ತುರ್ತು ಲ್ಯಾಂಡಿಂಗ್

 ಇಂದು ಬೆಳಿಗ್ಗೆ ಇನ್ನೊಂದು ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದೆ. ಬೆಳಿಗ್ಗೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೆಡ್ಡಾದಿಂದ ಕೋಝಿಕ್ಕೋಡ್ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದೆ. ವಿಮಾನದಲ್ಲಿ160 ಪ್ರಯಾಣಿಕರಿದ್ದರು. ಟೇಕ್ ಆಫ್ ಆದ ನಂತ್ರ ಲ್ಯಾಂಡಿಂಗ್ ಗೇರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಟೈರ್ ವೈಫಲ್ಯಕ್ಕೆ ಕಾರಣವಾಗಿತ್ತು. ಪೈಲಟ್ ತಕ್ಷಣ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿ ತುರ್ತು ಲ್ಯಾಂಡಿಂಗ್ಗೆ ಅನುಮತಿ ಕೋರಿದ್ದರು. ವಿಮಾನ ಹಾರಾಟ ಹೆಚ್ಚಾಗ್ತಿದ್ದಂತೆ ವಿಮಾನ ಅಪಘಾತಗಳ ಸಂಖ್ಯೆಯೂ ಏರಿಕೆಯಾಗ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ವಿಮಾನಯಾನ ಸಂಸ್ಥೆಗಳು ತೆಗೆದುಕೊಳ್ತಿವೆ. ಸಣ್ಣ ಲೋಪ ಕಾಣಿಸಿಕೊಂಡ್ರೂ ವಿಮಾನವನ್ನು ಪೈಲಟ್ ಗಳು ಲ್ಯಾಂಡ್ ಮಾಡಬಹುದು. ಸಣ್ಣ ಅನುಮಾನ ಬಂದ್ರೂ ಲ್ಯಾಂಡಿಂಗ್ ಗೆ ಅವಕಾಶ ನೀಡಲಾಗಿದೆ. ತಾಂತ್ರಿಕ ದೋಷ ಪತ್ತೆಯಾದಾಗ ವಿಮಾನವನ್ನು ಹಿಂದಕ್ಕೆ ಕರೆಯುವುದು ಪೈಲಟ್ನ ಸರಿಯಾದ ಮತ್ತು ಜವಾಬ್ದಾರಿಯುತ ನಿರ್ಧಾರ ಎಂದು ವಿಮಾನಯಾನ ತಜ್ಞರು ನಂಬುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

RTE ಕಾಯ್ದೆಯಡಿ ಪ್ರವೇಶ ಪಡೆದ ಬಾಲಕಿಗೆ ಖಾಸಗಿ ಶಾಲೆ ಕಿರುಕುಳ: ರಸ್ತೆಯಲ್ಲೇ ಕುಳಿತು ಬಾಲಕಿ ಪ್ರತಿಭಟನೆ
ಮಹತ್ವದ ಉಪಗ್ರಹ ಲಾಂಚ್‌ಗೂ ಮೊದಲು ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ಇಸ್ರೋ ವಿಜ್ಞಾನಿಗಳ ತಂಡ