ಅಹಮದಾಬಾದ್‌ ವಿಮಾನ ದುರಂತದ ಬೆನ್ನಲ್ಲೇ 'ಏರ್ ಇಂಡಿಯಾ'ದಿಂದ ಮಹತ್ವದ ನಿರ್ಧಾರ

Published : Jun 19, 2025, 12:55 PM IST
AIR INDIA

ಸಾರಾಂಶ

Air India: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಪತನದ ನಂತರ ಮಹತ್ವದ ನಿರ್ಧಾರ ಘೋಷಿಸಿದೆ. 

ನವದೆಹಲಿ: ಗುಜರಾತ್ ರಾಜಧಾನಿ ಅಹಮದಾಬಾದ್ ನಿಲ್ದಾಣದಿಂದ ಲಂಡನ್‌ಗೆ ಟೇಕಾಫ್ ಆದ ವಿಮಾನ ಕೆಲವೇ ನಿಮಿಷಗಳಲ್ಲಿ ಪತನವಾಗಿತ್ತು. ಈ ದುರಂತದ ಬೆನ್ನಲ್ಲೇ ಇಡೀ ವಿಶ್ವದಲ್ಲಿ ಏರ್ ಇಂಡಿಯಾ ವಿಮಾನಯಾನ ಸೇವೆಯ ಗುಣಮಟ್ಟದ ಕುರಿತು ಚರ್ಚಗಳು ನಡೆಯುತ್ತಿವೆ. ಕೆಲ ಸೆಲಿಬ್ರಿಟಿಗಳಂತ ಬಹಿರಂಗವಾಗಿಯೇ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಲ್ಲ ಎಂದು ಹೇಳಿಕೆ ನೀಡಿರೋದು ಸಂಸ್ಥೆಯ ಗುಡ್‌ವಿಲ್ ಕಡಿಮೆ ಮಾಡುತ್ತಿದೆ. ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ಮೂಲಕ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಏರ್ ಇಂಡಿಯಾ ಮುಂದಾಗಿದೆ.

ವಿಮಾನ ಪತನದ ಬಳಿಕ ಏರ್ ಇಂಡಿಯಾ ಸಿಬ್ಬಂದಿ ವರ್ತನೆ, ಸೇವೆಯಲ್ಲಿನ ವ್ಯತ್ಯಯ ಸೇರಿದಂತೆ ಒಂದೊಂದೇ ವಿಷಯಗಳು ಮುನ್ನಲೆಗೆ ಬರುತ್ತಿವೆ. ಇದೀಗ ಏರ್ ಇಂಡಿಯಾ ಅಂತರಾಷ್ಟ್ರೀಯ ಸೇವೆಗಳ ಮೇಲೆ ಶೇ.15ರಷ್ಟು ರಿಯಾಯ್ತಿಯನ್ನು ನೀಡುತ್ತಿದೆ.

ಯಾಕೆ ಶೇ.15 ರಿಯಾಯ್ತಿ?

ಶೇ.15ರಷ್ಟು ರಿಯಾಯ್ತಿ ನೀಡುತ್ತಿರೋದರ ಹಿಂದೆ ಭದ್ರತಾ ತಪಾಸಣೆ, ತಾಂತ್ರಿಕ ಮೌಲ್ಯಮಾಪನ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಸೇರಿದಂತೆ ಹಲವು ಕಾರಣಗಳಿವೆ ಎಂದು ವರದಿಯಾಗಿದೆ. ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಪತನವೇ ಟಿಕೆಟ್ ದರ ಇಳಿಕೆಗೆ ಮೂಲ ಕಾರಣ ಅನ್ನೋದನ್ನು ಅಲ್ಲಗಳೆಯುವಂತಿಲ್ಲ. ವಿಮಾನ ಪತನದ ಬಳಿಕ ಏರ್ ಇಂಡಿಯಾ ಪ್ರಯಾಣದಲ್ಲಿ ಎದುರಿಸಿದ ಸಮಸ್ಯೆಗಳ ಕುರಿತು ಪ್ರಯಾಣಿಕರು ಮಾಡಿದ ಹಳೆ ವಿಡಿಯೋ ಮತ್ತು ಟ್ವೀಟ್‌ಗಳು ಮುನ್ನಲೆಗೆ ಬಂದಿವೆ.

ಏರ್ ಇಂಡಿಯಾ ಹೇಳಿದ್ದೇನು?

ಮುಂದಿನ ಕೆಲವು ವಾರಗಳವರೆಗೆ ವೈಡ್-ಬಾಡಿ ವಿಮಾನಗಳ ಅಂತರಾಷ್ಟ್ರೀಯ ವಿಮಾನ ಸೇವೆಗಳ ಬೆಲೆಯನ್ನು ಶೇ.15ರಷ್ಟು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಈ ರಿಯಾಯ್ತಿ ದರಗಳು ಜೂನ್ 20ರಿಂದ ಅನ್ವಯವಾಗಲಿವೆ. ಏರ್ ಇಂಡಿಯಾದ ಬೋಯಿಂಗ್ 787-8/9 ವಿಮಾನಗಳನ್ನು ಪರಿಶೀಲಿಸುವಂತೆ ಡಿಜಿಸಿಎ (Directorate General of Civil Aviation) ಸೂಚನೆ ನೀಡಿತ್ತು. ಸೂಚನೆ ಬೆನ್ನಲ್ಲೇ ತಪಾಸಣೆ ನಡೆಸಲಾಗಿದೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ತನಿಖಾ ಕಾರ್ಯಗಳು ಪೂರ್ಣಗೊಂಡಿವೆ. ಹೆಚ್ಚುವರಿಯಾಗಿ ಏರ್ ಇಂಡಿಯಾ ತನ್ನ ಬೋಯಿಂಗ್ 777 ವಿಮಾನಗಳನ್ನು ಪರಿಶೀಲನೆ ಮಾಡುತ್ತಿದೆ ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ಪ್ರಯಾಣಿಕರು ಮತ್ತು ಉದ್ಯೋಗಿಗಳ ಸುರಕ್ಷತೆ ಸಂಸ್ಥೆ ಮೊದಲ ಆದ್ಯಯೆ ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ. ನಿಮ್ಮೆಲ್ಲರ ಸಹಕಾರಕ್ಕಾಗಿ ನಾವು ಮನವಿ ಮಾಡಿಕೊಳ್ಳುತ್ತೇವೆ. ನಾವು ಶೀಘ್ರದಲ್ಲೇ ಸ್ಥಿರತೆಯನ್ನು ಪುನಃಸ್ಥಾಪಿಸುತ್ತೇವೆ. AI 171 ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರ ಸಾವಿಗೆ ಸಂತಾಪ ಸೂಚಿಸುತ್ತೇವೆ ಎಂದು ಏರ್ ಇಂಡಿಯಾ ಹೇಳಿದೆ.

ಟಾಟಾದಿಂದ 1 ಕೋಟಿ ಪರಿಹಾರ!

241 ಮಂದಿ ಏರ್‌ ಇಂಡಿಯಾ ಪ್ರಯಾಣಿಕರಿಗೆ ಕೋಟಿ ರೂಪಾಯಿ ಪರಿಹಾರವನ್ನು ಟಾಟಾ ಗ್ರೂಪ್‌ ಘೋಷಣೆ ಮಾಡಿತ್ತು. ಈಗ ಬಿಜೆ ಹಾಸ್ಟೆಲ್‌ನಲ್ಲಿ ಮೃತರಾದ 33 ವ್ಯಕ್ತಿಗಳಿಗೂ ಕೂಡ 1 ಕೋಟಿ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದೆ.

ಸಾವಿನ ಸಂಖ್ಯೆ 270ಕ್ಕೆ ಏರಿಕೆ

ಆರಂಭದಲ್ಲಿ ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ 265 ಜನರು ಬಲಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ದುರಂತದ ಸ್ಥಳದಿಂದ ಇದುವರೆಗೂ ಒಟ್ಟು 270 ಶವಗಳು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ರವಾನೆಯಾಗಿದೆ. ಇನ್ನು ವಿಮಾನ ದುರಂತದಲ್ಲಿ ಬದುಕುಳಿದ ವಿಶ್ವಾಸ್ ರಮೇಶ್ ಕುಮಾರ್ ಮಂಗಳವಾರ ತಡರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕುಟುಂಬಸ್ಥರೊಂದಿಗೆ ಡಿಯುಗೆ ತೆರಳಿದ್ದಾರೆ. ಇದೇ ವೇಳೆ ವಿಶ್ವಾಸ್ ರಮೇಶ್ ಕುಮಾರ್ ಜೊತೆಯಲ್ಲಿ ಸೋದರನ ಶವವನ್ನು ಹಸ್ತಾಂತರಿಸಲಾಗಿದೆ. ಅಹಮಾದಾಬಾದ್‌ನಿಂದ ಡಿಯುಗೆ ತೆರಳಲು ಆಸ್ಪತ್ರೆಯಿಂದ ವ್ಯವಸ್ಥೆ ಮಾಡಿಕೊಡಲಾಗಿತ್ತು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ