ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಅರೆಸ್ಟ್

Published : Jun 15, 2025, 08:04 PM IST
Air India Emergency Landing

ಸಾರಾಂಶ

ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಕ್ರೂ ಅರೆಸ್ಟ್ ಆಗಿದ್ದಾರೆ. ಏಕಾಏಕಿ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್ ಆಗಿದ್ದೇಕೆ?

ಮುಂಬೈ(ಜೂ.15) ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಇದೀಗ ಭಾರತದಲ್ಲಿ ವಿಮಾನ ಸೇವೆಗಳು ಸಹಜ ಸ್ಥಿತಿಯಲ್ಲಿದೆ. ಭಾರಿ ಮಳೆ ಕಾರಣದಿಂದ ಕೆಲ ವಿಮಾನ ಹಾರಾಟಗಳು ವಿಳಂಬವಾಗಿದೆ. ಹೀಗೆ ನ್ಯೂಯಾರ್ಕ್ ನಗರದಿಂದ ಮುಂಬೈಗೆ ಏರ್ ಇಂಡಿಯಾ ವಿಮಾನ ಪ್ರಯಾಣಿಕರ ಹೊತ್ತು ಆಗಮಿಸಿತ್ತು. ಮುಂಬೈನ ಛತ್ರಪತಿ ಶಿವಾಜಿ ಇಂಟರ್ನ್ಯಾಷಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ಏರ್ ಇಂಡಿಯಾ ವಿಮಾನ ಸಿಬ್ಬಂದಿಯನ್ನು ಡೈರೆಕ್ಟೋರೇಟ್ ರೆವನ್ಯೂ ಇಂಟಲಿಜೆನ್ಸ್ (DRI) ಅರೆಸ್ಟ್ ಮಾಡಿದೆ. ಏರ್ ಇಂಡಿಯಾ ಎ1-116 ವಿಮಾನದ ಸಿಬ್ಬಂದಿ ಇದೀಗ ಅರೆಸ್ಟ್ ಆಗಿದ್ದಾರೆ.

ಕ್ಯಾಬಿನ್ ಕ್ರೂ ಅರೆಸ್ಟ್ ಮಾಡಿದ್ದೇಕೆ?

ಏರ್ ಇಂಡಿಯಾ ಎ1-116 ವಿಮಾನದ ಕ್ಯಾಬಿನ್ ಕ್ರೂ ನ್ಯೂಯಾರ್ಕ್‌ನಿಂದ ಮುಂಬೈಗೆ ಬರೋಬ್ಬರಿ 1.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಾಣೆ ಮಾಡಿದ ಆರೋಪದಡಿಯಲ್ಲಿ ಅರೆಸ್ಟ್ ಮಾಡಿದ್ದಾರೆ. 1373 ಗ್ರಾಂ ತೂಕದ ಚಿನ್ನದ ಬಿಸ್ಕೆಟ್‌ಗಳನ್ನು ಸ್ಮಗ್ಲರ್ ಸಹಾಯದೊಂದಿಗೆ ಕಳ್ಳ ಸಾಗಾಣೆ ಮಾಡಲಾಗಿದೆ. DRI ಅಧಿಕಾರಿಗಳಿಗೆ ಈ ಚಿನ್ನ ಕಳ್ಳಾಸಾಗಣೆ ಕುರಿತು ಮಹತ್ವದ ಸುಳಿವು ಸಿಕ್ಕಿತ್ತು. ಹೀಗಾಗಿ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ಶೋಧ ಕಾರ್ಯ ನಡೆಸಿ ಸಿಬ್ಬಂದಿಯನ್ನು ಆರೆಸ್ಟ್ ಮಾಡಿದ್ದಾರೆ.

ತಪಾಸಣೆಯಲ್ಲಿ ಸಿಬ್ಬಂದಿ ಬಳಿಯಿಂದ ಸಿಗಲಿಲ್ಲ ಚಿನ್ನ

ಚಿನ್ನ ಕಳ್ಳಸಾಗಾಣೆ ಸುಳಿವು ಪಡೆದ DRI ಅಧಿಕಾರಿಗಳು ನೇರವಾಗಿ ವಿಮಾನದ ಸಿಬ್ಬಂದಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಆದರೆ ತಪಾಸಣೆ ವೇಳೆ ಸಿಬ್ಬಂದಿಯ ಬ್ಯಾಗ್ ಸೇರಿದಂತೆ ಎಲ್ಲವನ್ನು ತಪಾಸಣೆ ಮಾಡಿದ್ದಾರೆ. ಆದರೆ ಅಧಿಕಾರಿಗಳಿಗೆ ಯಾವುದೇ ಚಿನ್ನ ಲಭ್ಯವಾಗಿಲ್ಲ. ಆದರೆ ಅಧಿಕಾರಿಗಳ ಅನುಮಾನ ಹೆಚ್ಚಾಗಿದೆ. ಹೀಗಾಗಿ ಸಿಬ್ಬಂದಿಯನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ವಿಚಾರಣೆ ವೇಳೆ ಸಿಬ್ಬಂದಿ ಚಿನ್ನ ಕಳ್ಳ ಸಾಗಾಣೆ ಮಾಡಿದ ಮಾಹಿತಿ ಬಿಚ್ಚಿಟ್ಟಿದ್ದಾನೆ. ಇಷ್ಟೇ ಅಲ್ಲ ತಾನು ಕಳ್ಳಸಾಗಾಣೆ ಮಾಡಿರುವ ಚಿನ್ನವನ್ನು ಎಲ್ಲಿ ಅಡಗಿಸಿಟ್ಟಿರುವುದಾಗಿ ಹೇಳಿದ್ದಾನೆ.

ಈ ಮಾಹಿತಿ ಆಧರಿಸಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ಇತ್ತ ವಿಚಾರಣೆ ವೇಳೆ ಹಲವು ಬಾರಿ ಈ ರೀತಿ ಚಿನ್ನ ಕಳ್ಳಸಾಗಾಣೆ ಮಾಡಿರುವುದಾಗಿ ಹೇಳಿದ್ದಾನೆ. ಇದೀಗ ಅಧಿಕಾರಿಗಳು ಇದರ ಹಿಂದಿನ ಜಾಲ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ಪೈಕಿ ಮತ್ತೊರ್ವನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತನೂ ಚಿನ್ನ ಕಳ್ಳಸಾಗಾಣೆ ಮಾಡಿರುವುದು ಒಪ್ಪಿಕೊಂಡಿದ್ದಾನೆ. ಆದರೆ ಇದು ದೊಡ್ಡ ಜಾಲವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಮಾನದ ಸಿಬ್ಬಂದಿಗಳನ್ನು ಬಳಸಿಕೊಳ್ಳುತ್ತಿದ್ದಾರೆ.ಆಮಿಷ ಒಡ್ಡಿ, ಬೆದರಿಕೆ ಹಾಕಿ ಈ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ