ಮನೆಗೊಂದು ಸರ್ಕಾರಿ ಉದ್ಯೋಗ, ಷಿಂಗ್ ಮಷಿನ್, ಉಚಿತ ಮನೆ| ಭರ್ಜರಿ ಭರವಸೆಗಳ ಪ್ರಣಾಳಿಕೆ ಬಿಡುಗಡೆ| ವರ್ಷಕ್ಕೆ 6 ಎಲ್ಪಿಜಿ ಉಚಿತ, ಪೆಟ್ರೋಲ್ ಬೆಲೆ ಇಳಿಕೆ| ಬಿಪಿಎಲ್ ಕುಟುಂಬಕ್ಕೆ ಉಚಿತ ವಾಷಿಂಗ್ ಮಶಿನ್| ಮನೆಯ ಮಹಿಳಾ ಯಜಮಾನರಿಗೆ 1500 ರು. ಮಾಸಿಕ ಗೌರವಧನ
ಚೆನ್ನೈ(ಮಾ.15): ತಮಿಳುನಾಡಿನ ಆಡಳಿತಾರೂಢ ಅಣ್ಣಾ ಡಿಎಂಕೆ ಭಾನುವಾರ ಪ್ರಣಾಳಿಕೆ ಘೋಷಿಸಿದ್ದು, ಪ್ರತಿಪಕ್ಷ ಡಿಎಂಕೆಗೆ ಸಡ್ಡು ಹೊಡೆಯುವ ರೀತಿಯ ಭರವಸೆಗಳನ್ನು ನೀಡಿದೆ. ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ನೌಕರಿ, ಮನೆರಹಿತರಿಗೆ ಉಚಿತ ಮನೆ, ಶೈಕ್ಷಣಿಕ ಸಾಲ ಮನ್ನಾ, ಪೆಟ್ರೋಲ್-ಡೀಸೆಲ್ ದರ ಇಳಿಕೆ, ಮನೆಯ ಮಹಿಳಾ ಯಜಮಾನರಿಗೆ 1500 ರು. ಗೌರವಧನ, ವರ್ಷಕ್ಕೆ 6 ಎಲ್ಪಿಜಿ ಉಚಿತ, ಬಿಪಿಎಲ್ ಕಾರ್ಡುದಾರರಿಗೆ ಉಚಿತ ವಾಷಿಂಗ ಮಶಿನ್- ಇವು ಪ್ರಮುಖ ಆಕರ್ಷಕ ಭರವಸೆಗಳು.
ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ, ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಪ್ರಮುಖ ಭರವಸೆಗಳು
- ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ನೌಕರಿ
- ಅಮ್ಮ ಗೃಹ ನಿರ್ಮಾಣ ಯೋಜನೆಯಡಿ ಈಗ ಮನೆ ಇರದವರಿಗೆ ಉಚಿತ ಮನೆ
- ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಉಚಿತ ವಾಷಿಂಗ್ ಮಶಿನ್, ಸೌರ ಒಲೆ
- ಎಲ್ಲ ಮನೆಗಳಿಗೆ ಉಚಿತ ಕೇಬಲ್ ಟೀವಿ ಸೇವೆ
- ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ
- ವಿದ್ಯಾರ್ಥಿಗಳಿಗೆ ಇಡೀ ವರ್ಷ 2 ಜಿಬಿ ಡೇಟಾ ಉಚಿತ
- ಪೆಟ್ರೋಲ್, ಡೀಸೆಲ್ ದರ ಇಳಿಕೆ
- 2 ತಿಂಗಳ ಬದಲು ಪ್ರತಿ ತಿಂಗಳ ವಿದ್ಯುತ್ ಬಿಲ್
- ಟಾಸ್ಮಾ್ಯಕ್ ಮದ್ಯದ ಅಂಗಡಿ ಹಂತ ಹಂತವಾಗಿ ಬಂದ್
- ನಗರ ಸಾರಿಗೆ ಬಸ್ಗಳಲ್ಲಿ ಸಂಚರಿಸುವ ಮಹಿಳೆಯರಿಗೆ
- ವರ್ಷಕ್ಕೆ 6 ಎಲ್ಪಿಜಿ ಸಿಲಿಂಡರ್ಗಳಿಗೆ ಸಬ್ಸಿಡಿ
- ಪ್ರತಿ ಮನೆಯ ಮಹಿಳಾ ಯಜಮಾನಳಿಗೆ 1500 ರು. ವೇತನ
- ಹಸಿರು ಆಟೋರಿಕ್ಷಾ ಖರೀದಿಸಿದರೆ ಆಟೋ ಚಾಲಕರಿಗೆ 25 ಸಾವಿರ ರು. ಸಬ್ಸಿಡಿ