
ಅಹಮ್ಮದಾಬಾದ್(ಜೂ.12) ಏರ್ ಇಂಡಿಯಾ ವಿಮಾನ ದುರಂತ ಭಾರತೀಯರು ಮಾತ್ರವಲ್ಲ ವಿಶ್ವವನ್ನೇ ನಡುಗಿಸಿದೆ. ಅಹಮ್ಮದಾಬಾದ್‌ನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ ವಿಮಾನ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಈ ವಿಮಾನದಲ್ಲಿ ಒಟ್ಟು 242 ಮಂದಿ ಪ್ರಯಾಣ ಬೆಳೆಸಿದ್ದರು. ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿದಂತೆ ಹಲವು ಪ್ರಮುಖರು ಇದೇ ವಿಮಾನದಲ್ಲಿದ್ದರು. ಇದೀಗ ಘಟೆಯಲ್ಲಿ ಸಾವಿನ ಸಂಖ್ಯೆ 133ಕ್ಕೆ ಏರಿಕೆಯಾಗಿದೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ, ಗಾಯಳುಗಳಿಗೆ ಸೂಕ್ತ ಚಿಕಿತ್ಸೆ ಸೇರಿದಂತೆ, ಕುಟುಂಬದ ಜೊತೆ ಸಂಪರ್ಕದಲ್ಲಿರಲು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಇದೀಗ ಈ ದುರಂತದಲ್ಲಿ ಮಡಿದ ಕುಟುಂಬಕ್ಕೆ ಪರಿಹಾರ ಮೊತ್ತ ಒದಗಿಸುವ ಜವಾಬ್ದಾರಿ ಯಾರದ್ದು? ಮಡಿದ, ಗಾಯಗೊಂಡ ಪ್ರಯಾಣಿಕರಿಗೆ ಸಿಗುವ ಪರಿಹಾರ ಮೊತ್ತವೆಷ್ಟು?
ವಿಮಾನ ದುರಂತದ ವೇಳೆ ವಿಮಾನಯಾನ ಸಂಸ್ಥೆ ಹಾಗೂ ವಿಮೆ ಸಂಸ್ಥೆ ಪರಿಹಾರ ಮೊತ್ತ ನೀಡಬೇಕು. ಈ ಪೈಕಿ ವಿಮಾನ ಪ್ರಯಾಣಿಕರು ಅಥವಾ ಪ್ರಯಾಣಿಕರ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದರೆ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ.
ವಿಮಾನಯಾನ ಸಂಸ್ಥೆ ನೀಡುವ ಪರಿಹಾರವೆಷ್ಟು?
ಪ್ರತಿ ದೇಶದ ವಿಮಾನಯಾನ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾಂಟ್ರಿಯಲ್ ಕನ್ವೆನ್ಶನ್ 1999 ಒಳಪಟ್ಟಿದೆ. ಈ ನಿಯಮದ ಪ್ರಕಾರ ವಿಮಾನ ದುರಂದಲ್ಲಿ ಮೃತಪಟ್ಟರೆ ಹಾಗೂ ಗಾಯಗೊಂಡ ಪ್ರತಿ ಪ್ರಯಾಣಿಕರಿಗೆ SDRs ನಿಯಮದ ಪ್ರಕಾರ ಗರಿಷ್ಠ 1.55 ಕೋಟಿ ರೂಪಾಯಿ ಪರಿಹಾರ ಮೊತ್ತ ನೀಡಬೇಕು. ಮಡಿದವರಿಗೆ ಗರಿಷ್ಠ 1.55 ಕೋಟಿ ರೂಪಾಯಿ ಪರಿಹಾರ ಮೊತ್ತ ಸಿಗಲಿದೆ. ಇನ್ನು ಗಾಯಗೊಂಡವರಿಗೆ ಗಾಯದ ಪ್ರಮಾಣ, ಭವಿಷ್ಯ ಆಧರಿಸಿ ಪರಿಹಾರ ಮೊತ್ತ ನಿರ್ಧರಿಸಲಾಗುತ್ತದೆ.
ವಿಮಾನ ಸಂಸ್ಥೆಯ ನಿರ್ಲಕ್ಷವಿದ್ದರೆ ಪರಿಹಾರ ಮೊತ್ತ ಹೆಚ್ಚು
ವಿಮಾನ ದುರಂತದಲ್ಲಿ ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯ ಕಂಡು ಬಂದಲ್ಲಿ ಪ್ರತಿ ಮಡಿದ ಪ್ರಯಾಣಿಕರಿಗೆ ಹಾಗೂ ಗಾಯಗೊಂಡವರ ಪ್ರಯಾಣಿಕರಿಗೆ ನೀಡುವ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಾಗಲಿದೆ. ಸೂಕ್ತ ಕಾರಣ ಹಾಗೂ ದಾಖಲೆಯೊಂದಿಗೆ ಕುಟಂಬಸ್ಥರು ಅಥವಾ ಗಾಯಾಳು ಕೋರ್ಟ್ ಮೆಟ್ಟಿಲೇರಿದರೆ ಪರಿಹಾರ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ. ಏರ್ ಇಂಡಿಯಾ ವಿಮಾನ ಅಂತಾರಾಷ್ಟ್ರೀಯ ಸೇವೆ ನೀಡುತ್ತಿದ್ದ ವೇಳೆ ಪತನಗೊಂಡಿರುವ ಕಾರಣ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಬೇಕು.
ಪ್ರಯಾಣ ವಿಮೆ ಪರಿಹಾರವೇನು?
ವಿಮಾನ ಟಿಕೆಟ್ ಬುಕಿಂಗ್ ಮಾಡುವಾಗ ವಿಮೆ ಮೊತ್ತವೂ ಅದರಲ್ಲಿ ಸೇರಿಸುತ್ತದೆ. ಇದು ಆಯಾ ವಿಮಾನಯಾನ ಸಂಸ್ಥೆಗಳು ವಿವಿಧ ವಿಮಾ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುತ್ತದೆ. ವಿಮಾನಯಾನ ಸಂಸ್ಥೆ ಪರಿಹಾರ ಮೊತ್ತದ ಜೊತೆಗೆ ಪ್ರಯಾಣಿಕ ವಿಮೆ ಜವಾಬ್ದಾರಿ ಹೊತ್ತಿರುವ ವಿಮಾನ ಕಂಪನಿಗಳು ವಿಮೆ ಪರಿಹಾರ ಮೊತ್ತ ನೀಡಲಿದೆ. ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರು, ಗಾಯಗೊಂಡ ಪ್ರಯಾಣಿಕರಿಗೆ ವಿಮೆ ಪರಿಹಾರ, ತುರ್ತು ಪರಿಸ್ಥಿತಿ, ಆಸ್ಪತ್ರೆ ದಾಖಲು, ವಿಮಾನ ವಿಳಂಬ, ಲಗೇಜ್ ನಾಪತ್ತೆ ಅಥಾ ಡ್ಯಾಮೇಜ್‌ಗೂ ಪರಿಹಾರ ನೀಡಲಿದೆ.
ವಿಮಾ ಕಂಪನಿಗಳು ಪ್ರಯಾಣಿಕ ಮೃತಪಟ್ಟರೆ 25 ರಿಂದ 1 ಲಕ್ಷ ರೂಪಾಯಿ ವರೆಗೆ ವಿಮಾ ಪರಿಹಾರ, 5 ರಿಂದ 10 ಲಕ್ಷ ರೂಪಾಯಿ ವರೆಗೆ ಗಾಯಾಳುಗಳ ಪರಿಹಾರ ಮೊತ್ತ, ಆಸ್ಪತ್ರೆ ಖರ್ಚು ವೆಚ್ಚವನ್ನು ವಿಮೆ ಕಂಪನಿಗಳು ನೀಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ