
ನವದೆಹಲಿ(ಫೆ.18): 2022 ರ ಪಂಜಾಬ್ ಚುನಾವಣೆಗೆ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ದೇಶದ ಪ್ರಮುಖ ಸಿಖ್ಖರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಆಗಮಿಸಿದ ಸಿಖ್ ಸಂಘಟನೆಗಳ ಪ್ರತಿನಿಧಿಗಳು ಪ್ರಧಾನಿ ಮೋದಿ ಅವರ ಮಾತನ್ನು ಆಲಿಸಿ ಶಾಲು ಹೊದಿಸಿ, ಖಡ್ಗ ನೀಡಿ ಗೌರವಿಸಿದರು.
Punjab Elections: ಆಮ್ ಆದ್ಮಿ ಪಕ್ಷಕ್ಕೆ ಸಿಖ್ ಫಾರ್ ಜಸ್ಟೀಸ್ ಬೆಂಬಲ!
ದೆಹಲಿ ಗುರುದ್ವಾರ ಸಮಿತಿ ಅಧ್ಯಕ್ಷ ಹರ್ಮೀತ್ ಸಿಂಗ್ ಕಲ್ಕಾ, ಪದ್ಮಶ್ರೀ ಬಾಬಾ ಬಲ್ಬೀರ್ ಸಿಂಗ್ ಜಿ ಸಿಚೆವಾಲ್ (ಸುಲ್ತಾನ್ಪುರ್ ಲೋಧಿ), ಮಹಂತ್ ಕರಮ್ಜಿತ್ ಸಿಂಗ್, ಅಧ್ಯಕ್ಷ ಸೇವಾಪಂಥಿ ಯಮುನಾನಗರ, ಬಾಬಾ ಜೋಗಾ ಸಿಂಗ್, ಡೇರಾ ಬಾಬಾ ಜಂಗ್ ಸಿಂಗ್ (ನಾನಕ್ಸರ್) ಕರ್ನಾಲ್, ಸಂತ ಬಾಬಾ ಮೇಜರ್ ಸಿಂಗ್, ಮುಖಿ ಡೇರಾ ಬಾಬಾ ತಾರಾ ಸಿಂಗ್, ಅಮೃತಸರ, ಜತೇದಾರ್ ಬಾಬಾ ಸಾಹಿಬ್ ಸಿಂಗ್ ಜಿ, ಕರ್ ಸೇವಾ ಆನಂದಪುರ ಸಾಹಿಬ್, ಸುರೀಂದರ್ ಸಿಂಗ್ ನಾಮಧಾರಿ ದರ್ಬಾರ್ (ಭಾನಿ ಸಾಹಿಬ್), ಬಾಬಾ ಜಸ್ಸಾ ಸಿಂಗ್ ಶಿರೋಮಣಿ ಅಕಾಲಿ ಬುದ್ಧ ದಳ, ಪಂಜ್ವಾ ತಖ್ತೋ, ಡಾ. ಹರ್ಭಜನ್ ಸಿಂಗ್, ದಮ್ದಾಮಿ, ತಕ್ಸಲ್ , ಚೌಕ್ ಮೆಹ್ತಾ, ಸಿಂಗ್ ಸಾಹಿಬ್, ಗಿಯಾನಿ ರಂಜಿತ್ ಸಿಂಗ್ ಜಿ, ಜತೇದಾರ್ ತಖ್ತ್ ಶ್ರೀ ಪಾಟ್ನಾ ಸಾಹಿಬ್ ಮೋದಿಯನ್ನು ಭೇಟಿಯಾಗಿದ್ದಾರೆ.
"
ಪಂಜಾಬಿನ ಸಭೆಗಳಲ್ಲಿ ಸಿಖ್ಖರ ಚರ್ಚೆ
ಗುರುವಾರ ಪಂಜಾಬ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಗುರು ಗೋಬಿಂದ್ ಸಿಂಗ್, ಸಿಖ್ಖರು ಮತ್ತು ರೈತರ ಬಗ್ಗೆ ಮಾತನಾಡಿದರು. ಪಂಜಾಬ್ ಸಿಎಂ ಚನ್ನಿ ಉತ್ತರ ಪ್ರದೇಶ ಮತ್ತು ಬಿಹಾರದ ಕಾರ್ಮಿಕರನ್ನು ಗೇಲಿ ಮಾಡುತ್ತಿದ್ದಾರೆ ಎಂದರು. ಗುರು ರವಿದಾಸ್ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಮತ್ತು ಗುರು ಗೋಬಿಂದ್ ಸಿಂಗ್ ಬಿಹಾರದಲ್ಲಿ ಜನಿಸಿದರು. ಅವರು ಹುಟ್ಟಿದ ಮಣ್ಣನ್ನು ನೀವು ದ್ವೇಷಿಸುತ್ತೀರಾ? ಅವರನ್ನು ಇಲ್ಲಿಗೆ ಬರಲು ಬಿಡುವುದಿಲ್ಲವೇ? ಇಲ್ಲಿನ ಕಾಂಗ್ರೆಸ್ ಸರಕಾರದ ನೀತಿಗಳಿಂದಾಗಿ ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರುತ್ತಿಲ್ಲ ಎಂದರು. ಸಿಖ್ಖರ ಬಗ್ಗೆ ಮಾತನಾಡಿದ ಮೋದಿ, ಕೇಜ್ರಿವಾಲ್ ಪಂಜಾಬ್‌ನಲ್ಲಿ ಸಿಖ್ಖರ ಬಗ್ಗೆ ಮಾತನಾಡುತ್ತಾರೆ, ಆದರೆ ಅವರು ತಮ್ಮ ಸರ್ಕಾರದಲ್ಲಿ ಒಬ್ಬ ಸಿಖ್ ಮಂತ್ರಿಯನ್ನು ಮಾಡಲಿಲ್ಲ ಎಂದು ಹೇಳಿದರು.
Punjab Election : ಕಾಂಗ್ರೆಸ್ ನ ಪಾಪದಿಂದಾಗಿ ಇಂದು ಕರ್ತಾರ್ ಪುರ ಪಾಕಿಸ್ತಾನದ ಭಾಗವಾಗಿದೆ ಎಂದ ಪ್ರಧಾನಿ ಮೋದಿ!
ಪ್ರಧಾನಿಯವರ ಭದ್ರತೆಯ ಲೋಪವನ್ನು ವಿರೋಧಿಸಿ ಸಿಖ್ ಸಂಘಟನೆಗಳು ಪ್ರತಿಭಟನೆ
ಜನವರಿ 5 ರಂದು ಪ್ರಧಾನಿ ಮೋದಿ ಅವರು ಬಟಿಂಡಾದಿಂದ ಪಂಜಾಬ್‌ನ ಫಿರೋಜ್‌ಪುರಕ್ಕೆ ಹೋಗುತ್ತಿದ್ದರು. ಕೆಲ ಪ್ರತಿಭಟನಾಕಾರರು ರಸ್ತೆ ಮಾರ್ಗವಾಗಿ ಹೋಗುವಾಗ ಪ್ರಧಾನಿ ಬೆಂಗಾವಲು ಪಡೆಯ ಮುಂದೆ ಬಂದಿದ್ದರು. ಈ ವಿಚಾರವಾಗಿ ಪಂಜಾಬ್ ಸರ್ಕಾರವನ್ನು ದೇಶ ಮತ್ತು ವಿದೇಶಗಳ ಸಿಖ್ ಸಂಘಟನೆಗಳು ಟೀಕಿಸಿದ್ದವು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರ ನೇತೃತ್ವದಲ್ಲಿ ಪ್ರಧಾನಿ ಭದ್ರತೆಯಲ್ಲಿ ಲೋಪ ಪ್ರಕರಣದ ತನಿಖೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ