ಇಂಧನ ದರ ಏರಿಕೆ ಖಂಡಿಸಲು ಮಮತಾ ಸ್ಕೂಟರ್‌ ರೈಡ್‌!

By Kannadaprabha News  |  First Published Feb 26, 2021, 9:47 AM IST

 ​ವಿ​ದ್ಯುತ್‌ ಚಾಲಿತ ದ್ವಿಚಕ್ರ ವಾಹ​ನ ಚಲಾಯಿಸಿದ ಮಮತಾ ಬ್ಯಾನರ್ಜಿ| ಇಂಧನ ದರ ಏರಿಕೆ ಖಂಡಿಸಲು ಮಮತಾ ಸ್ಕೂಟರ್‌ ರೈಡ್‌!


ಕೋಲ್ಕ​ತಾ(ಫೆ.26): ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರು ​ವಿ​ದ್ಯುತ್‌ ಚಾಲಿತ ದ್ವಿಚಕ್ರ ವಾಹ​ನವನ್ನು ಖುದ್ದಾಗಿ ತಾವೇ ಚಾಲನೆ ಮಾಡುವ ಮೂಲಕ ಇಂಧನ ದರ ಏರಿಕೆ ವಿರುದ್ಧ ವಿಶೇಷ ಪ್ರತಿ​ಭ​ಟನೆ ನಡೆ​ಸಿ​ದರು.

ಗುರು​ವಾರ ಬೆಳಗ್ಗೆ ಬ್ಯಾನರ್ಜಿ ಅವರು ತಮ್ಮ ನಿವಾ​ಸ​ದಿಂದ 7 ಕಿ. ಮೀ ದೂರದ ವಿಧಾ​ನ​ಸೌ​ಧಕ್ಕೆ ವಿದ್ಯುತ್‌ ಚಾಲಿತ ಸ್ಕೂಟ​ರ್‌​ನಲ್ಲಿ ಹಿಂಬದಿ ಸವಾ​ರ​ರಾಗಿ ತೆರ​ಳಿ​ದರು. ಆದರೆ ವಿಧಾ​ನ​ಸೌ​ಧ​ದಿಂದ ಹಿಂದಿ​ರು​ಗು​ವಾಗ ಎಲೆ​ಕ್ಟ್ರಿಕ್‌ ಚಾಲಿತ ಸ್ಕೂಟರ್‌ ಅನ್ನು ಬ್ಯಾನರ್ಜಿ ಅವರು ತಾವೇ ಚಾಲನೆ ಮಾಡಿ​ದರು.

| West Bengal CM Mamata Banerjee nearly falls while driving an electric scooter in Howrah, as a mark of protest against fuel price hike. She quickly regained her balance with support and continued to drive.

She is travelling to Kalighat from State Secretariat in Nabanna pic.twitter.com/CnAsQYNhTP

— ANI (@ANI)

Tap to resize

Latest Videos

ಈ ವೇಳೆ ‘ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ದರವೂ ಭಾರೀ ಏರಿಕೆ ಕಂಡಿದೆ. ಆದರೆ ನಿಮ್ಮ ಬಾಯಲ್ಲಿ ಏನಿ​ಟ್ಟು​ಕೊಂಡಿ​ದ್ದೀ​ರಿ’ ಎಂಬ ಸ್ಲೋಗನ್‌ ಇರುವ ಬ್ಯಾನರ್‌ ಅನ್ನು ತಮ್ಮ ಕುತ್ತಿ​ಗೆಗೆ ನೇತು ಹಾಕಿ​ಕೊಂಡಿ​ದ್ದರು.

click me!