
ಒಟ್ಟಿನಲ್ಲಿ ಏನೇ ಆದರೂ, ಅದಕ್ಕೊಂದು ಧರ್ಮ, ಜಾತಿಯ ನಂಟು ಕಟ್ಟುವುದು ಭಾರತದಲ್ಲಿಯಂತೂ ಇದ್ದೇ ಇದೆ. ಇದೀಗ ಸ್ಮಿತ್ ಮಚ್ಚಾರ್ ವಿಚಾರದಲ್ಲಿಯೂ ಅದೇ ರೀತಿ ಆಗುತ್ತಿದೆ. ಇದಾಗಲೇ ಉಗ್ರ ಕೃತ್ಯಕ್ಕೆ ಕೈಹಾಕಿ 180 ಪ್ರಯಾಣಿಕರ ಸಾವನ್ನು ಬಯಸಿದ್ದ ಕೋ-ಪೈಲಟ್ ಹೆಸರು ಬಹಿರಂಗಗೊಂಡಿದೆ. ಈಗ ಓಮಾನ್ ದೇಶದಿಂದಲೇ ನಿಷೇಧಕ್ಕೆ ಒಳಗಾಗಿದ್ದ ಹಮಾಮ್ ಅಲ್ಹಮ್ಮಮಿ ಎಂದು ತಿಳಿದುಬಂದಿದೆ. ಈತನಿಗೆ ಅಲ್-ಕೈದಾ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಲಿಂಕ್ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯುಎಇನಲ್ಲಿ ಜನಿಸಿದ ಈತನ ತಂದೆ ಒಮಾನ್ ಹಾಗೂ ತಾಯಿ ಸಿರಿಯಾ ಮೂಲದವರಾಗಿದ್ದಾರೆ. ಈತ ಈ ಹಿಂದೆ ತೀವ್ರಗಾಮಿ ಇಸ್ಲಾಮಿಕ್ ಸಿದ್ಧಾಂತ ಹಾಗೂ ಅಲ್-ಖೈದಾ ಉಗ್ರಗಾಮಿ ಸಂಘಟನೆಯನ್ನು ಬೆಂಬಲಿಸುವ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಹಿನ್ನೆಲೆಯಲ್ಲಿ ಒಮಾನ್‌ನಲ್ಲಿ ಈತನಿಗೆ ವಿಮಾನ ಹಾರಾಟ ನಡೆಸದಂತೆ ನಿಷೇಧ ಹೇರಲಾಗಿತ್ತು ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಆತನ ಹಿನ್ನೆಲೆ ಮತ್ತು ಈ ದಾಳಿಯ ಹಿಂದಿನ ಭಯೋತ್ಪಾದನಾ ಕೋನಗಳ ಕುರಿತು ವಿವಿಧ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.
ಉಗ್ರ ಕೃತ್ಯ ನಡೆಸಿದವನ ಹೆಸರು ಬಯಲಾಗುತ್ತಿದ್ದಂತೆಯೇ, ಸಹಜವಾಗಿ ಹೀರೋ ಎನ್ನಿಸಿಕೊಂಡ ಸ್ಮಿತ್ ಮಚ್ಚಾರ್ ಬಗ್ಗೆ ಜನರಿಗೆ ಕುತೂಹಲ ಹೆಚ್ಚಾಗಿದ್ದು, ಅವರ ಸರ್ನೇಮ್ನಿಂದ ಜಾತಿ ಯಾವುದು ಎಂದು ತಿಳಿದುಕೊಳ್ಳುವ ಹಂಬಲ ಹೆಚ್ಚುತ್ತಿದೆ. ಇದಾಗಲೇ ಕೆಲವರಿಗೆ ಸ್ಮಿತ್ ಮಚ್ಚಾರ್ ಅವರ ಮೂಲ ಯಾವುದು, ಅವರು ಯಾವ ಜಾತಿ ಎನ್ನುವುದು ತಿಳಿದಿದೆ.
ಅಂದಹಾಗೆ, ಸ್ಮಿತ್ ಮಚ್ಚಾರ್, ಗುಜರಾತ್ ರಾಜ್ಯದವರು. ಮಚ್ಚಾರ್ ಎನ್ನುವ ಬಗ್ಗೆ ಹಲವರು ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಗುಜರಾತ್‌ನಲ್ಲಿ, ಇದು ಹಾಥಿ, ಮಂಕ್ಡಿ, ಬಕ್ರಿ ಮತ್ತು ಪೋಪಟ್‌ನಂತಹ ಉಪನಾಮಗಳ ಜೊತೆಗೆ ಇರುತ್ತದೆ. ಆದರೆ ನಿಜವಾಗಿಯೂ ಸ್ಮಿತ್ ಮಚ್ಚಾರ್ ಅವರು, ಸೌರಾಷ್ಟ್ರದ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎನ್ನುವುದು ತಿಳಿದು ಬಂದಿದೆ. 1960 ರ ದಶಕದಲ್ಲಿ, ಮಾಜಿ ಸಂಸತ್ ಸದಸ್ಯ ಜೈಸುಖ್‌ಲಾಲ್ ಲಾಲ್ಶಂಕರ್ ಹಾಥಿ ಅವರನ್ನು ಮಚ್ಚಾರ್ ಎಂಬುವವರನ್ನು ಸನ್ಮಾನಿಸಿದ್ದರು. ಆ ಸಂದರ್ಭದಲ್ಲಿಯೇ ಇದು ಚರ್ಚೆಗೆ ಬಂದಿತ್ತು ಎನ್ನುವುದು ವಿಶೇಷವಾಗಿದ್ದು, ಇವರು ಗುಜರಾತಿನ ಸೌರಾಷ್ಟ್ರದ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಸರ್ನೇಮ್ ಎನ್ನುವುದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ