5 ವರ್ಷದ ಬಾಲಕನಿಗೆ ಕಾನ್ಸ್‌ಟೇಬಲ್ ಹುದ್ದೆ: ಅಪ್ಪನ ಸಾವಿನ ನಂತರ ಮಗನಿಗೆ ಕೆಲಸ

By Anusha KbFirst Published Mar 24, 2023, 3:09 PM IST
Highlights

ಪೊಲೀಸ್‌ ಅಧಿಕಾರಿಯೊಬ್ಬರ ಹಠಾತ್‌ ನಿಧನದ ನಂತರ ಅವರ 5 ವರ್ಷದ ಪುತ್ರನನ್ನು ಮಕ್ಕಳ ಪೊಲೀಸ್ ಕಾನ್ಸ್‌ಟೇಬಲ್ ಆಗಿ ನೇಮಕ ಮಾಡಿದ ಅಪರೂಪದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

ಸರ್ಗುಜಾ (ಛತ್ತೀಸ್‌ಗಢ): ಪೊಲೀಸ್‌ ಅಧಿಕಾರಿಯೊಬ್ಬರ ಹಠಾತ್‌ ನಿಧನದ ನಂತರ ಅವರ 5 ವರ್ಷದ ಪುತ್ರನನ್ನು ಮಕ್ಕಳ ಪೊಲೀಸ್ ಕಾನ್ಸ್‌ಟೇಬಲ್ ಆಗಿ ನೇಮಕ ಮಾಡಿದ ಅಪರೂಪದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿ ರಾಜ್ ಕುಮಾರ್ ರಾಜವಾಡೆ ಎಂಬುವವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ 5 ವರ್ಷದ ಪುತ್ರನಿಗೆ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಕೆಲಸ ನೀಡಲಾಗಿದೆ.  ಈ ಹಿನ್ನೆಲೆ ಈಗ ಯುಕೆಜಿ ವಿದ್ಯಾರ್ಥಿಯಾಗಿರುವ 5 ವರ್ಷದ ಬಾಲಕ ನಮನ್ ರಾಜ್‌ವಾಡೆ (Naman Rajwade) ಪೊಲೀಸ್ ಪೇದೆಯಾಗಿ ಛತ್ತೀಸ್‌ಗಢ ಪೊಲೀಸ್ ಇಲಾಖೆ ಸೇರಿದ್ದಾರೆ. 

ಛತ್ತೀಸ್‌ಗಢದ ಸರ್ಗುಜಾದಲ್ಲಿ ಮಕ್ಕಳ ಕಾನ್‌ಸ್ಟೇಬಲ್ (Child Constable) ಆಗಿ ಅವರನ್ನು ನೇಮಿಸಲಾಗಿದೆ. ಮಹಿಳಾ ಠಾಣೆಯಲ್ಲಿ ನಮನ್ ತಂದೆ ರಾಜ್ ಕುಮಾರ್ ರಾಜವಾಡೆ ಪೊಲೀಸ್ ಅಧಿಕಾರಿಯಾಗಿ  ಕಾರ್ಯನಿರ್ವಹಿಸಿದ್ದರು, ಆದರೆ ಇತ್ತೀಚೆಗೆ ಅವರು ಅಪಘಾತದಲ್ಲಿ ನಿಧನರಾಗಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಆಡಳಿತ ಮಂಡಳಿ ಅನುಕಂಪದ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಪೊಲೀಸ್ ಅಧಿಕಾರಿ ಪತ್ನಿ ನಿತು ರಾಜ್‌ವಾಡೆ (Nitu Rajwade),ನನ್ನ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈಗ ನನ್ನ ಮಗನನ್ನು ಮಕ್ಕಳ ಕಾನ್‌ಸ್ಟೇಬಲ್ ಆಗಿ ನೇಮಿಸಲಾಗಿದೆ. ಗಂಡನನ್ನು ಕಳೆದುಕೊಂಡಿರುವ ಬಗ್ಗೆ ನೋವಿದೆ. ಆದರೆ ಮಗುವಿಗೆ ಪೊಲೀಸ್ ಹುದ್ದೆ ನೀಡಿರುವುದಕ್ಕೆ ಖುಷಿ ಆಗಿದೆ ಎಂದು ಹೇಳಿದ್ದಾರೆ. 

Latest Videos

ನಕಲಿ ಸರ್ಕಾರಿ ಕಚೇರಿ ತೆರೆದು ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ. ವಂಚನೆ..!

ಈ ಬಗ್ಗೆಎಎನ್‌ಐಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಭಾವನಾ ಗುಪ್ತಾ (Bhavna Gupta), ಆಡಳಿತ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಮಾರ್ಗಸೂಚಿಗಳ ಪ್ರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಕೇಂದ್ರ ಕಚೇರಿಯ ಮಾರ್ಗಸೂಚಿಗಳ ಪ್ರಕಾರ, ಹುದ್ದೆಯಲ್ಲಿರುವವರು ಅಕಾಲಿಕವಾಗಿ ಸಾವನ್ನಪ್ಪಿದ್ದರೆ ಅವರ ಕುಟುಂಬದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇದ್ದರೆ, ಅವರನ್ನು ನೇಮಕ ಮಾಡಲಾಗುತ್ತದೆ. ಅದರಂತೆ  'ಮಕ್ಕಳ ಕಾನ್ಸ್‌ಟೇಬಲ್'. ಹುದ್ದೆಯ  ಅಡಿಯಲ್ಲಿ ನಮನ್ ರಾಜ್‌ವಾಡೆ ಅವರನ್ನು ಮಕ್ಕಳ ಕಾನ್‌ಸ್ಟೇಬಲ್ ಆಗಿ ನೇಮಿಸಲಾಗಿದೆ ಎಂದು ಅವರು ಹೇಳಿದರು.
 

Surguja, Chhattisgarh | 5-year-old boy posted as child constable after death of his father who was a Police constable

Raj Kumar Rajwade was a Police officer who passed away in an accident. Today, his son Naman Rajwade was appointed as child constable: Bhavna Gupta, SP (23/03) pic.twitter.com/yJ6QopG9Eq

— ANI MP/CG/Rajasthan (@ANI_MP_CG_RJ)

'ನನ್‌ ಹೆಂಡ್ತಿಗೆ ಸೊಳ್ಳೆ ಕಚ್ತಿದೆ..' ಎಂದು ಟ್ವೀಟ್‌ ಮಾಡಿದ ವ್ಯಕ್ತಿಗೆ ಸೊಳ್ಳೆಬತ್ತಿ ತಂದುಕೊಟ್ಟ ಪೊಲೀಸ್‌!

click me!