ವಿಶ್ವದ ಅತೀದೊಡ್ಡ ಮುಸ್ಲಿಂ ದೇಶದಿಂದ ಪ್ರಧಾನಿ ಮೋದಿಗೆ ವಿಶೇಷ ಮನವಿ!

By Santosh Naik  |  First Published Dec 12, 2022, 4:14 PM IST

ಇಂಡೋನೇಷ್ಯಾದ ವಿದೇಶಾಂಗ ಸಚಿವೆ ರೆಟ್ನೋ ಮರ್ಸುಡಿ ಅವರು ಮ್ಯಾನ್ಮಾರ್ ಬಗ್ಗೆ ಭಾರತಕ್ಕೆ ವಿಶೇಷ ಮನವಿ ಮಾಡಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಆಸಿಯಾನ್) ನೀತಿಯನ್ನು ಭಾರತ ಗೌರವಿಸಬೇಕು ಮತ್ತು ಅದೇ ಹಾದಿಯಲ್ಲಿ ಮುನ್ನಡೆಯಬೇಕು ಎಂದು ರೆಟ್ನೋ ಮರ್ಸುಡಿ ಮನವಿ ಮಾಡಿದ್ದಾರೆ.
 


ನವದೆಹಲಿ (ಡಿ.12): ಮಯನ್ಮಾರ್‌ ದೇಶದಲ್ಲಿ ಪ್ರಜಾಸತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಕೆಡವಿ, ಸೇನಾ ಆಡಳಿತ ಜಾರಿಯಾಗಿರುವ ಕುರಿತಂತೆ ಇಂಡೋನೇಷ್ಯಾ ಭಾರತಕ್ಕೆ ವಿಶೇಷ ಮನವಿಯೊಂದನ್ನು ಮಾಡಿದೆ. ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದೊಂದಿಗೆ ಭಾರತ ಮಾತುಕತೆ ನಡೆಸಬಾರದು ಎಂದು ಇಂಡೋನೇಷ್ಯಾ ಬಯಸಿದೆ. ಭಾರತ ಮತ್ತು ಇತರ ದೇಶಗಳು ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ನೀತಿಯನ್ನು ಗೌರವಿಸಬೇಕು ಮತ್ತು ಮ್ಯಾನ್ಮಾರ್ ವಿಷಯದಲ್ಲಿ ಬೇರೆ ಯಾವುದೇ ಮಾರ್ಗವನ್ನು ತೆಗೆದುಕೊಳ್ಳುವ ಬದಲು ಅದನ್ನು ಅನುಸರಿಸಬೇಕು ಎಂದು ಇಂಡೋನೇಷ್ಯಾದ ವಿದೇಶಾಂಗ ಸಚಿವ ರೆಟ್ನೋ ಮರ್ಸುಡಿ ಹೇಳಿದ್ದಾರೆ. ಇಂಡೋನೇಷ್ಯಾದ ವಿದೇಶಾಂಗ ಸಚಿವರು 'ದಿ ಹಿಂದೂ' ಪತ್ರಿಕೆಯೊಂದಿಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ್ದು, ಭಾರತವು ನಮ್ಮ ಮನವಿಯನ್ನು ಪುರಸ್ಕರಿಸದೇ ಇದ್ದಲ್ಲಿ, ಅದು ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ASEAN) ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು.

ಆಸಿಯಾನ್ ದೇಶಗಳ ಐದು ಅಂಶಗಳ ಒಮ್ಮತದ ಪ್ರಕಾರ ಮುಂದುವರಿಯುವಂತೆ ಇಂಡೋನೇಷ್ಯಾದ ವಿದೇಶಾಂಗ ಸಚಿವರು ಭಾರತ ಸೇರಿದಂತೆ ಇತರ ದೇಶಗಳಿಗೆ ಮನವಿ ಮಾಡಿದರು. ಈ ಐದು ಅಂಶಗಳ ಒಪ್ಪಂದವು ಮ್ಯಾನ್ಮಾರ್‌ನಲ್ಲಿ ಹಿಂಸಾಚಾರದ ತಕ್ಷಣದ ಅಂತ್ಯ, ವಿಶೇಷ ರಾಯಭಾರಿ ನೇಮಕ, ಎಲ್ಲಾ ಪಕ್ಷಗಳ ನಡುವೆ ಸಂವಾದ, ಆಸಿಯಾನ್‌ನಿಂದ ಮಾನವೀಯ ನೆರವು ಮತ್ತು ಆಸಿಯಾನ್‌ನ ವಿಶೇಷ ರಾಯಭಾರಿಗೆ ಎಲ್ಲಾ ಪಕ್ಷಗಳನ್ನು ಭೇಟಿ ಮಾಡಲು ಅವಕಾಶ ನೀಡುವಂತಹ ಅಂಶಗಳನ್ನು ಒಳಗೊಂಡಿದೆ.

"ಆಸಿಯಾನ್‌ ಪಾಲುದಾರ ದೇಶಗಳಿಗೆ ನಮ್ಮ ಸಂದೇಶವು ಆಸಿಯಾನ್‌ನ ಪ್ರಯತ್ನಗಳನ್ನು ಬೆಂಬಲಿಸುವುದಾಗಿದೆ, ಹಾಗೇನಾದರೂ ನೀವು ವಿಭಿನ್ನವಾಗಿ ಏನನ್ನಾದರೂ ಮಾಡಲು ಪ್ರಯತ್ನಿಸಿದರೆ, ಅದು ನಮ್ಮನ್ನು ದುರ್ಬಲಗೊಳಿಸುತ್ತದೆ, ಜೊತೆಗೆ ಮ್ಯಾನ್ಮಾರ್ ಈ ರಾಜಕೀಯ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡುತ್ತದೆ." ಎಂದು ಹೇಳಿದ್ದಾರೆ. ನಾವು ಮತ್ತೆ ಮತ್ತೆ ಹೇಳುತ್ತಿದ್ದೇವೆ, ದಯವಿಟ್ಟು ಆಸಿಯಾನ್ ಅನ್ನು ಗೌರವಿಸಿ ಮತ್ತು ಐದು ಅಂಶಗಳ ಒಮ್ಮತವನ್ನು ಬೆಂಬಲಿಸಿ ಎಂದು ಹೇಳಿದರು. ಈ ವಿಚಾರದ ಕುರಿತಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರೊಂದಿಗೂ ಮಾತನಾಡಿದ್ದೇವೆ ಎಂದು ಇಂಡೋನೇಷ್ಯಾದ ವಿದೇಶಾಂಗ ಸಚಿವೆ ರೆಟ್ನೊ ಮರ್ಸುಡಿ ತಿಳಿಸಿದ್ದಾರೆ.

ಮಯನ್ಮಾರ್ ಪದಚ್ಯುತ ನಾಯಕಿಗೆ 6 ವರ್ಷ ಜೈಲು, ಭ್ರಷ್ಟಚಾರಕ್ಕೆ ಬೆಲೆ ತೆತ್ತ ಸೂಕಿ!

Tap to resize

Latest Videos

BIMSTEC ವರ್ಚುವಲ್‌ ಸಭೆಯಲ್ಲಿ ಭಾಗವಹಿಸಿದ್ದ  ಮ್ಯಾನ್ಮಾರ್ ವಿದೇಶಾಂಗ ಸಚಿವ:  ಫೆಬ್ರವರಿ 2021 ರಲ್ಲಿ ಸೇನೆಯು ಮ್ಯಾನ್ಮಾರ್‌ನಲ್ಲಿ ಅಧಿಕಾರವನ್ನು ಪಡೆದುಕೊಂಡಿದೆ. ಆಗ ಬಹುತೇಕ ದೇಶಗಳು ಇದನ್ನು ವಿರೋಧಿಸಿದ್ದವು. ಆದರೆ ಮಾರ್ಚ್ 2022 ರಲ್ಲಿ, BIMSTEC ಸಂಘಟನೆಯ ವರ್ಚುವಲ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ವಿದೇಶಾಂಗ ಸಚಿವರನ್ನು ಭಾರತ ಮತ್ತು ಶ್ರೀಲಂಕಾ ಆಹ್ವಾನಿಸಿದವು. ಆಸಿಯಾನ್ ಸದಸ್ಯರು ಮತ್ತು ಅಮೆರಿಕ ಕೂಡ ಈ ವಿಷಯದಲ್ಲಿ ಕಳವಳ ವ್ಯಕ್ತಪಡಿಸಿತ್ತು.

ICJಯಲ್ಲಿ ರೋಹಿಂಗ್ಯಾ ನರಮೇಧ ವಿಚಾರಣೆ : ವಾದ ಮಂಡನೆಗೆ ಸೂಕಿ ಬದಲು ಸಮಿತಿ ರಚನೆ

ಫೆಬ್ರವರಿ 2021 ರಲ್ಲಿ, ಆಂಗ್ ಸಾನ್ ಸೂಕಿಯ ಚುನಾಯಿತ ಸರ್ಕಾರವನ್ನು ಸಂಸತ್ತಿನಲ್ಲಿ ಹೊರಹಾಕುವ ಮೂಲಕ ಮ್ಯಾನ್ಮಾರ್‌ ಸೇನೆಯು ದೇಶದ ಅಧಿಕಾರ ಹಿಡಿದಿತ್ತು. ಅಂದಿನಿಂದ ದೇಶದಲ್ಲಿ ವಿವಾದ ಶುರುವಾಗಿತ್ತು. ಸೇನಾ ಆಡಳಿತದ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಮಾಡಿದವರನ್ನು ಸೇನೆ ಶಿಕ್ಷೆಗ ಒಳಪಡಿಸಿದೆ. ಆದರೆ, ಜನರ ಅಸಮಾಧಾನ ಮಾತ್ರ ಈವರೆಗೂ ಕಡಿಮೆಯಾಗಿಲ್ಲ. ಮಿಲಿಟರಿ ಆಡಳಿತ ಆರಂಭವಾದ ಬೆನ್ನಲ್ಲಿಯೇ, ಆಗಿನ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ಪಕ್ಷಗಳ ದೊಡ್ಡ ನಾಯಕರನ್ನು ಬಂಧಿಸಲಾಯಿತು. ವಿಶೇಷವಾಗಿ ಆಂಗ್ ಸಾನ್ ಸೂಕಿ ಭ್ರಷ್ಟಾಚಾರ ಸೇರಿದಂತೆ ಹಲವು ಅಪರಾಧಗಳನ್ನು ಸೇನೆ ಹೊರಿಸಿದೆ.. ಒಂದು ಕಾಲದಲ್ಲಿ ಶಾಂತಿಗಾಗಿ ನೊಬೆಲ್ ಗೆದ್ದ ಆಂಗ್ ಸಾನ್ ಸೂಕಿ ಪ್ರಸ್ತುತ ಜೈಲಿನಲ್ಲಿದ್ದಾರೆ.

click me!