ಮದ್ಯ ಆಯ್ತು ಈಗ 12 ಬ್ರಾಂಡ್‌ ಪಾನ್‌ ಮಸಾಲ ಮಾರಾಟ ಬಂದ್‌!

By Web DeskFirst Published Aug 31, 2019, 9:01 AM IST
Highlights

ಪಾನ್‌ ಮಸಾಲದ 20 ನಮೂನೆಗಳಲ್ಲಿ ಮ್ಯಾಗ್ನೇಷಿಯಂ ಕಾರ್ಬೊನೇಟ್‌ ಅಂಶ ಪತ್ತೆ| ಬಿಹಾರದಲ್ಲಿ ಮದ್ಯ ಆಯ್ತು ಈಗ 12 ಬ್ರಾಂಡ್‌ ಪಾನ್‌ ಮಸಾಲ ಮಾರಾಟ ಬಂದ್‌| 

ಪಟನಾ[ಆ.31]: ಈಗಾಗಲೇ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರ ಇದೀಗ, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಮ್ಯಾಗ್ನೇಷಿಯಂ ಕಾರ್ಬೊನೇಟ್‌ ಅಂಶವನ್ನೊಳಗೊಂಡ 12 ಬ್ರಾಂಡ್‌ಗಳ ಪಾನ್‌ ಮಸಾಲಗಳ ಮೇಲೆ ಒಂದು ವರ್ಷ ಕಾಲ ನಿಷೇಧ ಹೇರಿದೆ.

ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಚಾನ್ಸ್‌!

ಇತ್ತೀಚೆಗಷ್ಟೇ ರಾಜ್ಯದ 9 ಜಿಲ್ಲೆಗಳಿಂದ ಆಹಾರ ಸುರಕ್ಷತಾ ಅಧಿಕಾರಿಗಳು ವಶಕ್ಕೆ ಪಡೆದ ಪಾನ್‌ ಮಸಾಲದ 20 ನಮೂನೆಗಳಲ್ಲಿ ಮ್ಯಾಗ್ನೇಷಿಯಂ ಕಾರ್ಬೊನೇಟ್‌ ಅಂಶ ಪತ್ತೆಯಾಗಿತ್ತು. ಈ ಪ್ರಕಾರ ರಾಜ್ಯದ ಎಲ್ಲೆಡೆಯೂ ಈ ಪಾನ್‌ ಮಸಾಲ ಸಂಗ್ರಹ, ಸಾಗಣೆ, ಸೇವನೆ ಹಾಗೂ ಮಾರಾಟವು ಅಪರಾಧವಾಗಲಿದ್ದು, ಒಂದು ವೇಳೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

2 ಮದ್ಯ ಕಂಪನಿಗಳಿಂದ 700 ಕೋಟಿ ರೂ. ತೆರಿಗೆ ಗೋಲ್‌ಮಾಲ್‌!

ಅಲ್ಲದೆ, ದಂಡವನ್ನು ವಿಧಿಸಲಾಗುತ್ತದೆ ಎಂದು ಬಿಹಾರದ ಮುಖ್ಯ ಕಾರ್ಯದರ್ಶಿ ದೀಪಕ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

click me!