ಹಮಾಸ್ ಜೊತೆಗಿನ ಸಂಘರ್ಷದ ಬೆನ್ನಲ್ಲೇ ಭಾರತದಿಂದ ವಿವಿಧ ಉದ್ಯೋಗ ವಲಯಕ್ಕೆ 1 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲು ಇಸ್ರೇಲ್‌ನಲ್ಲಿ ಬೇಡಿಕೆ ವ್ಯಕ್ತವಾಗಿದೆ ಎಂಬ ಸುದ್ದಿಯ ನಡುವೆಯೇ ತೈವಾನ್ ಕೂಡಾ ಭಾರತದಿಂದ 1 ಲಕ್ಷ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ.
ನವದೆಹಲಿ: ಹಮಾಸ್ ಜೊತೆಗಿನ ಸಂಘರ್ಷದ ಬೆನ್ನಲ್ಲೇ ಭಾರತದಿಂದ ವಿವಿಧ ಉದ್ಯೋಗ ವಲಯಕ್ಕೆ 1 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲು ಇಸ್ರೇಲ್‌ನಲ್ಲಿ ಬೇಡಿಕೆ ವ್ಯಕ್ತವಾಗಿದೆ ಎಂಬ ಸುದ್ದಿಯ ನಡುವೆಯೇ ತೈವಾನ್ ಕೂಡಾ ಭಾರತದಿಂದ 1 ಲಕ್ಷ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದೆ. ಈ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ (Ministry of External Affairs), ಕೇಂದ್ರ ಸರ್ಕಾರ (central government) ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಕಾರ್ಮಿಕ ವಿನಿಮಯ ಒಪ್ಪಂದ ಮಾಡಿಕೊಳ್ಳುತ್ತಿದೆ.
ಅದರ ಮೊದಲ ಭಾಗವಾಗಿ ಮುಂದಿನ ತಿಂಗಳು ತೈವಾನ್ (Taiwan)ದೇಶದ ಕಾರ್ಖಾನೆ, ಆಸ್ಪತ್ರೆ ಹಾಗೂ ಹೊಲಗಳಲ್ಲಿ ದುಡಿಯಲು ಕಾರ್ಮಿಕರನ್ನು ಕಳುಹಿಸಲಾಗುತ್ತಿದೆ. ಹಂತಹಂತವಾಗಿ ಈ ಪ್ರಮಾಣವನ್ನು 1 ಲಕ್ಷಕ್ಕೆ ಏರಿಸಲಾಗುವುದು. ಇದು 2025ರ ವೇಳೆಗೆ ತನ್ನ ಜನಸಂಖ್ಯೆಯ ಶೇ.20ರಷ್ಟು ವೃದ್ಧರನ್ನೇ ಹೊಂದಲಿರುವ ತೈವಾನ್‌ಗೆ ತನ್ನ ಆರ್ಥಿಕತೆಯನ್ನು ಸ್ಥಿರವಾಗಿ ಇಟ್ಟುಕೊಳ್ಳಲು ಸಹಾಯಕವಾಗಲಿದೆ' ಎಂದು ತಿಳಿಸಿದರು. ಆದರೆ ತೈವಾನ್ ತನ್ನದೇ ಪ್ರದೇಶವೆಂದು ವಾದಿಸುತ್ತಿರುವ ಚೀನಾ ಈ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾಕಿಸ್ತಾನದ ಮೀನುಗಾರ
ನಿರ್ಗತಿಕನ ಬದುಕು ಬದಲಿಸಿದ ಕುದುರೆ ರೇಸ್: 5 ಡಾಲರ್ ಬೆಟ್ ಕಟ್ಟಿದವನಿಗೆ ಒಲಿಯಿತು 1 ಲಕ್ಷ ಡಾಲರ್
ಗಾಜಾ ಶಿಬಿರ: 50 ಸಾವಿರ ನಿರಾಶ್ರಿತರಿಗೆ ಬರೀ 4 ಟಾಯ್ಲೆಟ್, 4 ತಾಸಷ್ಟೇ ನೀರು!