8 ದಶಕಗಳ ಸುಧೀರ್ಘ ಸೇವೆಯ ಬಳಿಕ ವಾಯುಪಡೆಗೆ ಮಿಗ್‌ 21 ಗುಡ್‌ಬೈ

By Kannadaprabha NewsFirst Published Nov 1, 2023, 7:32 AM IST
Highlights

1970ರ ದಶಕದಲ್ಲಿ ಎದುರಾಳಿಯ ಎದೆಯನ್ನು ನಡುಗಿಸಿದ್ದ ಭಾರತೀಯ ವಾಯುಪಡೆಯ ಮಿಗ್‌ 21 ಬೈಸನ್ ಯುದ್ಧ ವಿಮಾನಗಳನ್ನು ಮಂಗಳವಾರ ಅಧಿಕೃತವಾಗಿ ಸೇವೆಯಿಂದ ಹಿಂದಕ್ಕೆ ಪಡೆಯಲಾಯಿತು

ನವದೆಹಲಿ: 1970ರ ದಶಕದಲ್ಲಿ ಎದುರಾಳಿಯ ಎದೆಯನ್ನು ನಡುಗಿಸಿದ್ದ ಭಾರತೀಯ ವಾಯುಪಡೆಯ ಮಿಗ್‌ 21 ಬೈಸನ್ ಯುದ್ಧ ವಿಮಾನಗಳನ್ನು ಮಂಗಳವಾರ ಅಧಿಕೃತವಾಗಿ ಸೇವೆಯಿಂದ ಹಿಂದಕ್ಕೆ ಪಡೆಯಲಾಯಿತು. ಇದರ ಸ್ಥಾನವನ್ನು ಎಚ್‌ಎಎಲ್‌ ನಿರ್ಮಿಸಿರುವ ದೇಶೀಯ ಎಲ್‌ಸಿಎ ತೇಜಸ್‌ ಮಾರ್ಕ್‌ 1ಎ ತುಂಬಲಿದೆ.

1960ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಮಿಗ್‌ 21 ವಿಮಾನಗಳು 1971ರಲ್ಲಿ ನಡೆದ ಯುದ್ಧದ ವೇಳೆ ಪಾಕಿಸ್ತಾನದ ಹಲವು ನಗರಗಳ ಮೇಲೆ ಬಾಂಬ್‌ ದಾಳಿ ಮಾಡಿತ್ತು. ಹಿಂದಿನ ಸೋವಿಯತ್‌ ಒಕ್ಕೂಟ (Soviet Union)ಮಿಖೋಯೆನ್‌ ಗುರ್ವಿಚ್‌ ಕಂಪನಿ 1959ರಲ್ಲಿ ಮೊದಲ ಬಾರಿ ಮಿಗ್‌ 21 ಬೈಸನ್‌ ವಿಮಾನಗಳನ್ನು ತಯಾರಿಸಿ ವಿಶ್ವದಾದ್ಯಂತ ಖ್ಯಾತಿ ಪಡೆದಿತ್ತು. ಈವರೆಗೆ ಇಂಥ 11,496 ವಿಮಾನಗಳನ್ನು ತಯಾರಿಲಾಗಿದ್ದು, ಜಗತ್ತಿನ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಈ ಪೈಕಿ ಭಾರತದ ನಾಸಿಕ್‌ನಲ್ಲಿ 840 ವಿಮಾನಗಳನ್ನು ತಯಾರಿಸಲಾಗಿತ್ತು. ಪ್ರಸ್ತುತ 50 ವಿಮಾನಗಳು ಭಾರತೀಯ ವಾಯುಪಡೆಯ ಸೇವೆಯಲ್ಲಿದೆ.

ವಿಶ್ವದಲ್ಲಿ 400 ವಿಮಾನಗಳು ಭದ್ರತಾ ಲೋಪ (Security Lapse)ಕಾರಣ ಪತನಗೊಂಡಿದೆ. ಇದನ್ನು ಹೊರತುಪಡಿಸಿ ಈ ವಿಮಾನ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ಯುದ್ಧ ವಿಮಾನ ಎಂಬ ಕೀರ್ತಿಗಳಿಸಿದೆ. ಇದೀಗ ಈ ವಿಮಾನದ ಆಯಸ್ಸು ಮುಗಿದಿರುವ ಕಾರಣ 2024ರ ಒಳಗೆ ಇವುಗಳನ್ನು ಹಿಂಪಡೆದುಕೊಳ್ಳಲು ವಾಯುಪಡೆ (Airforce) ನಿರ್ಧರಿಸಿದೆ.

ಮಕ್ಕಳ ವಿರುದ್ಧ ಕೋರ್ಟ್‌ ಕೇಸ್ ಗೆದ್ದ 75ರ ವೃದ್ಧ ತಾಯಿ: 40ರ ಮಕ್ಕಳಿಗೀಗ ಬಯಲೇ ಗತಿ

click me!