ಟೋಕನ್‌ ಹಿಡಿದು 6 ತಾಸು ಕಾದು ಕೇಜ್ರಿ ನಾಮಪತ್ರ

By Kannadaprabha News  |  First Published Jan 22, 2020, 11:47 AM IST

ಸುಮಾರು 6 ಗಂಟೆಗಳ ಕಾಲ ಕಾದು ಬಳಿಕ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.


ನವದೆಹಲಿ [ಜ.22] : ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಬರೋಬ್ಬರಿ 6 ತಾಸು ಕಾದು ಬಳಿಕ ನಾಮಪತ್ರ ಸಲ್ಲಿಸಿದ ಘಟನೆ ಮಂಗಳವಾರ ನಡೆದಿದೆ. ಕೇಜ್ರಿವಾಲ್‌ ಸೋಮವಾರವೇ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ ರೋಡ್‌ ಶೋದಿಂದ ತಡವಾಗಿದ್ದರಿಂದ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯವಾಗಿತ್ತು. ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಆದರೆ ಕೇಜ್ರಿವಾಲ್‌ ಬರುವಷ್ಟರಲ್ಲಿ 45 ಮಂದಿ ನಾಮಪತ್ರ ಸಲ್ಲಿಸಲು ಬಂದಿದ್ದರು. ಈ ವೇಳೆ ಟೋಕನ್‌ ವಿತರಿಸಲಾಯಿತು. 45ನೇ ಟೋಕನ್‌ ಪಡೆದು, ಸರತಿ ಸಾಲಿನಲ್ಲಿ ನಿಂತು 6 ಗಂಟೆಗಳ ತರುವಾಯ ಕೇಜ್ರಿ ನಾಮಪತ್ರ ಸಲ್ಲಿಕೆ ಮಾಡಿದರು.

ಈ ನಡುವೆ, ಕೇಜ್ರಿವಾಲ್‌ ನಾಮಪತ್ರ ತಪ್ಪಿಸಲು ಬಿಜೆಪಿಯೇ 45 ಅಭ್ಯರ್ಥಿಗಳನ್ನು  ಭಾರೀ ಪ್ರಮಾಣದ ಆಪ್‌ ಕಾರ್ಯಕರ್ತರ ರೋಡ್‌ ಶೋ ಗದ್ದಲದಿಂದ ಸೋಮವಾರವೇ ಸಲ್ಲಿಸಬೇಕಿದ್ದ ನಾಮಪತ್ರ ದಿನವನ್ನು ದಿನದ ಮಟ್ಟಿಗೆ ಮುಂದೂಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಮಂಗಳವಾರವೂ ಸಾಕಷ್ಟುಹೊತ್ತು ಸರತಿ ಸಾಲಿನಲ್ಲಿ 6 ತಾಸಿಗೂ ಹೆಚ್ಚು ಗಂಟೆಗಳ ಕಾಲ ಕಾದು ಉಮೇದುವಾರಿಕೆ ಸಲ್ಲಿಸಿದ ಪ್ರಸಂಗ ನಡೆದಿದೆ.

Latest Videos

undefined

ಕೇಜ್ರಿಯಿಂದ 10 ಭರವಸೆಯ ಗ್ಯಾರಂಟಿ ಕಾರ್ಡ್‌ ಬಿಡುಗಡೆ...

ಫೆ.8ಕ್ಕೆ ನಿಗದಿಯಾಗಿರುವ ದೆಹಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರ ಅರವಿಂದ್‌ ಕೇಜ್ರಿವಾಲ್‌ ಅವರು ಮಧ್ಯಾಹ್ನದ ವೇಳೆಗೆ ತಮ್ಮ ಕುಟುಂಬ ಸಮೇತರಾಗಿ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದರು. ಈ ವೇಳೆ 45ನೇ ಟೋಕನ್‌ ನಂಬರ್‌ ಸಿಕ್ಕಿತ್ತು. ಹೀಗಾಗಿ, ಕೇಜ್ರಿವಾಲ್‌ ಅವರಿಗೆ 6 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಎದುರಾಗಿತ್ತು. ಈ ಬಗ್ಗೆ ಟ್ವೀಟ್‌ ಮಾಡಿದ ಕೇಜ್ರಿವಾಲ್‌ ಅವರು, ‘ನಾಮಪತ್ರ ಸಲ್ಲಿಕೆಗೆ ಕಾಯುತ್ತಿದ್ದೇನೆ. ನನ್ನ ಟೋಕನ್‌ ಸಂಖ್ಯೆ 45. ಹಲವು ಮಂದಿ ಉಮೇದುವಾರಿಕೆ ಸಲ್ಲಿಕೆಗೆ ಮುಂದಾಗುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ಹಲವು ಮಂದಿ ಭಾಗಿಯಾಗುತ್ತಿರುವುದರ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಹರ್ಷಿಸಿದ್ದರು.

ಆಪ್‌ನಿಂದ ಟಿಕೆಟ್‌ ನಿರಾಕರಣೆ: ಶಾಸ್ತ್ರಿ ಮೊಮ್ಮಗ ಕಾಂಗ್ರೆಸ್‌ಗೆ!...

ಈ ಮೂಲಕ ಕೇಜ್ರಿವಾಲ್‌ ಸ್ಪರ್ಧಿಸಿದ ನವದೆಹಲಿ ವಿಧಾನಸಭೆ ಕ್ಷೇತ್ರಕ್ಕೆ ಒಟ್ಟಾರೆ 66 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮತ್ತೊಂದೆಡೆ, ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದ ಮಂಗಳವಾರ ಕೇಜ್ರಿವಾಲ್‌ ನಾಮಪತ್ರ ಸಲ್ಲಿಕೆಯಾಗದಂತೆ ತಡೆಯುವ ಸಲುವಾಗಿ 45 ಅಭ್ಯರ್ಥಿಗಳನ್ನು ಬಿಜೆಪಿಯೇ ಚುನಾವಣಾಧಿಕಾರಿಗಳ ಕಚೇರಿಗೆ ರವಾನಿಸಿದೆ. ಅಲ್ಲದೆ, ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿಯೇ ಯಾವುದೇ ಸರಿಯಾದ ದಾಖಲೆ ಹೊಂದಿಲ್ಲದ ಅಭ್ಯರ್ಥಿಗಳಿಗೂ ಅರ್ಧ ಗಂಟೆಗಿಂತ ಹೆಚ್ಚಿನ ಕಾಲಾವಕಾಶ ನೀಡುತ್ತಿದೆ ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಅಸಮಾಧಾನ ಹೊರಹಾಕಿದ್ದರು.

click me!