1962ರ ಬಳಿಕ ಮೊದಲ ಬಾರಿಗೆ ಮಾನಸ ಸರೋವರದ ಗುಡ್ಡ ಭಾರತದ ವಶ?

By Suvarna NewsFirst Published Sep 14, 2020, 10:17 AM IST
Highlights

ಮಾನಸ ಸರೋವರದ ಗುಡ್ಡ ಭಾರತದ ವಶ?| 1962ರ ಬಳಿಕ ಮೊದಲ ಬಾರಿಗೆ ಭಾರತದ ತೆಕ್ಕೆಗೆ: ವರದಿ

ನವದೆಹಲಿ(ಸೆ.14): ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾದ ಹಿಡಿತದಲ್ಲಿದ್ದ ಹಿಂದುಗಳ ಪವಿತ್ರ ಮಾನಸ ಸರೋವರದ ದೊಡ್ಡ ಭಾಗವನ್ನು ಭಾರತೀಯ ಸೇನೆ ತನ್ನ ವಶ ಮಾಡಿಕೊಂಡಿದೆ. ಪ್ಯಾಂಗಾಗ್‌ ತ್ಸೋನಿಂದ ದಕ್ಷಿಣದಲ್ಲಿರುವ ಗುರಂಗ್‌ ಪರ್ವತ, ಮಗರ್‌ ಪರ್ವತ ಹಾಗೂ ಕೈಲಾಸ ಮಾನಸ ಸರೋವರ ಇರುವ ಪರ್ವತದ ಮೇಲೆ ಭಾರತೀಯ ಸೇನೆ ಹಿಡಿತ ಸಾಧಿಸಿದೆ ಎಂದು ಹಿಂದಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

1962ರಲ್ಲಿ ಚೀನಾ ಕೈಲಾಸ ಮಾನಸ ಸರೋವರ ಇರುವ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿತ್ತು. ಅಂದಿನಿಂದಲೂ ಈ ಪ್ರದೇಶ ಚೀನಾ ಹಿ​-ಡಿತದಲ್ಲಿಯೇ ಇದೆ. ಆದರೆ, ಆ.29ರಂದು ಚೀನಾದ ಅತಿಕ್ರಮಣಕ್ಕೆ ತಿರುಗೇಟು ನೀಡಿದ್ದ ವೇಳೆ ಭಾರತೀಯ ಸೇನೆ ಕೈಲಾಸ ಮಾನಸ ಸರೋವರವನ್ನು ತನ್ನ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಎಬಿಪಿ ನ್ಯೂಸ್‌ ವರದಿಯೊಂದನ್ನು ಪ್ರಸಾರ ಮಾಡಿದೆ.

ಟಿಬೆಟ್‌ ಭಾಗದಲ್ಲಿರುವ ಕೈಲಾಸ ಮಾನಸ ಸರೋವರ ಹಿಂದುಗಳ ಪಾಲಿನ ಪವಿತ್ರಸ್ಥಳವಾಗಿದ್ದು, ಶಿವ ಅಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆ ಇದೆ. ಲಕ್ಷಾಂತರ ಭಕ್ತರು ಪ್ರತಿವರ್ಷ ಕೈಲಾಸ ಮಾನಸ ಸರೋವರಕ್ಕೆ ಭೇಟಿ ನೀಡುತ್ತಾರೆ.

click me!