ಕೊರೋನಾ ಕಾಲದಲ್ಲಿ ಮೋದಿ ಅಣಿಮುತ್ತೇ ಜನರ ತಾಕತ್ತು!

Published : Sep 14, 2020, 08:59 AM ISTUpdated : Sep 14, 2020, 10:51 AM IST
ಕೊರೋನಾ ಕಾಲದಲ್ಲಿ ಮೋದಿ ಅಣಿಮುತ್ತೇ ಜನರ ತಾಕತ್ತು!

ಸಾರಾಂಶ

ಕೊರೋನಾ ಹೋರಾಟದಲ್ಲಿ ಮೋದಿ ಭಾಷಣ ಪ್ರಮುಖ ಪಾತ್ರ: ಅಧ್ಯಯನ| ಪದೇ ಪದೇ ಜನರನ್ನು ಹುರಿದುಂಬಿಸಿದರು| ಜನರ ನಡವಳಿಕೆಯಲ್ಲೇ ಬದಲಾವಣೆ ತಂದರು| ಬ್ರಿಟನ್‌ ಕೇಂಬ್ರಿಜ್‌ ವಿವಿಯಿಂದ ವರದಿ ಪ್ರಕಟ

ಲಂಡನ್(ಸೆ.14)‌: ಬರೋಬ್ಬರಿ 130 ಕೋಟಿ ಜನರು ಇರುವ ಭಾರತದಲ್ಲಿ ಕೊರೋನಾ ನಿಗ್ರಹಕ್ಕಾಗಿ ಘೋಷಿಸಲಾದ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೆ ಬಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ಮಾಡಿದ ಭಾಷಣವೂ ಪ್ರಮುಖ ಕಾರಣ ಎಂದು ಬ್ರಿಟನ್‌ನ ಪ್ರತಿಷ್ಠಿತ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.

ದೇಶಾದ್ಯಂತ ಲಾಕ್‌ಡೌನ್‌ ಹಾಗೂ ಸಾಮಾಜಿಕ ಅಂತರವನ್ನು ಜನರು ಒಗ್ಗೂಡಿ ಪಾಲಿಸಿದ್ದಕ್ಕೆ ಮೋದಿ ಅವರು ಪದೇ ಪದೇ ಹುರಿದುಂಬಿಸಿದ್ದು ಕಾರಣ ಎಂದು ಯಾಂತ್ರಿಕ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ನಡೆಸಲಾಗಿರುವ ಅಧ್ಯಯನ ತಿಳಿಸಿದೆ. ಇದು ‘ಪಿಎಲ್‌ಒಎಸ್‌ ಒನ್‌’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲೂ ಪ್ರಕಟವಾಗಿದೆ. ಲಾಕ್‌ಡೌನ್‌ ಸೇರಿದಂತೆ ಕೊರೋನಾ ನಿಗ್ರಹಕ್ಕಾಗಿ ವಿಶ್ವದ ವಿವಿಧ ಸರ್ಕಾರಿ ಸಂಸ್ಥೆಗಳು ಯಾವ ರೀತಿ ಜನರನ್ನು ಪ್ರೇರೇಪಿಸುವ ಕ್ರಮಗಳನ್ನು ಕೈಗೊಂಡವು ಎಂಬುದರ ಕುರಿತು ಅಧ್ಯಯನ ಇದಾಗಿದೆ. ಭಾರತ ಅತ್ಯಂತ ವಿಶಾಲವಾದ ಹಾಗೂ ವೈವಿಧ್ಯತೆ ಹೊಂದಿರುವ ದೇಶ. ಪಾಶ್ಚಾತ್ಯ ದೇಶಗಳಲ್ಲಿ ಕಟ್ಟಕಡೆಯ ವ್ಯಕ್ತಿಗೂ ಡಿಜಿಟಲ್‌ ಸಂಪರ್ಕವಿದೆ. ಆದರೆ ಭಾರತದಲ್ಲಿ ಅದು ಶೈಶವಾವಸ್ಥೆಯಲ್ಲಿದೆ. ಹೀಗಾಗಿ ಪಾಶ್ಚಾತ್ಯ ದೇಶಗಳಲ್ಲಿ ಕೊರೋನಾ ನಿಯಂತ್ರಣ ಕ್ರಮಗಳ ಅನುಷ್ಠಾನ ಸುಲಭವಾಗಿತ್ತು ಎಂದು ಅಧ್ಯಯನದ ಸಹ ಲೇಖಕರಾಗಿರುವ ರೋನಿತಾ ಬರ್ಧನ್‌ ತಿಳಿಸಿದ್ದಾರೆ.

ಅಧ್ಯಯನ ವರದಿ ಹೇಳಿದ್ದೇನು?

ಮೋದಿ ಅವರು ಪದೇ ಪದೇ ಕಾಣಿಸಿಕೊಂಡು ಭಾಷಣ ಮಾಡಿದರು. ಇದು 130 ಕೋಟಿ ಜನರನ್ನು ಕಟ್ಟುನಿಟ್ಟಿನ ಲಾಕ್‌ಡೌನ್‌ ಹಾಗೂ ಸಾಮಾಜಿಕ ಅಂತರದ ವ್ಯವಸ್ಥೆಯಲ್ಲಿಡುವುದಕ್ಕೆ ಬಹುಮುಖ್ಯ ಉತ್ತೇಜನ ನೀಡಿತು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ರೋಗ ನಿರೋಧಕ ಶಕ್ತಿ ವೃದ್ಧಿಗೆ ಯೋಗ ಮತ್ತು ಆಯುರ್ವೇದ ಬಳಸಬೇಕು ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೋದಿ ಹುರಿದುಂಬಿಸಿದರು. ರೈಲು ಬೋಗಿಗಳನ್ನು ಐಸೋಲೇಷನ್‌ ವಾರ್ಡ್‌ ಮಾಡುವ ನಿರ್ಧಾರ ತೆಗೆದುಕೊಂಡರು. ಉದ್ದಿಮೆಗಳನ್ನು ಬಳಸಿಕೊಂಡು ಪಿಪಿಇ ಕಿಟ್‌ ತಯಾರಿಸಲಾಯಿತು. ವರ್ಕ್ ಫ್ರಮ್‌ ಹೋಮ್‌ ಹಾಗೂ ಆನ್‌ಲೈನ್‌ ಕಲಿಕೆಗೆ ಉತ್ತೇಜಿಸಲಾಯಿತು. ಜನರ ನಡವಳಿಕೆಯನ್ನು ನಿಯಂತ್ರಿಸುವ ಇಂತಹ ಕ್ರಮಗಳು ಯಶಸ್ವಿಯಾಗಿ ಬಳಕೆಯಾದವು.

ನಿರಂತರ ಮಾಧ್ಯಮ ಪ್ರಚಾರ ಹಾಗೂ ಮೋದಿ ಅವರ ಸಾರ್ವಜನಿಕ ಭಾಷಣಗಳು ಔಷಧ, ಆರ್ಥಿಕತೆ, ಆರೋಗ್ಯ ಮತ್ತು ಸಾರ್ವಜನಿಕ ಸುರಕ್ಷಾ ವಲಯಗಳಲ್ಲಿ ಒಗ್ಗಟ್ಟಿನ ಉತ್ತೇಜನಕಾರಿ ಪರಿಣಾಮ ಸೃಷ್ಟಿಸಿತು. ಇದರಿಂದಾಗಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಯಾಯಿತು ಎಂದು ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ.. ಚರ್ಚೆಯಿಂದ ಹೊಸ ಇತಿಹಾಸ ಸೃಷ್ಟಿಗೆ ಮೋದಿ ಯತ್ನ: ಕಾಂಗ್ರೆಸ್‌
ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ