ದಿಲ್ಲಿಯ 35 ಪೀಸ್ ಮರ್ಡರ್ ಕುಖ್ಯಾತಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಅಫ್ತಾಬ್‌ಳ ಜತೆ ಶ್ರದ್ಧಾಳ ಮದುವೆ ಮಾಡಲು ಕೂಡಾ ಆಕೆಯ ಪಾಲಕರು ಸಿದ್ಧರಿದ್ದರು. ಆದರೆ ಅಫ್ತಾಬ್ ಮನೆಯವರು ಅವರ ಮನವಿಗೆ ಸ್ಪಂದಿಸಿರಲಿಲ್ಲ ಎಂದು ಶ್ರದ್ಧಾ ತಂದೆ ವಿಕಾಸ್ ವಕರ್ ಹೇಳಿಕೆ ನೀಡಿದ್ದಾರೆ.
ನವದೆಹಲಿ: ದಿಲ್ಲಿಯ 35 ಪೀಸ್ ಮರ್ಡರ್ ಕುಖ್ಯಾತಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಅಫ್ತಾಬ್‌ಳ ಜತೆ ಶ್ರದ್ಧಾಳ ಮದುವೆ ಮಾಡಲು ಕೂಡಾ ಆಕೆಯ ಪಾಲಕರು ಸಿದ್ಧರಿದ್ದರು. ಆದರೆ ಅಫ್ತಾಬ್ ಮನೆಯವರು ಅವರ ಮನವಿಗೆ ಸ್ಪಂದಿಸಿರಲಿಲ್ಲ ಎಂದು ಶ್ರದ್ಧಾ ತಂದೆ ವಿಕಾಸ್ ವಕರ್ ಹೇಳಿಕೆ ನೀಡಿದ್ದಾರೆ.
2019ರಲ್ಲಿ ಶ್ರದ್ಧಾ (Shraddha)ಪಾಲಕರ (Parents) ಮಾತು ಕೇಳದೇ ಅಫ್ತಾಬ್ (Aftab)ಜತೆ ಇರಲು ಹೋಗಿದ್ದಳು. ಇದಾದ ಬಳಿಕ ಶ್ರದ್ಧಾಳ ತಾಯಿ (Mother) ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು ಆಕೆಯ ಕಣ್ಣೆದುರೇ ಶ್ರದ್ಧಾಳ ಮದುವೆ ನೋಡಬೇಕೆಂದಿದ್ದರು. ಹೀಗಾಗಿ ಅಫ್ತಾಬ್ ಜತೆಗೆ ತಾವೇ ಮದುವೆ ಮಾಡಿಸುವುದಾಗಿ ಶ್ರದ್ಧಾಳ ತಂದೆ (Father) ಹೇಳಿದ್ದರೂ ಆಕೆ ಒಪ್ಪಲಿಲ್ಲ. ಬಳಿಕ ವಸಾಯ್‌ನಲ್ಲಿರುವ ಅಫ್ತಾಬ್‌ನ ಮನೆಗೆ ಈ ಬಗ್ಗೆ ಮಾತನಾಡಲು ಹೋದಾಗ ಆತನ ಸಹೋದರ ಅಸದ್ (Asad), ಶ್ರದ್ಧಾಳ ತಂದೆಯನ್ನು ಅವರ ಮನೆ ಪ್ರವೇಶಿಸಲೂ ಬಿಡಲಿಲ್ಲ ಎಂದು ವಿಕಾಸ್ (Vikas waker) ಹೇಳಿದ್ದಾರೆ.
ಶ್ರದ್ಧಾಳ ತಲೆಬರುಡೆಗಾಗಿ ಕೊಳದಲ್ಲಿ ಶೋಧ, ಮೆಹ್ರೌಲಿ ಅರಣ್ಯದಿಂದ ಈವರೆಗೂ 17 ಮೂಳೆಗಳು ಪತ್ತೆ!
ಇದಾದ ಬಳಿಕ 2020 ಜನವರಿಯಲ್ಲಿ ಶ್ರದ್ಧಾಳ ತಾಯಿ ತೀರಿಕೊಂಡಿದ್ದರು. ಈ ವೇಳೆ ಶ್ರದ್ಧಾ ತಾನೇ ಅಫ್ತಾಬ್ ಜತೆ ವಿವಾಹವಾಗುವ (Marriage) ವಿಚಾರ ಎತ್ತಿದಾಗ ಆಕೆಯ ತಾಯಿ ನಿಧನದ ಶೋಕದಲ್ಲಿದ್ದಿದ್ದಕ್ಕೆ ನಾನು ಮದುವೆಗಾಗಿ ಕೆಲ ಕಾಲ ಕಾಯುವಂತೆ ತಿಳಿಸಿದ್ದೆ. ಆದರೆ ಅಫ್ತಾಬ್ ಆಕೆಯನ್ನು ಹೊಡೆಯುತ್ತಿರುವ ಬಗ್ಗೆ ಆಕೆ ಎಂದಿಗೂ ಬಾಯ್ಬಿಟ್ಟಿರಲಿಲ್ಲ ಎಂದು ಶ್ರದ್ಧಾ ತಂದೆ ವಿಕಾಸ್ ವಾಕರ್ ಎಂದಿದ್ದಾರೆ. ಈ ಮಧ್ಯೆ ಶ್ರದ್ಧಾಳ ಹತ್ಯೆಯ ಭೀಕರ ವಿಚಾರ ಬೆಳಕಿಗೆ ಬರುವ 2 ವಾರಗಳ ಹಿಂದೆಯೇ ಮಹಾರಾಷ್ಟ್ರದ (Maharashtra) ವಸಾಯ್‌ನಿಂದ (Vasay)ಅಫ್ತಾಬ್ ಕುಟುಂಬ ಪಲಾಯನ ಮಾಡಿದ್ದು, ಅವರಿಗೂ ಈ ವಿಚಾರ ಗೊತ್ತಿರುವ ಶಂಕೆ ಹುಟ್ಟು ಹಾಕಿದೆ. ಅಫ್ತಾಬ್ ಕುಟುಂಬಕ್ಕಾಗಿ ಇನ್ನು ಹುಡುಕಾಟ ನಡೆಯುತ್ತಿದೆ.
ಮುಂಜಾನೆ 4 ಗಂಟೆಗೆ ಬ್ಯಾಗ್ ಹಿಡಿದು ಹೊರಟಿದ್ದ ಅಫ್ತಾಬ್, ಸಿಸಿಟಿವಿ ದೃಶ್ಯಾವಳಿ ಬಿಡುಗಡೆ!
ಆಫ್ತಾಬ್ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಬಯಸಿದ್ದ ಶ್ರದ್ಧಾ, ವ್ಯಾಟ್ಸ್ಆ್ಯಪ್ ಚಾಟ್ ಬಹಿರಂಗ!
ಶ್ರದ್ಧಾ ರೀತಿ ಮತ್ತೊಂದು ಪ್ರಕರಣ, ಲೀವ್ ಇನ್ ಸಂಗಾತಿಯ ನೀರಿನ ಟ್ಯಾಂಕ್‌ಗೆ ತಳ್ಳಿದ ಪಾಪಿ!
Delhi Crime: ಶ್ರದ್ದಾ ಬರ್ಬರ ಹತ್ಯೆ ಪ್ರಕರಣ: ಗ್ಯಾಸ್ ಸಿಲಿಂಡರ್ ಬಳಿ ದೊರೆತ ಸಾಕ್ಷ್ಯ..!
ಶ್ರದ್ಧಾ ಮೃತದೇಹದ ಒಂದೊಂದೆ ತುಂಡು ಹೊರಗೆಸೆಯತ್ತಿದ್ದಂತೆ ಹೊಸ ಹೊಸ ಗೆಳತಿಯರ ಜೊತೆ ಅಫ್ತಾಬ್ ಸೆಕ್ಸ್!
Shraddha Murder Case: ಪ್ರೀತಿ ಜೊತೆ ಪ್ರೇಮಿ ಸ್ವಭಾವದ ಬಗ್ಗೆಯೂ ಇರಲಿ ಕಣ್ಣು