ಕಾಸರಗೋಡು ಜಿಲ್ಲೆಯಲ್ಲಿ ಆಫ್ರಿಕನ್‌ ಹಂದಿ ಜ್ವರ, 500 ಕ್ಕೂ ಹೆಚ್ಚು ಹಂದಿಗಳನ್ನು ಕೊಲ್ಲಲು ಆದೇಶ!

By Gowthami K  |  First Published Jan 13, 2023, 2:55 PM IST

ಕರ್ನಾಟಕದ ಗಡಿಯಿಂದ ಸುಮಾರು ಐದು ಕಿ.ಮೀ. ದೂರದಲ್ಲಿರುವ ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಕಾಟು ಕುಕ್ಕೆಯಲ್ಲಿ ಆಫ್ರಿಕನ್‌ ಹಂದಿ ಜ್ವರ ಕಾಣಿಸಿಕೊಂಡಿದ್ದು, 500 ಕ್ಕೂ ಹೆಚ್ಚು ಹಂದಿಗಳನ್ನು ಕೊಲ್ಲಲು ಆದೇಶ ಹೊರಡಿಸಲಾಗಿದೆ.


ಕಾಸರಗೋಡು (ಜ.13): ಕರ್ನಾಟಕದ ಗಡಿಯಿಂದ ಸುಮಾರು ಐದು ಕಿ.ಮೀ. ದೂರದಲ್ಲಿರುವ ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಕಾಟು ಕುಕ್ಕೆಯಲ್ಲಿ ಆಫ್ರಿಕನ್‌ ಹಂದಿ ಜ್ವರ ಕಾಣಿಸಿಕೊಂಡಿದೆ. ಇಲ್ಲಿರುವ ಫಾರ್ಮ್‌ಗಳಲ್ಲಿ 200ಕ್ಕೂ ಅಧಿಕ ಸೋಂಕು ಬಾಧಿತ ಹಂದಿಗಳು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ. ಇದರ ಬೆನ್ನಲ್ಲೇ ಸುಮಾರು 500 ಕ್ಕೂ ಹೆಚ್ಚು  ಹಂದಿಗಳ ಮಾರಾಣ ಹೋಮ ಮಾಡಲಾಗುತ್ತಿದೆ.

ಇದೀಗ ಸೋಂಕು ಪತ್ತೆಯಾದ ಕೇಂದ್ರದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ತಿಂಗಳಿಗೆ ಹಂದಿ ಮಾಂಸಕ್ಕೆ ನಿಷೇಧ ಹೇರಲಾಗಿದೆ. ಈ ಕೇಂದ್ರದಿಂದ ಹಂದಿ ಸಾಗಾಟ, ಹಂದಿ ಮಾಂಸ ಮಾರಾಟ, ಮಾಂಸ ಉತ್ಪನ್ನ ಮೊದಲಾದವುಗಳ ಮಾರಾಟ, ಸಾಗಾಟ ನಿಷೇಧಿಸಲಾಗಿದೆ. ಸೋಂಕು ಪತ್ತೆಯಾದ ಕೇಂದ್ರದ ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿನ ಹಂದಿಗಳನ್ನು ಕೊಂದು ಸಂಸ್ಕರಿಸಲಾಗುವುದು. ಇದಕ್ಕಾಗಿ ಜಿಲ್ಲಾ ಮೃಗ ಸಂರಕ್ಷಣಾ ಕಚೇರಿಯ ರಾಫಿಡ್‌ ರೆಸ್ಪಾನ್ಸ್‌ ತಂಡವನ್ನು ರಚಿಸಲಾಗಿದೆ.

Tap to resize

Latest Videos

ಪೊಲೀಸ್‌, ಕಂದಾಯ, ಸ್ಥಳಿಯಾಡಳಿತ ಸಂಸ್ಥೆ, ಮೋಟಾರು ವಾಹನ ಇಲಾಖೆ, ಅಗ್ನಿ ಶಾಮಕ ದಳ ಮೊದಲಾದವುಗಳ ನೆರವು ಪಡೆಯಲಾಗುವುದು. ಕಾಸರಗೋಡು ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿಗಳ ನೇತೃತ್ವದಲ್ಲಿ ತಂಡ ಕಾರ್ಯಾಚರಿಸಲಿದೆ. ಈ ಬಗ್ಗೆ ಪೊಲೀಸ್‌, ಮೋಟಾರು ವಾಹನ ಇಲಾಖೆ ತಪಾಸಣೆ ಹಾಗೂ ನಿಗಾ ವಹಿಸಲಿದೆ.

500 ಹಂದಿಗಳನ್ನು ಕೊಲ್ಲಲು ಆದೇಶ: ಕಾಸರಗೋಡಿನ ಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟುಕುಕ್ಕೆ ಖಾಸಗಿ ಜಮೀನಿನಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ 532 ಹಂದಿಗಳನ್ನು ಕೊಲ್ಲಲು ಪಶುಸಂಗೋಪನಾ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆ ತಂಡ (ಆರ್‌ಆರ್‌ಟಿ) ಸಜ್ಜಾಗಿದೆ.

ಜನವರಿ 4ರಂದು ಹಲವು ಹಂದಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಂಡವು ಜಮೀನಿಗೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿತ್ತು. ಮಾದರಿಗಳನ್ನು ಭೋಪಾಲ್‌ನ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಅಲ್ಲಿ ಹಂದಿಗಳಿಗೆ ರೋಗ ಇರುವುದು ದೃಢಪಟ್ಟಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಪಶುವೈದ್ಯ ಅಲ್ವಿನ್ ವ್ಯಾಸ್ ಮತ್ತು ಜಾನುವಾರು ನಿರೀಕ್ಷಕ ಕೆ.ಆರ್. ಕಣ್ಣೂರಿನಿಂದ ಉಣ್ಣಿಕೃಷ್ಣನ್ ಹಂದಿಗಳ ಹತ್ಯೆ ಪ್ರಕ್ರಿಯೆಯ ನೇತೃತ್ವ ವಹಿಸಿದ್ದರು. ಮೂರು ತಿಂಗಳ ಕಾಲ ಈ ಪ್ರದೇಶದಲ್ಲಿ ನಿಗಾ ಇಡಲಾಗುವುದು.

ಹಂದಿ ಉಪಟಳ ಕಡಿವಾಣಕ್ಕೆ ಹಳೆ ಸೀರೇಗಳೇ ಮದ್ದು!

ಹೆಚ್ಚುವರಿ ಜಿಲ್ಲಾಧಿಕಾರಿ ಎ.ಕೆ. ರಾಮೇಂದ್ರನ್ ಮಾತನಾಡಿ, ರೋಗ ಹರಡುವುದನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು. ಆಫ್ರಿಕನ್ ಹಂದಿ ಜ್ವರವು ದೇಶೀಯ ಮತ್ತು ಕಾಡು ಹಂದಿಗಳಲ್ಲಿ ಕಂಡುಬರುವ ಅತ್ಯಂತ ಸಾಂಕ್ರಾಮಿಕ ವೈರಲ್ ರೋಗವಾಗಿದೆ. ಇದು ನೇರ ಸಂಪರ್ಕದ ಮೂಲಕ ಅಥವಾ ಬೇರೆ ರೀತಿಯಲ್ಲಿ ಹರಡಬಹುದು.  ಇದು ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

ಹಂದಿ ಬೇಟೆಯಾಡಲು ಅವಕಾಶಕ್ಕೆ ದಿನೇಶ್‌ ಗೂಳಿಗೌಡ ಸಿಎಂಗೆ ಮನವಿ

ಈ ಪ್ರದೇಶದ 10 ಕಿಮೀ ವ್ಯಾಪ್ತಿಯಲ್ಲಿ  ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಶ್ರೀ ರಾಮೇಂದ್ರನ್ ಹೇಳಿದರು. ಅಗ್ನಿಶಾಮಕ ದಳವು ಕಲಿಂಗ್ ಪೂರ್ಣಗೊಂಡ ನಂತರ ಪ್ರದೇಶವನ್ನು ಸೋಂಕುರಹಿತಗೊಳಿಸುತ್ತದೆ. ಎಣ್ಮಕಜೆ ಗ್ರಾಮ ಪಂಚಾಯತ್, ಪೊಲೀಸ್ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಇಲಾಖೆಯು ಆರ್‌ಆರ್‌ಟಿ ಸದಸ್ಯರಿಗೆ ಎಲ್ಲಾ ಬೆಂಬಲವನ್ನು ನೀಡುತ್ತದೆ. ಕಾಸರಗೋಡು ಕಂದಾಯ ವಿಭಾಗೀಯ ಅಧಿಕಾರಿಯು ಚಟುವಟಿಕೆಗಳನ್ನು ಸಮನ್ವಯಗೊಳಿಸಲಿದ್ದಾರೆ ಎಂದು ಶ್ರೀ ರಾಮೇಂದ್ರನ್ ಹೇಳಿದರು.

click me!