ಕಾಬೂಲ್(ಮಾ.05): ವಿಶ್ವ ಮಟ್ಟದಲ್ಲಿ ಭಾರತ ಹಲವು ಕಾರಣಗಳಿಂದ ಮೆಚ್ಚುಗೆಗಳಿಗೆ ಪಾತ್ರವಾಗುತ್ತಿದೆ. ಉಕ್ರೇನ್ ಯುದ್ಧ ನಾಡಿನಿಂದ ಭಾರತೀಯ ರಕ್ಷಣೆಯನ್ನು ಯಶಸ್ವಿಯಾಗಿ ಮಾಡುತ್ತಿರುವ ಭಾರತಕ್ಕೆ ಎಲ್ಲಾ ರಾಷ್ಟ್ರಗಳು ಬಹುಪರಾಕ್ ಹೇಳಿದೆ. ಇದರ ನಡುವೆ ಮತ್ತೊಂದು ಹಿರಿಮೆ ಭಾರತದ ಹೆಗಲೇರಿದೆ.ಸಂಕಷ್ಟದ ಸಮಯದಲ್ಲಿ ಭಾರತ ನೀಡಿರುವ ಗೋಧಿ ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದಿದೆ. ಇಷ್ಟೇ ಅಲ್ಲ ಇದೇ ವೇಳೆ ಪಾಕಿಸ್ತಾನಕ್ಕೆ ಆಫ್ಘಾನ್ ನಾಯಕರುು ಮಂಗಳಾರತಿ ಮಾಡಿದ್ದಾರೆ.
ಆಹಾರ ಕೊರೆತೆಯಿಂದ ಬಳಲುತ್ತಿರುವ ಆಫ್ಘಾನಿಸ್ತಾನಕ್ಕೆ ಭಾರತ ಒಟ್ಟು 50,000 ಮೆಟ್ರಿಕ್ ಟನ್ ಗೋಧಿ ಕಳುಹಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಜಗತ್ತಿನ ಮುಂದೆ ತೋರ್ಪಡಿಸಲು ಆಫ್ಘಾನಿಸ್ತಾನಕ್ಕೆ ಗೋಧಿ ಕಳುಹಿಸಿದೆ. ಆದರೆ ಈ ಗೋದಿ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಚರಂಡಿಗೆ ಎಸೆಯುವ ಗೋಧಿಯನ್ನು ಲಾರಿಯಲ್ಲಿ ತುಂಬಿ ಆಫ್ಘಾನಿಸ್ತಾನಕ್ಕೆ ಕಳುಹಿಸಿದ ಪಾಕಿಸ್ತಾನಕ್ಕೆ ಆಫ್ಘಾನ್ ನಾಯಕರು ತಿರುಗೇಟು ಕೊಟ್ಟಿದ್ದಾರೆ.
ಉಕ್ರೇನ್‌ನಿಂದ ಭಾರತೀಯರ ರಕ್ಷಣೆಗೆ ವಾಯುಸೇನೆ, ಸಿ -17 ವಿಮಾನದ ಮೂಲಕ ಕಾರ್ಯಾಚರಣೆ!
ಪಾಕಿಸ್ತಾನ ಕಳುಹಿಸಿದ ಗೋಧಿ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಇದನ್ನು ಉಪಯೋಗಿಸಲು ಸಾಧ್ಯವಿಲ್ಲ. ಈ ರೀತಿ ಕಳಪೆ ಗೋಧಿ ಕಳುಹಿಸಿ ಜಗತ್ತಿನ ಮುಂದೆ ತೋರ್ಪಡಿಕೆಗಿಂತ ಗೋಧಿ ಕಳುಹಿಸದಿರುವುದೇ ಉತ್ತಮ ಎಂದು ಆಫ್ಘಾನಿಸ್ತಾನ ನಾಯಕರು ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.
Wheat donated by is not edible . Official pic.twitter.com/Enpgrco2Ew
— Abdulhaq Omeri (@AbdulhaqOmeri)ತಾಲಿಬಾನ್ ನಾಯಕರು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಸಂಕಷ್ಟದ ಸಮಯದಲ್ಲಿ ಭಾರತದ ನೆರವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತದ ಗೋಧಿ ಉತ್ತಮ ಗುಣಮಟ್ಟ ಹೊಂದಿದೆ. ಸೂಕ್ತ ಸಂದರ್ಭದಲ್ಲಿ ಆಹಾರ ಒದಗಿಸಿದ ಭಾರತಕ್ಕೆ ನಮ್ಮ ಪ್ರಣಾಮಗಳು ಎಂದಿದ್ದಾರೆ.
PM Narendra Modi:ಭಾರತ ನಿಮ್ಮ ಮನೆ: ಆಪ್ಘನ್ ಅಲ್ಪ ಸಂಖ್ಯಾತರಿಗೆ ಪ್ರಧಾನಿ ಧೈರ್ಯ!
ತಾಲಿಬಾನ್ ಆಡಳಿತದಿಂದ ಆಫ್ಘಾನಿಸ್ತಾನದಲ್ಲಿ ತೀವ್ರ ಸಂಕಷ್ಟಕ್ಕೆ ತುತ್ತಾಗಿದೆ. ಆಹಾರಕ್ಕೆ ಪರದಾಡುವ ಸ್ಥಿತಿ ಎದುರಾಗಿದೆ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಆಫ್ಘಾನಿಸ್ತಾನಕ್ಕೆ ಆಹಾರ ಸಾಮಾಗ್ರಿಗಳನ್ನು ಪೂರೈಕೆ ಮಾಡುತ್ತಿದೆ. ಇದರ ನಡುವೆ ಪಾಕಿಸ್ತಾನ ತಮ್ಮದೂ ಒಂದು ಇರಲಿ ಎಂದು ಗೋಧಿ ಕಳುಹಿಸಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೊಳಗಾಗಿದೆ.
ಜಪ್ತಿ ಮಾಡಿದ ಆಫ್ಘನ್ ಸರ್ಕಾರದ ಹಣ 9/11 ಸಂತ್ರತ್ಥರಿಗೆ: ಬೈಡೆನ್
ವಾಷಿಂಗ್ಟನ್: ಅಮೆರಿಕದಲ್ಲಿ ಜಪ್ತಿ ಮಾಡಿಟ್ಟ52,500 ಕೋಟಿ ರು ಆಫ್ಘನ್ ಸರ್ಕಾರದ ನಿಧಿಯನ್ನು ಬಿಡುಗಡೆ ಮಾಡುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಸಹಿ ಮಾಡಿದ್ದಾರೆ. ನಿಧಿಯ ಅರ್ಧ ಭಾಗ 26,250 ಕೋಟಿ ರುಗಳನ್ನು ಸೆಪ್ಟೆಂಬರ್ 9/11ರ ಭಯೋತ್ಪಾದಕ ಕೃತ್ಯದ ಸಂತ್ರಸ್ತರಿಗೆ ಪರಿಹಾರ ನೀಡಲು ಬಳಸಲಾಗುವುದು ಹಾಗೂ ಇನ್ನರ್ಧ ಭಾಗವನ್ನು ಬಡತನ ಪೀಡಿತ ಅಫ್ಘಾನಿಸ್ತಾನದಲ್ಲಿ ಮೂಲಭೂತ ಅಗತ್ಯಗಳನ್ನು ಒದಗಿಸಲು ಬ್ಯಾಂಕುಗಳ ಮೂಲಕ ಮಾನವೀಯ ಸಂಘಟನೆಗಳಿಗೆ ನೀಡಲಾಗುವುದು ಎಂದು ಬೈಡೆನ್ ಹೇಳಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನ ವಶಪಡಿಸಿಕೊಂಡ ನಂತರ ಅಂತಾರಾಷ್ಟ್ರೀಯ ಧನಸಹಾಯವನ್ನು ಸ್ಥಗಿತಗೊಳಿಸಿ ಅದನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.
ಅಕ್ರಮ ಮದ್ಯ ಮಾರಾಟ ದಂಧೆಯನ್ನು ಪತ್ತೆ ಹಚ್ಚಿರುವ ಅಷ್ಘಾನಿಸ್ತಾನದ ಗುಪ್ತಚರ ಸಿಬ್ಬಂದಿ ಬರೋಬ್ಬರಿ 3000 ಲೀಟರ್ ಮದ್ಯವನ್ನು ನದಿಯ ಕಾಲುವೆಗೆ ಚೆಲ್ಲಿದ್ದಾರೆ. ಕಾಕತಾಳೀಯವೆಂದರೆ ಒಂದು ಕಾಲದಲ್ಲಿ ಅಕ್ರಮ ಡ್ರಗ್ಸ್ ದಂಧೆ ಮೂಲಕವೇ ಸಂಘಟನೆಯನ್ನು ಜೀವಂತವಾಗಿಟ್ಟುಕೊಂಡಿದ್ದ ತಾಲಿಬಾನ್ ಉಗ್ರ ಸರ್ಕಾರ ಇದೀಗ ಅಕ್ರಮ ಮದ್ಯ ಮತ್ತು ಡ್ರಗ್ಸ್ ಜಾಲದ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಗುಪ್ತಚರ ಸಂಸ್ಥೆ ಅಧಿಕಾರಿಯೊಬ್ಬರು, ಇಸ್ಲಾಂ ಧರ್ಮದ ಅನ್ವಯ ಮುಸ್ಲಿಮರು ಮದ್ಯ ಮಾರಾಟ ಮತ್ತು ಉತ್ಪಾದನೆಯಲ್ಲಿ ತೊಡಗಬಾರದು ಎಂದಿದೆ. ಅದನ್ನು ಪಾಲಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.