ಸಬಲೀಕರಣದ ನವಯುಗ ಭಾರತೀಯ ಪ್ರಜೆಯು 2025ರ ಡಿಪಿಡಿಪಿ ನಿಯಮಗಳ ಹೃದಯ ಭಾಗದಲ್ಲಿರುತ್ತಾನೆ. ಡೇಟಾದಿಂದ ಹೆಚ್ಚು ಪ್ರಾಬಲ್ಯ ಹೊಂದಿರುವ ಜಗತ್ತಿನಲ್ಲಿ ಆಡಳಿತ ಮಾರ್ಗಸೂಚಿಯ ಹೃದಯಭಾಗದಲ್ಲಿ ಜನರನ್ನು ಇರಿಸುವುದು ಅತ್ಯಗತ್ಯ ಎಂಬುದನ್ನು ನಾವು ನಂಬುತ್ತೇವೆ.
ಅಶ್ವಿನಿ ವೈಷ್ಣವ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆಯ ಗೌರವಾನ್ವಿತ ಸಚಿವರು.
‘ನಾವು ಜಾಗತಿಕ ಭವಿಷ್ಯದ ಬಗ್ಗೆ ಮಾತನಾಡುವಾಗ, ಮಾನವ-ಕೇಂದ್ರಿತ ಕಾರ್ಯ ವಿಧಾನಗಳು ಅಗ್ರಗಣ್ಯವಾಗಿರಬೇಕು’ ಇತ್ತೀಚೆಗೆ ಜರುಗಿದ ವಿಶ್ವ ಸಂಸ್ಥೆಯ ‘ಭವಿಷ್ಯದ ಶೃಂಗ ಸಭೆ’ಯಲ್ಲಿ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಈ ಮಾತುಗಳು ಜನರಿಗೆ ಮೊದಲ ಸ್ಥಾನ ನೀಡುವ ಭಾರತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಈ ತತ್ವ ಶಾಸ್ತ್ರವು 2025ರ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣೆ (ಡಿಪಿಡಿಪಿ) ನಿಯಮಗಳನ್ನು ರೂಪಿಸುವ ನಮ್ಮ ಪ್ರಯತ್ನಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡಿದೆ. ಈ ನಿಯಮಗಳನ್ನು ಅಂತಿಮಗೊಳಿಸಿದ ನಂತರ, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯಿದೆ-2023 ಅನ್ನು ಕಾರ್ಯಗತಗೊಳಿಸಲಾಗುತ್ತದೆ. ಈ ವೈಯಕ್ತಿಕ ಡೇಟಾ ರಕ್ಷಣೆಯು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ನಮ್ಮ ಬದ್ಧತೆಯನ್ನು ಜೀವಂತಗೊಳಿಸುತ್ತದೆ.
ಸಬಲೀಕರಣದ ನವಯುಗ ಭಾರತೀಯ ಪ್ರಜೆಯು 2025ರ ಡಿಪಿಡಿಪಿ ನಿಯಮಗಳ ಹೃದಯ ಭಾಗದಲ್ಲಿರುತ್ತಾನೆ. ಡೇಟಾದಿಂದ ಹೆಚ್ಚು ಪ್ರಾಬಲ್ಯ ಹೊಂದಿರುವ ಜಗತ್ತಿನಲ್ಲಿ ಆಡಳಿತ ಮಾರ್ಗಸೂಚಿಯ ಹೃದಯಭಾಗದಲ್ಲಿ ಜನರನ್ನು ಇರಿಸುವುದು ಅತ್ಯಗತ್ಯ ಎಂಬುದನ್ನು ನಾವು ನಂಬುತ್ತೇವೆ. ಈ ನಿಯಮಗಳು ತಿಳಿವಳಿಕೆಯುಳ್ಳ ಸಮ್ಮತಿ, ಡೇಟಾ ಅಳಿಸುವಿಕೆ ಮತ್ತು ಡಿಜಿಟಲ್ ನಾಮಿನಿಗಳನ್ನು ನೇಮಿಸುವ ಸಾಮರ್ಥ್ಯದಂತಹ ಹಕ್ಕುಗಳೊಂದಿಗೆ ನಾಗರಿಕರಿಗೆ ಅಧಿಕಾರ ನೀಡುತ್ತದೆ. ಉಲ್ಲಂಘನೆಗಳು ಅಥವಾ ಅನಧಿಕೃತ ಡೇಟಾ ಬಳಕೆಯ ಕಾರಣಗಳಿಗಾಗಿ ನಾಗರಿಕರು ಇನ್ನು ಮುಂದೆ ಅಸಹಾಯಕರಾಗುವುದಿಲ್ಲ. ಅವರು ತಮ್ಮ ಡಿಜಿಟಲ್ ಗುರುತುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ನಿರ್ವಹಿಸಲು ಸಾಧನಗಳನ್ನು ಹೊಂದಿರುತ್ತಾರೆ.
ಏನಿದು ಡಿಜಿಟಲ್ ಅರೆಸ್ಟ್?: ಡಿಜಿಟಲ್ ಅರೆಸ್ಟ್, ಫೋನ್ ಕರೆ ನಿಮಗೂ ಬರಬಹುದು
ಹೊಸ ನಿಯಮಗಳನ್ನು ಸರಳತೆ ಮತ್ತು ಸ್ಪಷ್ಟತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಬ್ಬ ಭಾರತೀಯನು, ಅವರ ತಾಂತ್ರಿಕ ಜ್ಞಾನವನ್ನು ಲೆಕ್ಕಿಸದೆ, ಅವರ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಚಲಾಯಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ. ಸಮ್ಮತಿಯನ್ನು ಖಾತ್ರಿ ಪಡಿಸಿಕೊಳ್ಳುವುದರಿಂದ ಹಿಡಿದು ನಾಗರಿಕರಿಗೆ ಇಂಗ್ಲಿಷ್ ಅಥವಾ ಸಂವಿಧಾನದಲ್ಲಿ ಪಟ್ಟಿ ಮಾಡಲಾದ 22 ಭಾರತೀಯ ಭಾಷೆಗಳಲ್ಲಿ ಯಾವುದೇ ಮಾಹಿತಿ ಒದಗಿಸುವುದನ್ನು ಕಡ್ಡಾಯಗೊಳಿಸುವವರೆಗೆ, ಮಾರ್ಗಸೂಚಿಯ ಒಳಗೊಳ್ಳುವಿಕೆಯ ನಮ್ಮ ಬದ್ಧತೆ ಪ್ರತಿಬಿಂಬಿಸುತ್ತದೆ.
ಮಕ್ಕಳ ರಕ್ಷಣೆ: ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ವಿಶೇಷಕಾಳಜಿಯ ಅಗತ್ಯವಿದೆ. ಇದನ್ನು ಗುರುತಿಸಿ, ಅಪ್ರಾಪ್ತ ವಯಸ್ಕರ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲು ಈ ನಿಯಮಗಳು, ಪರಿಶೀಲಿಸಬಹುದಾದ ಪೋಷಕರು ಅಥವಾ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುತ್ತವೆ. ಹೆಚ್ಚುವರಿ ಸುರಕ್ಷತೆಗಳು ಮಕ್ಕಳನ್ನು ಶೋಷಣೆ, ಅನಧಿಕೃತ ಪ್ರೊಫೈಲಿಂಗ್ ಮತ್ತು ಇತರ ಡಿಜಿಟಲ್ ಹಾನಿಗಳಿಂದ ರಕ್ಷಿಸುತ್ತವೆ ಎಂಬುದನ್ನು ಖಚಿತಪಡಿಸುತ್ತದೆ. ಈ ನಿಬಂಧನೆಗಳು ಭವಿಷ್ಯದ ಪೀಳಿಗೆಗೆ ಸುರಕ್ಷಿತ ಡಿಜಿಟಲ್ ಜಾಗವನ್ನು ಸೃಷ್ಟಿಸುವ ನಮ್ಮ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತವೆ.
ನಿಯಂತ್ರಣದೊಂದಿಗೆ ಬೆಳವಣಿಗೆಯ ಸಮತೋಲನ ಭಾರತದ ಡಿಜಿಟಲ್ ಆರ್ಥಿಕತೆಯು ಜಾಗತಿಕ ಯಶೋಗಾಥೆಯಾಗಿದ್ದು, ಈ ಆವೇಗವನ್ನು ಜೀವಂತವಾಗಿಡಲು ನಾವು ನಿರ್ಧರಿಸಿದ್ದೇವೆ. ಡಿಜಿಟಲ್ ಆರ್ಥಿಕತೆಯಲ್ಲಿ ನಾವೀನ್ಯತೆಯನ್ನು ಸಕ್ರಿಯಗೊಳಿಸುವಾಗ ನಮ್ಮ ಮಾರ್ಗಸೂಚಿಯು ನಾಗರಿಕರಿಗೆ ವೈಯಕ್ತಿಕ ಡೇಟಾ ರಕ್ಷಣೆಯನ್ನು ಖಚಿತಪಡಿಸುತ್ತದೆ. ನಿಯಂತ್ರಣದ ಕಡೆಗೆ ಹೆಚ್ಚು ಒಲವು ತೋರುವ ಕೆಲವು ಅಂತಾರಾಷ್ಟ್ರೀಯ ಮಾದರಿಗಳಿಗಿಂತ ಭಿನ್ನವಾಗಿ, ನಮ್ಮ ಕಾರ್ಯ ವಿಧಾನವು ಪ್ರಾಯೋಗಿಕ ಮತ್ತು ಬೆಳವಣಿಗೆ-ಆಧಾರಿತವಾಗಿದೆ. ಈ ಸಮತೋಲನವು ನಮ್ಮ ಸ್ಟಾರ್ಟ್ ಅಪ್‌ಗಳು ಮತ್ತು ವ್ಯವಹಾರಗಳನ್ನು ಚಾಲನೆ ಮಾಡುವ ನವೀನ ಮನೋಭಾವವನ್ನು ತಡೆಯದೆ ನಾಗರಿಕರಿಗೆ ರಕ್ಷಣೆ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
ಸಣ್ಣ ಉದ್ದಿಮೆಗಳು ಮತ್ತು ಸ್ಟಾರ್ಟ್ ಆಪ್‌ಗಳು ಕಡಿಮೆ ಅನುಸರಣೆ ಹೊರೆಗಳನ್ನು ಎದುರಿಸಬೇಕಾಗುತ್ತದೆ. ಪಾಲುದಾರರ ವಿವಿಧ ಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಂಡು, ಶ್ರೇಣೀಕೃತ ಜವಾಬ್ದಾರಿಗಳೊಂದಿಗೆ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ. ದತ್ತಾಂಶ ವಿಶ್ವಾಸಾರ್ಹರ ಮೌಲ್ಯ ಮಾಪನದ ಆಧಾರದ ಮೇಲೆ ದೊಡ್ಡ ಕಂಪನಿಗಳು ಹೆಚ್ಚಿನ ಜವಾಬ್ದಾರಿಗಳನ್ನು ಹೊಂದಿರುತ್ತವೆ. ಬೆಳವಣಿಗೆಗೆ ಅಡ್ಡಿಯಾಗದಂತೆ ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಳ್ಳುತ್ತವೆ.
ಡಿಜಿಟಲ್-ಮೊದಲು ತತ್ವ: ಈ ನಿಯಮಗಳ ಹೃದಯ ಭಾಗದಲ್ಲಿ ‘ವಿನ್ಯಾಸದಿಂದಲೇ ಡಿಜಿಟಲ್ (ಡಿಜಿಟಲ್ ಬೈ ಡಿಸೈನ್)’ ತತ್ವಶಾಸ್ತ್ರವಿದೆ. ಕುಂದು ಕೊರತೆಗಳನ್ನು ಪರಿಹರಿಸುವ ಮತ್ತು ಅನುಸರಣೆಯನ್ನು ಜಾರಿಗೊಳಿಸುವ ಕಾರ್ಯವನ್ನು ಹೊಂದಿರುವ ಡೇಟಾ ಸಂರಕ್ಷಣಾ ಮಂಡಳಿಯು ಪ್ರಧಾನವಾಗಿ ಡಿಜಿಟಲ್ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ನಾವು ದಕ್ಷತೆ, ಪಾರದರ್ಶಕತೆ ಮತ್ತು ವೇಗವನ್ನು ಖಚಿತಪಡಿಸುತ್ತೇವೆ. ನಾಗರಿಕರು ದೂರುಗಳನ್ನು ಸಲ್ಲಿಸಬಹುದು, ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು ಮತ್ತು ಅನಗತ್ಯ ದೈಹಿಕ ಸಂವಹನಗಳಿಲ್ಲದೆ ನಿರ್ಣಯಗಳನ್ನು ಪಡೆಯಬಹುದು. ಈ ಡಿಜಿಟಲ್- ಮೊದಲ ವಿಧಾನವು ಸಮ್ಮತಿ ಕಾರ್ಯ ವಿಧಾನಗಳು ಮತ್ತು ಡೇಟಾ ನಿರ್ವಹಣೆ ಕೆಲಸದ ಹರಿವುಗಳಿಗೆ ವಿಸ್ತರಿಸುತ್ತದೆ. ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ, ವಿಶ್ವಾಸಾರ್ಹರು ಅನುಸರಿಸಲು ಮತ್ತು ನಾಗರಿಕರು ಇದರಲ್ಲಿ ತೊಡಗಿಸಿಕೊಳ್ಳುವಂತೆ ನಾವು ಸುಲಭಗೊಳಿಸುತ್ತೇವೆ. ಈ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಬೆಳೆಸುತ್ತೇವೆ.
ಎಲ್ಲರನ್ನೂ ಒಳಗೊಂಡ ಕಾರ್ಯ ವಿಧಾನ: ಈ ನಿಯಮಗಳ ಪ್ರಯಾಣವು ಅದರ ಉದ್ದೇಶದಂತೆ ಅಂತರ್ಗತವಾಗಿದೆ. ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣೆ ಕಾಯಿದೆ-2023ರ ತತ್ವಗಳ ಆಧಾರದ ಮೇಲೆ, ಕರಡು ನಿಯಮಗಳು ವಿವಿಧ ಪಾಲುದಾರರಿಂದ ಸಂಗ್ರಹಿಸಿದ ವ್ಯಾಪಕ ಶ್ರೇಣಿಯ ಸಲಹೆ, ಸೂಚನೆ ಮತ್ತು ಜಾಗತಿಕ ಉತ್ತಮ ಅಭ್ಯಾಸಗಳನ್ನು ಅಧ್ಯಯನ ಮಾಡಿ, ಆಯ್ದ ಉತ್ಪನ್ನವಾಗಿದೆ. ನಾವು 45-ದಿನಗಳ ಸಾರ್ವಜನಿಕ ಸಮಾಲೋಚನೆಯ ಅವಧಿಯನ್ನು ತೆರೆದಿದ್ದೇವೆ. ನಾಗರಿಕರು, ವ್ಯವಹಾರಗಳು ಮತ್ತು ನಾಗರಿಕ ಸಮಾಜದಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಆಹ್ವಾನಿಸುತ್ತೇವೆ. ಈ ತೊಡಗಿಸಿಕೊಳ್ಳುವಿಕೆಯು ಸಾಮೂಹಿಕ ಒಳಗೊಳ್ಳುವಿಕೆಯಲ್ಲಿ ನಮ್ಮ ನಂಬಿಕೆ ಮತ್ತು ಭಾಗವಹಿಸುವಿಕೆಯ ನೀತಿಯ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ಆದರೆ, ಮಾರ್ಗಸೂಚಿ ಸದೃಢವಾಗಿರುವುದು ಮಾತ್ರವಲ್ಲದೆ, ನಮ್ಮ ಸಾಮಾಜಿಕ-ಆರ್ಥಿಕ ವಲಯದ ಅನನ್ಯ ಸವಾಲುಗಳಿಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ನಾಗರಿಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಯುವುದನ್ನು ಖಚಿತಪಡಿಸಿಕೊಳ್ಳಲು, ಅವರ ವೈಯಕ್ತಿಕ ಡೇಟಾದ ಮೇಲಿನ ಹಕ್ಕುಗಳ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ವ್ಯಾಪಕ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಭವಿಷ್ಯದ ದೃಷ್ಟಿಕೋನ: ನಾವು ಈ ನಿಯಮಗಳನ್ನು ಅನಾವರಣಗೊಳಿಸುತ್ತಿದ್ದಂತೆ, ನಾವು ಕೇವಲ ಪ್ರಸ್ತುತ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದರ ಜತೆಗೆ, ಸುರಕ್ಷಿತ ಮತ್ತು ನವೀನ ಡಿಜಿಟಲ್ ಭವಿಷ್ಯಕ್ಕಾಗಿ ಭದ್ರಬುನಾದಿ ಹಾಕುತ್ತೇವೆ. 2025ರ ಕರಡು ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು ಜಾಗತಿಕ ಡೇಟಾ ಆಡಳಿತದ ಉತ್ತಮರೂಢಿಗಳನ್ನು ರೂಪಿಸುವಲ್ಲಿ ಭಾರತದ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. ನಾಗರಿಕರನ್ನು ಪ್ರಧಾನವಾಗಿ ಇರಿಸುವ ಮೂಲಕ ಮತ್ತು ನಾವೀನ್ಯತೆಗೆ ಅನುಕೂಲಕರ ವಾತಾವರಣ ಬೆಳೆಸುವ ಮೂಲಕ, ನಾವು ಜಗತ್ತಿಗೆ ಅನುಸರಿಸಲು ಒಂದು ಪೂರ್ವ ನಿದರ್ಶನವನ್ನು ಹೊಂದಿಸುತ್ತಿದ್ದೇವೆ.
ಆರ್‌ಬಿಐ ಹೊಸ ನಿಯಮ, ಇನ್ಮುಂದೆ ಹಣ ವರ್ಗಾಯಿಸುವಾಗ ತಪ್ಪಿ ಇನ್ಯಾರಿಗೋ ಹೋಗಲ್ಲ
ನಮ್ಮ ಬದ್ಧತೆ ಸ್ಪಷ್ಟವಾಗಿದೆ: ಈ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬ ಭಾರತೀಯನನ್ನು ರಕ್ಷಿಸಲು, ಸಶಕ್ತಗೊಳಿಸಲು ಮತ್ತು ಸಕ್ರಿಯಗೊಳಿಸಲು ಸಮಾಲೋಚನೆಯ ಅವಧಿಯಲ್ಲಿ ಪ್ರತಿಕ್ರಿಯೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವ ಮೂಲಕ ಈ ಸಂವಾದದಲ್ಲಿ ಭಾಗವಹಿಸಲು ಪ್ರತಿಯೊಬ್ಬ ನಾಗರಿಕ, ವ್ಯಾಪಾರ ಮತ್ತು ನಾಗರಿಕ ಸಮಾಜದ ಗುಂಪನ್ನು ನಾನು ಪ್ರೋತ್ಸಾಹಿಸುತ್ತೇನೆ. ಒಟ್ಟಾಗಿ, ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್್ ಇಂಡಿಯಾದ ಆಶಯಗಳನ್ನು ಪ್ರತಿನಿಧಿಸುವ ಮಾರ್ಗಸೂಚಿ ರೂಪಿಸಲು ನಾವು ಈ ನಿಯಮಗಳನ್ನು ಪರಿಷ್ಕರಿಸೋಣ.