ಕೆಟ್ಟ ಪತ್ನಿ ಎಂದ ಮಾತ್ರಕ್ಕೆ ಕೆಟ್ಟ ತಾಯಾಗಿರಬೇಕಿಲ್ಲ. ಹೀಗಾಗಿ, ಪತ್ನಿ ಅನೈತಿಕ ಸಂಬಂಧ ಹೊಂದಿರುವ ಕಾರಣದಿಂದಾಗಿ ಮಗುವಿನ ಪಾಲನೆ ತಂದೆಗೆ ಕೊಡಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್
ವ್ಯಭಿಚಾರವು ವಿಚ್ಛೇದನಕ್ಕೆ ಕಾರಣವಾಗಿರಬಹುದು ಆದರೆ ಮಗುವಿನ ಪಾಲನೆಗಾಗಿ ಅಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ
ಕೇಸೊಂದರಲ್ಲಿ ಒಂಬತ್ತು ವರ್ಷದ ಬಾಲಕಿಯ ಪಾಲನೆಯನ್ನು ಆಕೆಯ ತಾಯಿಗೆ ನೀಡುವಾಗ, 'ಒಳ್ಳೆಯ ಹೆಂಡತಿಯಾಗಿರದಿದ್ದರೆ ಅವಳು ಒಳ್ಳೆಯ ತಾಯಿಯಲ್ಲ ಎಂದರ್ಥವಲ್ಲ. ವ್ಯಭಿಚಾರವು ವಿಚ್ಛೇದನಕ್ಕೆ ಒಂದು ಕಾರಣವಾಗಿರಬಹುದು, ಆದಾಗ್ಯೂ, ಕಸ್ಟಡಿ ನೀಡದಿರಲು ಅದೇ ಕಾರಣವಾಗುವುದಿಲ್ಲ' ಎಂದು ಹೇಳಿದೆ.
2023ರ ಫೆಬ್ರುವರಿಯಲ್ಲಿ ಕೌಟುಂಬಿಕ ನ್ಯಾಯಾಲಯವು ತನ್ನ ಮಗಳ ಪಾಲನೆಯನ್ನು ವಿಚ್ಚೇದನದಿಂದ ದೂರಾದ ಪತ್ನಿಗೆ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಶಾಸಕರೊಬ್ಬರ ಪುತ್ರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರ ಏಕ ಸದಸ್ಯ ಪೀಠವು ಏಪ್ರಿಲ್ 12ರಂದು ವಜಾಗೊಳಿಸಿತ್ತು.
ದಂಪತಿಗಳು 2010ರಲ್ಲಿ ವಿವಾಹವಾದರು ಮತ್ತು ಅವರ ಮಗಳು 2015ರಲ್ಲಿ ಜನಿಸಿದಳು. 2019ರಲ್ಲಿ, ತನ್ನನ್ನು ತಮ್ಮ ಮನೆಯಿಂದ ಹೊರ ಹಾಕಲಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆದರೆ ಪತ್ನಿ ಸ್ವ ಇಚ್ಛೆಯಿಂದ ಬಿಟ್ಟು ಹೋಗಿದ್ದಾಳೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅರ್ಜಿದಾರರ ಪರ ವಕೀಲೆ ಇಂದಿರಾ ಜೈಸಿಂಗ್, ಮಹಿಳೆಯು ಅನೇಕ ಅವ್ಯವಹಾರಗಳನ್ನು ಹೊಂದಿದ್ದು, ಆದ್ದರಿಂದ ಮಗುವಿನ ಪಾಲನೆಯನ್ನು ಆಕೆಗೆ ಹಸ್ತಾಂತರಿಸುವುದು ಸರಿಯಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದರು.
ಮಗುವಿನ ಪಾಲನೆಯ ವಿಷಯವನ್ನು ನಿರ್ಧರಿಸುವಾಗ ವ್ಯಭಿಚಾರದ ವರ್ತನೆಯ ಆರೋಪಗಳು ಯಾವುದೇ ಕಾರಣ ಹೊಂದಿರುವುದಿಲ್ಲ ಎಂದು ನ್ಯಾಯಮೂರ್ತಿ ಪಾಟೀಲ್ ಹೇಳಿದರು.