
ಮುಂಬೈ(ಜು.30) ಬಂಡಾಯ ನಾಯಕರಿಂದ ಸರ್ಕಾರ ಪತನಗೊಂಡಿದ್ದು ಮಾತ್ರವಲ್ಲ, ಶಿವಸೇನೆ ಪಕ್ಷದ ಬುಡವೇ ಅಲುಗಾಡುತ್ತಿದೆ. ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತುಕೊಂಡಿರುವ ಉಳಿದಿರುವ ಶಿವಸೇನೆ ನಾಯಕರು ಇದೀಗ ಬಂಡಾಯ ಶಾಸಕರ ಕ್ಷೇತ್ರಗಳಿಗೆ ತೆರಳಿ ಸಮಾವೇಷ ನೆಡೆಸುುತ್ತಿದ್ದಾರೆ. ನಿಶ್ತಾ ಯಾತ್ರೆ ಅನ್ನೋ ಆಂದೋಲನ ಆರಂಭಿಸಿರುವ ಶಿವಸೇನೆ ಭಾರಿ ರ್ಯಾಲಿ ಆಯೋಜಿಸುತ್ತಿದೆ. ಹೀಗೆ ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಚಾಂದವ್ಲಿ ಕ್ಷೇತ್ರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಜಾನ್ ಕೂಗು ಆರಂಭಗೊಂಡಿದೆ. ಈ ವೇಳೆ ಆದತ್ಯ ಠಾಕ್ರೆ ಮತ್ಮ ಭಾಷಣ ನಿಲ್ಲಿಸಿದ್ದಾರೆ. ಬಳಿಕ ಅಜಾನ್ ಕೂಜ್ ಮುಕ್ತಾಯಗೊಂಡ ಬಳಿಕ ಭಾಷಣ ಆರಂಭಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಶಿವಸೇನೆಯಿಂದ ಬಂಡಾಯ ಎದ್ದು ಏಕನಾಥ್ ಶಿಂಧೆ ಬಣ ಸೇರಿಕೊಂಡ ದಿಲೀಪ್ ಲಾಂಡೆ ವಿಧಾನಸಭಾ ಕ್ಷೇತ್ರವಾಗಿರುವ ಚಾಂದವ್ಲಿ ಕ್ಷೇತ್ರದಲ್ಲಿ ನಿಶ್ತಾ ಯಾತ್ರೆ ನಡೆಸಿದ ಅದಿತ್ಯ ಠಾಕ್ರೆ, ಬೃಹತ್ ಸಮಾವೇಷದ ಮೂಲಕ ಶಿಂಧೆ ಬಣಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಚಾಂದವ್ಲಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಜಾನ್ ಕೂಗು ಆರಂಭಗೊಂಡಿದೆ. ಈ ವೇಳೆ ಅದಿತ್ಯ ಠಾಕ್ರೆ ತಮ್ಮ ಭಾಷಣ ನಿಲ್ಲಿಸಿದ್ದಾರೆ. ಅಜಾನ್ ಮುಗಿದ ಬಳಿಕ ಮತ್ತೆ ಭಾಷಣ ಆರಂಭಿಸಿದ್ದಾರೆ.
Threat Message To Aaditya Thackeray : ಮಹಾ ಸಿಎಂ ಪುತ್ರನಿಗೆ ಬೆದರಿಕೆ : ಬೆಂಗಳೂರು ವ್ಯಕ್ತಿಯ ಬಂಧನ
ಮಹಾರಾಷ್ಟ್ರದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ಶಿವಸೇನೆ ಪಕ್ಷ ಸಂಘಟನೆ ಮಾಡುತ್ತೇನೆ. ಯಾವುದೇ ಶಕ್ತಿಗಳು ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಶಿವಸೇನೆ ನಾಯಕರು ಮತ್ತೊಂದು ಬಣ, ಪಕ್ಷದ ಜೊತೆ ವೀಲಿನಗೊಂಡಿರಬಹುದು. ಆದರೆ ನಮ್ಮ ಕಾರ್ಯಕರ್ತರು ಶಿವಸೇನೆ ಜೊತೆಗೆ ಇದ್ದಾರೆ ಎಂದ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಮೆಟ್ರೋ ಕಾರ್‌ಶೆಡ್ ಯೋಜನೆಯನ್ನು ಠಾಕ್ರೆ ತೀವ್ರವಾಗಿ ಖಂಡಿಸಿದ್ದಾರೆ. ಅರಣ್ಯಪ್ರದೇಶ ನಾಶ ಮಾಡಿ ಅಭಿವೃದ್ಧಿ ಸರಿಯಲ್ಲ. ಇದರ ಅವಶ್ಯಕತೆ ಮುಂಬೈಗೆ ಇಲ್ಲ ಎಂದು ಅದಿತ್ಯ ಠಾಕ್ರೆ ಹೇಳಿದ್ದಾರೆ. ಮೆಟ್ರೋ ಕಾರ್‌ಶೆಡ್ ನಿರ್ಮಿಸಲು ಹೊಸ ಸರ್ಕಾರ ಮರು ಅನುಮೋದನೆ ನೀಡಿದ್ದನ್ನು ಮಹಾ ಅಘಾಡಿ ಸರ್ಕಾರದಲ್ಲಿ ಪರಿಸರ ಖಾತೆ ಸಚಿವರಾಗಿದ್ದ ಆದಿತ್ಯ ಠಾಕ್ರೆ ಬಲವಾಗಿ ವಿರೋಧಿಸಿದ್ದಾರೆ. ಮುಂಬೈನ ಜೀವವೈವಿಧ್ಯತೆಯನ್ನು ಕಾಪಾಡುವ ಉದ್ದೇಶದಿಂದ ಮಾತ್ರವೇ ನಾವು ಆರೇಯಲ್ಲಿ ಕಾರ್‌ಶೆಡ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.
ಆರೇ ಪ್ರದೇಶ ಮುಂಬೈ ಮಹಾನಗರಿಯ ಶ್ವಾಸಕೋಶವಿದ್ದಂತೆ. ನಗರದ ಜೀವವೈವಿಧ್ಯತೆ ಉಳಿಸಲೆಂದೇ ನಾವು ಇಲ್ಲಿ ಮೆಟ್ರೋ ಕಾರ್‌ಶೆಡ್‌ಗೆ ನೀಡಿದ್ದ ಅನುಮತಿ ರದ್ದು ಪಡಿಸಿದ್ದೆವು. ಅದರ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ಹಲವು ಜೀವ ಸಂಕುಲಗಳ ಜೀವ ತಳೆದಿವೆ. ನಿತ್ಯವೆಂಬಂತೆ ಚಿರತೆಗಳು ಕೂಡಾ ಕಾಣಿಸಿಕೊಳ್ಳುತ್ತಿವೆ. ಅರೇ ಎಂಬುದು ಕೇವಲ 2700 ಮರಗಳ ಪ್ರದೇಶವಲ್ಲ. ಅದು ಜೀವವೈವಿಧ್ಯತೆ. ಅದನ್ನು ಮುಂಬೈಗೆ ಉಳಿಸಲೆಂದೇ ಅಲ್ಲಿ ನಿರ್ಮಾಣ ಚಟುವಟಿಕೆಗೆ ತಡೆ ನೀಡಲಾಗಿತ್ತು. ಮುಂಬೈ ಅಭಿವೃದ್ಧಿ ಸುಸ್ಥಿರ ಮತ್ತು ಹೆಚ್ಚು ಯೋಜಿತ ರೀತಿಯಲ್ಲಿ ಆಗಬೇಕು’ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ