
ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯನ್ನು (Exit Polls) ಮತದಾರರು ತಲೆಕೆಳಗಾಗಿಸಿದ್ದಾರೆ. ಎನ್‌ಡಿಎ ಮತ್ತು ಐಎನ್‌ಡಿಐಎ (NDA Vs INDIA) ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇದೀಗ ಚುನಾವಣೆ ಫಲಿತಾಂಶದ (Loksabha Election Results 2024) ಕುರಿತು ಹಿರಿಯ ನಟ ಪ್ರಕಾಶ್ ರೈ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರಕಾಶ್ ರೈ (Actor Prakash Rai) ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಎಂದಿನಂತೆ ಸಾಲಿನ ಕೊನೆಗೆ ಜಸ್ಟ್ ಆಸ್ಕಿಂಗ್ ಹ್ಯಾಶ್ ಟ್ಯಾಗ್ ಹಾಕಿಕೊಂಡಿದೆ. "ಚಕ್ರವರ್ತಿಯು ಬೆತ್ತಲೆಯಾಗಿದ್ದಾನೆ. ಅವನು ಈಗ ಬೇರೊಬ್ಬರ ಬೆಂಬಲದ ಸಹಾಯ ಪಡೆದುಕೊಳ್ಳುವಂತಾಗಿದೆ. ಭಾರತ ಮತ್ತು ಜವಾಬ್ದಾರಿಯುತ ನಾಗರಿಕ ಸಮಾಜಕ್ಕೆ ಧನ್ಯವಾದಗಳು. ಅಹಂಕಾರವನ್ನು ಪಂಕ್ಚರ್ ಮಾಡಿ, ಅವರ ಸ್ಥಾನವನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ನಾವು ನಮ್ಮ ದೇಶಕ್ಕಾಗಿ ಉತ್ತಮ ರೀತಿಯಲ್ಲಿ ಹೋರಾಡಿದ್ದು, ಇದು ಮುಂದುವರಿಯುತ್ತದೆ" ಎಂದು ಪ್ರಕಾಶ್ ರೈ ಬರೆದುಕೊಂಡಿದ್ದಾರೆ.
ಸದ್ಯದ ಟ್ರೆಂಡ್ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿದೆ. ಚಾಮರಾಜನಗರದಲ್ಲಿ ಎವಿಎಂ ಯಂತ್ರಗಳಲ್ಲಿ ತಾಂತ್ರಿಕ ದೋಷದಿಂದ ಅಂತಿಮ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್
ಈ ಬಾರಿ ಎಲ್ಲಾ ಎಕ್ಸಿಟ್ ಪೋಲ್‌ಗಳ ಲೆಕ್ಕಾಚಾರವನ್ನು ಉತ್ತರಪ್ರದೇಶ ರಾಜ್ಯ ಉಲ್ಟಾ ಮಾಡಿದೆ. ರಾಮ ಮಂದಿರ ವಿಚಾರದಿಂದ ದೊಡ್ಡ ಮಟ್ಟದ ಗೆಲುವಿನ ಅಲೆ ನಿರೀಕ್ಷೆ ಮಾಡಿದ್ದ ಬಿಜೆಪಿಗೆ ಅತಿದೊಡ್ಡ ಶಾಕ್ ಎದುರಾಗಿದೆ. ಪ್ರಸ್ತುತ ಮಾಹಿತಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಮುನ್ನಡೆಗಾಗಿ ಬಿಜೆಪಿ ಹಾಗೂ ಇಂಡಿ ಒಕ್ಕೂಟದ ನಡುವೆ ಥ್ರಿಲ್ಲಿಂಗ್ ಫೈಟ್ ನಡೆಯುತ್ತಿದೆ. ಉತ್ತರ ಪ್ರದೇಶ ರಾಜ್ಯದ ಫಲಿತಾಂಶ ಇಂಡಿಯಾ ಬ್ಲಾಕ್ ಪಾಲಿಗೂ ಅಚ್ಚರಿ ತಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಉತ್ತರ ಪ್ರದೇಶದಲ್ಲಿ ಇಂಡಿ ಒಕ್ಕೂಟ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡುತ್ತಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ