ಸಾಮಾನ್ಯ ನಟನೆಂದು ಭಾವಿಸಿದ್ದೆ, ನಸೀರುದ್ದೀನ್ ಶಾ ಒಬ್ಬ ಡೇಂಜರಸ್ ದಿಮಾಗಿ ನಕ್ಸಲ್: ಕಿರಣ್ ರಿಜಿಜು ಪೋಸ್ಟ್ ವೈರಲ್

Published : Oct 29, 2026, 11:17 AM ISTUpdated : Oct 29, 2026, 11:29 AM IST
Kiren rijiju call Naseeruddin shah dimagi naxal

ಸಾರಾಂಶ

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ ನಟ ನಾಸಿರುದ್ದೀನ್ ಶಾ ವಿರುದ್ಧ ಕೇಂದ್ರ ಸಚಿವ ಕಿರಣ್ ರಿಜಿಜು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾ ಅವರನ್ನು ಅಪಾಯಕಾರಿ 'ಅರ್ಬನ್ ನಕ್ಸಲ್' ಎಂದು ಕರೆದಿರುವ ಸಚಿವರು, ಅವರ ನಿಜಬಣ್ಣ ಈಗ ಬಯಲಾಗಿದೆ ಎಂದಿದ್ದಾರೆ.

Naseeruddin Shah Dangerous Dimagi Naxal: ಪ್ರತಿಭಟನಾನಿರತ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ 76 ವರ್ಷದ ನಟ ನಾಸಿರುದ್ದೀನ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಕಿರಣ್ ರಿಜಿಜು, 'ನಾಸಿರುದ್ದೀನ್ ಶಾ ಅಪಾಯಕಾರಿ ಅರ್ಬನ್ ನಕ್ಸಲ್(Dimagi Naxal) ಎಂದು ಹರಿಹಾಯ್ದಿದ್ದಾರೆ.

ನಾಸೀರುದ್ದೀನ್ ಶಾ ಅವರನ್ನ ಒಬ್ಬ ಸಾಮಾನ್ಯ ನಟನೆಂದು ಭಾವಿಸಿದ್ದೆ. ಹಿರಿಯ ನಟನಾಗಿದ್ದ ಅವರನ್ನು ನಾನು ತುಂಬಾ ಗೌರವಿಸುತ್ತಿದ್ದೆ, ಇಷ್ಟಪಡುತ್ತಿದ್ದೆ. ಆದರೆ ಅವರು ದೇಶದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಯತ್ನಿಸುವ ಅಪಾಯಕಾರಿ ಬುದ್ಧಿಜೀವಿ, ಅರ್ಬನ್ ನಕ್ಸಲ್ ಎಂಬುದು ಗೊತ್ತಾಗಿದೆ. ಅವರ ನಿಲುವುಗಳ ಬಗ್ಗೆ ಇಷ್ಟು ವರ್ಷ ತಪ್ಪಾಗಿ ಭಾವಿಸಿದ್ದೆ ಅವರ ನಿಜಬಣ್ಣ, ವ್ಯಕ್ತಿತ್ವ ತಡವಾಗಿ ಅರಿವಾಗಿದೆ ಎಂದು ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಎಕ್ಸ್‌(‍‍X) ಪೋಸ್ಟ್ ಮಾಡಿರುವ ಕಿರಣ್ ರಿಜಿಜು ಅವರು, ಮಂಗಳವಾರ ಫೇಸ್‌ಬುಕ್‌ ಲೈವ್‌ನಲ್ಲಿ ಹಂಚಿಕೊಂಡ ನಾಸೀರುದ್ಧೀನ್ ಶಾ ಅವರ ವಿಡಿಯೋ ಶೇರ್ ಮಾಡಿಕೊಂಡು ಅದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ನಾನು ದಿಮಾಗಿ ನಕ್ಸಲ್ ಎಂದ ನಸೀರುದ್ದೀನ್ ಶಾ!

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘವನ್ನು ಮರುಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾ ಬೆಂಬಲ ಸೂಚಿಸಿದ್ದಲ್ಲದೆ 'ನಾನು ದಿಮಾಗಿ ನಕ್ಸಲ್ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ನನ್ನಂಥವರಿಗೆ ಈ ಕಾವಲುಗಾರ ಇನ್ನೇನೆನೂ ಅಡ್ಡಹೆಸರು ಇಟ್ಟಿದ್ದಾರೋ ಗೊತ್ತಿಲ್ಲ. ದೇಶದ್ರೋಹಿ, ತುಕ್ಡೇ ಗ್ಯಾಂಗ್ ಎಂದೂ ಕರೆಯುತ್ತಾರೆ..' ಎಂದಿರುವ ನಸೀರುದ್ದೀನ್ ಶಾ, 'ದಿಮಾಗಿ ನಕ್ಸಲ್' ಎಂದು ಬರೆದಿರುವ ಬ್ಯಾಡ್ಜ್ ಧರಿಸಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಧಾನಿ ಮೋದಿ ದಿಮಾಗಿ ನಕ್ಸಲ್ ಪದ ಬಳಸಿದ್ದರು

ಪ್ರಧಾನಿ ನರೇಂದ್ರ ಮೋದಿಯವರು ಭಾಷಣವೊಂದರಲ್ಲಿ ಮೊದಲ ಬಾರಿಗೆ 'ದಿಮಾಗಿ ನಕ್ಸಲ್' ಪದ ಬಳಸಿದ್ದರು. ಅನಂತರ ಆಡಳಿತ ಪಕ್ಷದ ನಾಯಕರು ಈ ಪದವನ್ನು ಪ್ರತಿಪಕ್ಷಗಳನ್ನು ಟೀಕಿಸಲು ಬಳಸತೊಡಗಿದರು. ಒಳ್ಳೆಯ ಮಾರ್ಗ ಅನುಸರಿಸಲು ಶಿಕ್ಷಣ ಪಡೆದಿದ್ದರೂ ಮಾವೋವಾದಿ ವಿಚಾರಗಳನ್ನು ಬೆಂಬಲಿಸುವವರನ್ನು ಟೀಕಿಸುವ ಉದ್ದೇಶದಿಂದ ಈ ಪದವನ್ನು ಬಳಸಲಾಗುತ್ತದೆ.

ಯುವಕರ ಧೈರ್ಯ ಕುಗ್ಗಿಸಲು ಇನ್ನೇನು ಮಾಡುತ್ತೀರಿ?

ವಿದ್ಯಾರ್ಥಿಗಳ ಪ್ರತಿಭಟನೆ ಬೆಂಬಲಿಸಿ ವಿಡಿಯೋ ಮಾಡಿದ್ದ ನಸೀರುದ್ದೀನ್ ಶಾ ಅವರು, ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಸರ್ಕಾರ ಹತ್ತಿಕ್ಕುತ್ತಿರುವ ರೀತಿಗೆ ಶಾ ಅಸಮಾಧಾನ ವ್ಯಕ್ತಪಡಿಸಿದ್ದರು. ಯುವಜನರು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು ಎಂದು ಪ್ರಶ್ನಿಸಿದ್ದರು. ಅಲ್ಲದೆ ನಮ್ಮ ದೇಶದ ಯುವಕರ ಧೈರ್ಯವನ್ನ ಕುಗ್ಗಿಸಲು, ಶಿಕ್ಷಣ ವ್ಯವಸ್ಥೆ ನಾಶಪಡಿಸಲು ಆ ಮೂಲಕ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳಲು ಈ ಸರ್ಕಾರ ಇನ್ನೇನು ಮಾಡುತ್ತದೆ? ಇನ್ನೆಷ್ಟು ದಿನ ಹೀಗೆ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದರು.

ಜೆಎನ್‌ಯು, ಜಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ

ವಿಡಿಯೋದಲ್ಲಿ ಜೆಎನ್‌ಯು, ಜಾಮಿಯಾ ವಿವಿಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳನ್ನ ಉಲ್ಲೇಖಿಸಿರುವ ನಸೀರುದ್ದೀನ್ ಶಾ, ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆ ಹತ್ತಿಕ್ಕುತ್ತಿದೆ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ. ಎಂದು ಆರೋಪಿಸಿದ್ದಾರೆ. ಮೊದಲಿಗೆ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದರು. ಅನಂತರ ಸತ್ಯಜಿತ್ ರೇ ಫಿಲ್ಮ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳ ಮೇಲೂ ನಡೆಸಿದರು. ಇದೀಗ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇವೆಲ್ಲವನ್ನು ಜನರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾರೆ' ಎಂದು ವಿಡಿಯೋದಲ್ಲಿ ನಸೀರುದ್ದೀನ್ ಶಾ ಆಕ್ರೋಶ ವ್ಯಕ್ತಪಡಿಸಿದ್ದರು.

ನೋಡೋಣ ಕೊಲೆಗಡುಕನ ತೋಳಲ್ಲಿ ಅದೆಷ್ಟು ಶಕ್ತಿ ಇದೆಯೆಂದು..!

ವಿಡಿಯೋದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಿಸ್ಮಿಲ್ ಅಜೀಮಾಬಾದಿ ಅವರ 'ಸರ್ಫರೋಶಿ ಕಿ ತಮನ್ನಾ ಅಬ್ ಹಮಾರೆ ದಿಲ್ ಮೇ ಹೈ' ಕವಿತೆಯ ಸಾಲೊಂದನ್ನು ಉಲ್ಲೇಖಿಸಿದ್ದದರು. 'ನೋಡೋಣ, ಕೊಲೆಗಡುಕನ ತೋಳಿನಲ್ಲಿ ಎಷ್ಟು ಶಕ್ತಿ ಇದೆ' ಎಂಬ ಅರ್ಥ ನೀಡುವ ಈ ಸಾಲಿನ ಮೂಲಕ ಪ್ರತಿಭಟನೆಗಳನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳಿಗೆ ಸವಾಲು ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕದಲ್ಲಿ 'ಆರ್‌ಎಸ್‌ಎಸ್ ಫ್ರೆಂಡ್ಸ್' ಸಂಘಟನೆಯ ನೋಂದಣಿ: ವಿದೇಶಿ ಏಜೆಂಟ್ ಆಗಿ ಸಲ್ಲಿಕೆ
Fact Check: ದೇವಸ್ಥಾನ ಚಿತ್ರವಿರುವ ಹೊಸ ₹1000 ನೋಟು ಬಿಡುಗಡೆ; ವೈರಲ್ ಆಗಿರುವ ಈ ಸುದ್ದಿಯ ಅಸಲಿಯತ್ತೇನು?