
Nana patekar death: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಆಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಇಂದು ಬೆಳ್ಳಂ ಬೆಳಗ್ಗೆ ಅವರ ನಿಧನದ ಸುದ್ದಿ ಕೇಳಿ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಅವರ ಅಗಲಿಕೆ ಕಲಾ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ.
ಮರಾಠಿ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ನಾನಾ ಪಾಟೇಕರ್ ಅವರು ನಟಿಸಿದ ಬಹುತೇಕ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದಿವೆ. ಹಲವು ರಾಷ್ಟ್ರಪ್ರಶಸ್ತಿಗಳು ಮುಡಿಗೇರಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ನಟನೆ ಜೊತೆಗೆ ಅವರು ನೇರ ಮಾತಿಗೆ ಹೆಸರುವಾಸಿಯಾಗಿದ್ದರು. ಸಿನಿಮಾ ಅಷ್ಟೇ ಅಲ್ಲದೆ ಅವರು ರಾಜಕೀಯ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದರು. ಜೂನ್ 2024 ರಲ್ಲಿ ನಡೆದ ಪಾಡ್‌ಕ್ಯಾಸ್ಟ್ ಒಂದರಲ್ಲಿ ರಾಜಕೀಯ ಪ್ರವೇಶಿಸಲು ವಿವಿಧ ರಾಜಕೀಯ ಪಕ್ಷಗಳಿಂದ ತಮಗೆ ಆಫರ್‌ಗಳು ಬಂದಿವೆ ಎಂದು ಬಹಿರಂಗಪಡಿಸಿದರು. 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಆಫರ್ ಕೂಡ ಬಂದಿತ್ತು. ಆದರೆ ಅವರು ನಿರಾಕರಿಸಿದ್ದರು.
ರಾಜಕಾರಣಕ್ಕೆ ಬರಲು ಯಾವುದಾದರೂ ರಾಜಕೀಯ ಪಕ್ಷದಿಂದ ನಿಮಗೆ ಆಫರ್ ಬಂದಿದೆಯೇ? ಎಂದು ಪ್ರಶ್ನಿಸಲಾಗಿತ್ತು. ಆಗ ನಾನಾ ಪಾಟೇಕರ್ ಅವರು ಹೇಳಿಕೆ ಅಚ್ಚರಿ ಮೂಡಿಸಿತ್ತು. ಒಂದಲ್ಲ, ಎಲ್ಲಾ ಪಕ್ಷಗಳು ರಾಜಕಾರಣಕ್ಕೆ ಬರುವಂತೆ, ನಮ್ಮ ಪಕ್ಷ ಸೇರುವಂತೆ ಕೇಳಿಕೊಂಡಿವೆ ಎಂದು ಉತ್ತರಿಸಿದ್ದರು. ಘಟಾನುಘಟಿ ರಾಜಕಾರಣಿಗಳೇ ಆಫರ್ ಕೊಟ್ಟರೂ ನಾನಾ ಪಾಟೇಕರ್ ಮಾತ್ರ ರಾಜಕೀಯ ಪ್ರವೇಶವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ರಾಜಕಾರಣ ಪ್ರವೇಶಿಸಿ ನಾನು ಯಾವುದೇ ಒಂದು ಪಕ್ಷಕ್ಕೆ ಸೇರಿದಾಗ ಪಕ್ಷದ ನಾಯಕರಿಗೂ ಏನಾದರೂ ತಪ್ಪಾಗಿದೆ ಎಂದು ಅನಿಸಿದರೆ ಅದನ್ನು ನೇರವಾಗಿ ಹೇಳುವುದಾಗಿ ಹೇಳಿದ್ದರು
'ನನ್ನ ಪಕ್ಷದ ಮುಖ್ಯಸ್ಥರಿಗೆ 'ನೀನು ಹುಚ್ಚ, ಇದು ಹೇಗೆ ಸಾಧ್ಯ?' ಎಂದು ನಾನು ಹೇಳುತ್ತೇನೆ. ಆಗ ಇಂಥದ್ದನ್ನು ನೇರ ಮಾತು ತಡೆದುಕೊಳ್ಳುತ್ತಾರೆಯೇ? ಎಂದು ನಾನಾ ಸ್ಟ್ರೈಟ್ ಫಾರ್ವರ್ಡ್ ಶೈಲಿಯಲ್ಲಿ ಮರು ಪ್ರಶ್ನಿಸಿದ್ದರು ಹಾಗೆ ಮಾಡಿದರೆ, ಪಕ್ಷದ ಮುಖ್ಯಸ್ಥರು ಹೊರಹಾಕುತ್ತಾರೆ. ಇದೇ ಕಾರಣಕ್ಕೆ ನಾನು ರಾಜಕೀಯ ಪ್ರವೇಶಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ರಾಜಕೀಯ ವಾತಾವರಣ ವಿಭಿನ್ನವಾಗಿದೆ ಎಂದೂ ಅವರು ಹೇಳಿದ್ದರು.
ಪಾಡ್‌ಕಾಸ್ಟ್ ಸಂದರ್ಶನದ ವೇಳೆ, ನಾನಾ ಪಾಟೇಕರ್ ಅವರು 2024 ರ ಲೋಕಸಭಾ ಚುನಾವಣೆಗೆ ರಾಜಕೀಯ ಪ್ರವೇಶಿಸುವ ಪ್ರಸ್ತಾಪವನ್ನು ಸ್ವೀಕರಿಸಿದ್ದಾರೆಂದು ಬಹಿರಂಗಪಡಿಸಿದರು. ಆದರೆ ಅದನ್ನೂ ನಾನಾ ತಿರಸ್ಕರಿಸಿದ್ದರು.
2024 ರ ಲೋಕಸಭಾ ಚುನಾವಣೆಯಲ್ಲಿ ಹೇಮಾ ಮಾಲಿನಿಯ ಗೆಲುವಿಗೆ ನಾನಾ ಪಾಟೇಕರ್ ಅಭಿನಂದಿಸಿದ್ದರು. ಅವರನ್ನು ತಮ್ಮ ಕಾಲದ ನಟಿ ಎಂದು ಬಣ್ಣಿಸಿದ್ದರಷ್ಟೇ ಅಲ್ಲದೆ ನಾನು ತುಂಬಾ ಮೆಚ್ಚುವ ನಟಿ ಹೇಮಾ ಮಾಲೀನಿ ಎಂದು ಮುಕ್ತವಾಗಿ ಹೊಗಳಿದ್ದರು. ನಾನಾ ತನ್ನ ಕಾಲದ ನಟಿ ವಹೀದಾ ರೆಹಮಾನ್ ಬಗ್ಗೆಯೂ ಪ್ರಸ್ತಾಪಿಸಿ, ನನಗೆ ಇಷ್ಟವಾದ ನಟಿ ಎಂದಿದ್ದರು.
ಯೋಗಿ ಆದಿತ್ಯನಾಥ್ ಅವರ ಕಾರ್ಯಶೈಲಿಯನ್ನು ಸಹ ನಾನಾ ಪಾಟೇಕರ್ ಹೊಗಳಿದ್ದರು. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಾನಾ ಪಾಟೇಕರ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯಶೈಲಿಯನ್ನು ಶ್ಲಾಘಿಸಿದ್ದರು .
ನಾನಾ ಪಾಟೇಕರ್ ಉತ್ತರ ಪ್ರದೇಶಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದು, ಹಲವು ವರ್ಷಗಳಿಂದ ರಾಜ್ಯವನ್ನು ಗಮನಿಸಿರುವುದಾಗಿ ಹೇಳಿಕೊಂಡಿದ್ದರು. ನಾನಾ ಹೇಳುವ ಪ್ರಕಾರ ರಾಜ್ಯದಲ್ಲಿ ಬದಲಾವಣೆಗಳನ್ನು ನೋಡುತ್ತಿದ್ದೇನೆ. ಕಾನೂನು ಮತ್ತು ಸುವ್ಯವಸ್ಥೆ, ಮೂಲಸೌಕರ್ಯ ಮತ್ತು ಸರ್ಕಾರದ ಕಾರ್ಯ ಶೈಲಿಯಲ್ಲಿನ ಬದಲಾವಣೆ, ರ್ಧಾರ ತೆಗೆದುಕೊಳ್ಳುವಲ್ಲಿ ಸರ್ಕಾರದ ಸ್ಪಷ್ಟತೆಯನ್ನು ನಾನಾ ವಿಶೇಷವಾಗಿ ಶ್ಲಾಘಿಸಿದರು. 250 ದಶಲಕ್ಷಕ್ಕೂ ಹೆಚ್ಚು ಜನರು, ವೈವಿಧ್ಯಮಯ ಪ್ರದೇಶಗಳು, ಭಾಷೆಗಳು ಮತ್ತು ಸಂಪ್ರದಾಯಗಳು ಮತ್ತು ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯನ್ನು ಹೊಂದಿರುವ ಇಷ್ಟು ದೊಡ್ಡ ರಾಜ್ಯವನ್ನು ನಡೆಸುವುದು ಸುಲಭದ ಮಾತಲ್ಲ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ