ಸಕ್ರಿಯ ಕೇಸು ಹೆಚ್ಚಳದ ಆತಂಕ: 55 ದಿನದ ಇಳಿಮುಖದ ಹಾದಿಗೆ ಬ್ರೇಕ್‌!

By Kannadaprabha NewsFirst Published Jul 9, 2021, 8:18 AM IST
Highlights

* ಸತತ 55 ದಿನದ ಇಳಿಮುಖದ ಹಾದಿಗೆ ಬ್ರೇಕ್‌

* 55 ದಿನಗಳ ಬಳಿಕ ಸಕ್ರಿಯ ಕೇಸು ಹೆಚ್ಚಳ

* ಸಕ್ರಿಯ ಪ್ರಕರಣಗಳ ಸಂಖ್ಯೆ 4.6 ಲಕ್ಷಕ್ಕೆ ಏರಿಕೆ

* ಗುರುವಾರ 45,892 ಕೇಸು, 817 ಜನರ ಸಾವು

ನವದೆಹಲಿ(ಜು.09): ಕೊರೋನಾ 3ನೇ ಅಲೆ ಮುಂದಿನ ತಿಂಗಳು ಏಳಬಹುದು ಎಂಬ ತಜ್ಞರ ಅಂದಾಜಿನ ಬೆನ್ನಲ್ಲೇ, ದೇಶದಲ್ಲಿ 55 ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಬುಧವಾರ ದೇಶದಲ್ಲಿ 459920 ಸಕ್ರಿಯ ಪ್ರಕರಣ ದಾಖಲಾಗಿದ್ದರೆ, ಗುರುವಾರ ಅದು 460704ಕ್ಕೆ ಏರಿದೆ. ಅಂದರೆ ಒಟ್ಟಾರೆ 784 ಪ್ರಕರಣ ಹೆಚ್ಚಾಗಿದೆ. ಸತತ 55 ದಿನ ಇಳಿಕೆ ಹಾದಿಯಲ್ಲಿದ್ದ ಸಕ್ರಿಯ ಕೇಸು ಮತ್ತೆ ಏರಿಕೆ ಹಾದಿ ಹಿಡಿದಿದ್ದು, ಸಣ್ಣ ಆತಂಕಕ್ಕೆ ಕಾರಣವಾಗಿದೆ.

ದೇಶದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ ಸಮಯದಲ್ಲಿ 45,892 ಹೊಸ ಕೇಸು ದಾಖಲಾಗಿದ್ದು, 817 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.07 ಕೋಟಿಗೆ ಮತ್ತು ಸಾವಿನ ಪ್ಮರಾಣ 4.05 ಲಕ್ಷಕ್ಕೆ ತಲುಪಿದೆ.

ಈ ನಡುವೆ ಕಳೆದ 24 ಗಂಟೆಯಲ್ಲಿ 18.93 ಲಕ್ಷ ಟೆಸ್ಟ್‌ಗಳನ್ನು ನಡೆಸಲಾಗಿತ್ತು. ಇದಕ್ಕೆ ಹೋಲಿಸಿದರೆ 45 ಸಾವಿರ ಕೇಸು ಹೆಚ್ಚೇನಲ್ಲ. ಏಕೆಂದರೆ ಪಾಸಿಟಿವಿಟಿ ದರ ದಾಖಲಾಗಿದ್ದು ಶೇ.2.37ಕ್ಕೆ ಮಾತ್ರ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಚೇತರಿಕೆ ಪ್ರಮಾಣ ಶೇ.97.18 ಇದೆ. ಇದೇ ವೇಳೆ, 36 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

click me!