ರಾಮ ಮಂದಿರಕ್ಕೆ ಹೋರಾಟ ನಡೆಸಿದ್ದ ಆಚಾರ್ಯ ಧರ್ಮೇಂದ್ರ ವಿಧಿವಶ

By Santosh NaikFirst Published Sep 19, 2022, 1:50 PM IST
Highlights

ಹಿಂದೂ ಮುಖಂಡ ಆಚಾರ್ಯ ಸ್ವಾಮಿ ಧರ್ಮೇಂದ್ರ ನಿಧನರಾಗಿದ್ದಾರೆ. ಸೋಮವಾರ ಬೆಳಗ್ಗೆ ರಾಜಸ್ಥಾನದ ಜೈಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಆಚಾರ್ಯ ಸ್ವಾಮಿ ಧರ್ಮೇಂದ್ರ ಅವರು ಕಳೆದ 1 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಎಸ್ ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಆಚಾರ್ಯ ಧರ್ಮೇಂದ್ರ ಶ್ರೀರಾಮ ಮಂದಿರ ಚಳವಳಿಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದರು.
 

ಜೈಪುರ (ಸೆ.19): ರಾಮಮಂದಿರ ಚಳುವಳಿಯಲ್ಲಿ ಸಕ್ರಿಯವಾಗಿ ಹೋರಾಟ ನಡೆಸಿದ್ದ ಮತ್ತೊಬ್ಬ ವ್ಯಕ್ತಿ ಸೋಮವಾರ ನಿಧನರಾಗಿದ್ದಾರೆ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ನಿಧನರಾದ ಕೆಲಸ ದಿನಗಳಲ್ಲಿಯೇ, ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಹೋರಾಟ ನಡೆಸಿದ್ದ ಹಿಂದು ನಾಯಕ ಆಚಾರ್ಯ ಸ್ವಾಮಿ ಧರ್ಮೇಂದ್ರ ನಿಧನರಾಗಿದ್ದಾರೆ.  ಸೋಮವಾರ ಬೆಳಗ್ಗೆ ರಾಜಸ್ಥಾನದ ಜೈಪುರದಲ್ಲಿ ಕೊನೆಯುಸಿರೆಳೆದಿದ್ದಾರೆ. ಆಚಾರ್ಯ ಸ್ವಾಮಿ ಧರ್ಮೇಂದ್ರ ಅವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಅನಾರೋಗ್ಯದಲ್ಲಿ ಬಳಲುತ್ತಿದ್ದ ಅವರನ್ನು ಎಸ್‌ಎಂಎಸ್‌ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಇವರ ಆರೋಗ್ಯ ವಿಚಾರಿಸಿದ್ದರು. ಅವರನ್ನು ನೋಡಲು ಹಲವು ರಾಜಸ್ಥಾನ ಬಿಜೆಪಿ ನಾಯಕರು ಕೂಡ ಆಸ್ಪತ್ರೆಗೆ ಆಗಮಿಸಿದ್ದರು. ಆಚಾರ್ಯ ಸ್ವಾಮಿ ಧರ್ಮೇಂದ್ರ ಅವರಿಗೆ ಸೋಮೇಂದ್ರ ಶರ್ಮಾ ಮತ್ತು ಪ್ರಣವೇಂದ್ರ ಶರ್ಮಾ ಎಂಬ ಇಬ್ಬರು ಮಕ್ಕಳಿದ್ದಾರೆ. ಸೋಮೇಂದ್ರ ಅವರ ಪತ್ನಿ ಮತ್ತು ಆಚಾರ್ಯ ಅವರ ಸೊಸೆ ಅರ್ಚನಾ ಶರ್ಮಾ ಪ್ರಸ್ತುತ ಗೆಹ್ಲೋಟ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಆಚಾರ್ಯ ಧರ್ಮೇಂದ್ರ (Acharya Dharmendra) ಅವರ ನಿಧನಕ್ಕೆ ದೇಶಾದ್ಯಂತ ಹಿಂದೂ ಸಂಘಟನೆಗಳಿಗೆ ಸಂಬಂಧಿಸಿದ ಜನರು ಸಂತಾಪ ಸೂಚಿಸಿದ್ದಾರೆ. ಶ್ರೀರಾಮ ಮಂದಿರ (Sri ram Mandir) ಚಳವಳಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ತಿನೊಂದಿಗಿನ ಅವರ ಸುದೀರ್ಘ ಒಡನಾಟದ ಸಮಯದಲ್ಲಿ, ರಾಮ ಮಂದಿರದ ವಿಷಯದಲ್ಲಿ ಅವರ ಮುಕ್ತ ನಿಲುವಿನಿಂದಾಗಿ ಅವರು ಗಮನ ಸೆಳೆದಿದ್ದರು. ಬಾಬ್ರಿ ಮಸೀದಿ (Babri Masjid) ಧ್ವಂಸ ಪ್ರಕರಣದ ತೀರ್ಪು ಹೊರಬೀಳುವ ಹಂತದಲ್ಲಿದ್ದಾಗ, ತೀರ್ಪಿಗೆ ಮುನ್ನ ನಾನು ನಂಬರ್ ಒನ್ ಆರೋಪಿ ಎಂದು ಹೇಳಿದ್ದರು. ನಾನು ಏನೇ ಮಾಡಿದರೂ ಎಲ್ಲರ ಮುಂದೆ ಮಾಡಿದ್ದೇನೆ. ನಾನು ಶಿಕ್ಷೆಗೆ ಹೆದರುವುದಿಲ್ಲ ಎಂದು ಸಾರಿದ್ದರು.

ಮಹಾತ್ಮಾ ರಾಮಚಂದ್ರ ವೀರ ಮಹಾರಾಜರ ಪುತ್ರ ಆಚಾರ್ಯ ಧರ್ಮೇಂದ್ರ ಅವರು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಮಾರ್ಗದರ್ಶನ ಮಂಡಳಿಯಲ್ಲಿ ಕೆಲಸ ಮಾಡಿದ್ದರು ಅವರ ಇಡೀ ಜೀವನ ಹಿಂದಿ, ಹಿಂದುತ್ವ ಮತ್ತು ಹಿಂದೂಸ್ತಾನದ ಅಭಿವೃದ್ಧಿಗೆ ಮುಡಿಪಾಗಿತ್ತು. ಮಹಾತ್ಮಾ ಗಾಂಧಿ (Mahatma Gandhi) ಅವರ ಕುರಿತಾಗಿ ವಿವಾದಾತ್ಮಕ ಹೇಳಿಕೆಗಾಗಿ ಅವರು ದೊಡ್ಡ ಮಟ್ಟದಲ್ಲು ಸುದ್ದಿಯಾಗಿದ್ದರು.

ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳ ಬಗ್ಗೆ ವಿವರಿಸಿದ ಪೇಜಾವರ ಶ್ರೀ

ಆಚಾರ್ಯ ಧರ್ಮೇಂದ್ರ ಗುಜರಾತ್‌ನ ಮಾಳವಾಡದಲ್ಲಿ 1942ರ  ಜನವರಿ 9 ರಂದು ಜನಿಸಿದರು. ಬಾಬ್ರಿ ಧ್ವಂಸ ಪ್ರಕರಣದಲ್ಲಿ ಆಚಾರ್ಯ ಧರ್ಮೇಂದ್ರ ಜೊತೆಗೆ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್, ಉಮಾಭಾರತಿ ಅವರನ್ನೂ ಆರೋಪಿಗಳೆಂದು ಪರಿಗಣಿಸಲಾಗಿತ್ತು.

ರಾಮಮಂದಿರಕ್ಕೆ ಕರ್ನಾಟಕದಿಂದ ಸ್ವರ್ಣ ಶಿಖರ ಅರ್ಪಣೆಗೆ ಚಿಂತನೆ

ಗಾಂಧಿ ನೋಟುಗಳೇ ಭ್ರಷ್ಟಾಚಾರಕ್ಕೆ ಕಾರಣ:
ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಗಾಂಧಿ ಚಿತ್ರವಿರುವ ನೋಟುಗಳೇ ಕಾರಣ ಎಂದು ಆಚಾರ್ಯ ಹೇಳಿದ್ದರು. ಮಹಾತ್ಮ ಗಾಂಧಿಯ ಬದಲು ಗಣೇಶನ ಚಿತ್ರವನ್ನು ಭಾರತದ ಕರೆನ್ಸಿ ನೋಟುಗಳಲ್ಲಿ ಪ್ರಿಂಟ್‌ ಮಾಡಬೇಕು. ಆಗ ಜನರು ನೋಟುಗಳನ್ನು ಪ್ರಸಾದದ ರೀತಿ ನೋಡುತ್ತಾರೆ. ಆಗ ಭ್ರಷ್ಟಾಚಾರದ ಪ್ರಶ್ನೆಯೇ ಇರುವುದಿಲ್ಲ ಎಂದಿದ್ದರು. ನೋಟುಗಳ ಮೇಲೆ ಗಣೇಶನ ಚಿತ್ರವನ್ನು ಮುದ್ರಿಸಲು ಸರ್ಕಾರ ನಿರ್ಧರಿಸಿದರೆ, ಭ್ರಷ್ಟಾಚಾರ ನಿರ್ಮೂಲನೆಗೆ ಯಾವುದೇ ಜನಲೋಕಪಾಲ್ ಕಾಯ್ದೆಯ ಅಗತ್ಯವಿಲ್ಲ ಎಂದು ಅವರು ಹೇಳಿದರು. ಭ್ರಷ್ಟಾಚಾರ ತಾನಾಗಿಯೇ ಮಾಯವಾಗುತ್ತದೆ ಎಂದು ಹೇಳಿದ್ದರು. ದೇಶದಲ್ಲಿ ಇಂಗ್ಲೀಷ್‌ ಭಾಷೆ ಪ್ರಾಬಲ್ಯ ಸಾಧಿಸುತ್ತಿದೆ. ಇಂಗ್ಲೀಷ್‌ನಷ್ಟು ಕೆಟ್ಟ ಭಾಷೆ ಜಗತ್ತಿನಲ್ಲಿಲ್ಲ ಎಂದು ಹೇಳುವ ಮೂಲಕ ಇಂಗ್ಲೀಷ್ ಭಾಷಾ ವ್ಯಾಮೋಹದ ಬಗ್ಗೆ ಮಾತನಾಡಿದ್ದರು.

 

click me!