ಎಳನೀರು ಬೇಕಿತ್ತೆ... ತೆಂಗಿನ ಮರವೇರಿದ ಚಿರತೆ viral video

By Anusha KbFirst Published Sep 19, 2022, 12:55 PM IST
Highlights

ಚಿರತೆಯೊಂದು ತೆಂಗಿನ ಮರವೇರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಚಿರತೆಗಳು ಮರವೇರುವುದನ್ನು ನೋಡಿದ್ದೇವೆ. ಆದರೆ ತೆಂಗಿನ ಮರವೇರುವುದನ್ನು ಎಲ್ಲಾದರೂ ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ವಿಡಿಯೋ.

ಮಹಾರಾಷ್ಟ್ರ: ಚಿರತೆಯೊಂದು ತೆಂಗಿನ ಮರವೇರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಚಿರತೆಗಳು ಮರವೇರುವುದನ್ನು ನೋಡಿದ್ದೇವೆ. ಆದರೆ ತೆಂಗಿನ ಮರವೇರುವುದನ್ನು ಎಲ್ಲಾದರೂ ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿದೆ ವಿಡಿಯೋ. ಭಾರತೀಯ ಅರಣ್ಯ ಸೇವೆ ಅಧಿಕಾರಿ(IPS) ಪರ್ವಿನ್ ಕಸ್ವಾನ್ (Parveen Kaswaan) ಅವರು ಚಿರತೆಯೊಂದು ಮರದಿಂದ ನಿಧಾನಕ್ಕೆ ಇಳಿಯುತ್ತಿರುವ ಹಾಗೂ ಮತ್ತೊಂದು ಚಿರತೆ ಬರುತ್ತಿದ್ದಂತೆ ಒಂದನೊಂದು ಬೆನ್ನಟ್ಟಿಕೊಂಡು ಎರಡು ಚಿರತೆಗಳು ಬಿರಬಿರನೇ ಮರವೇರುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. 67 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಈ ಚಿರತೆಗಳ ತಾಕತ್ತು ಹಾಗೂ ಚುರುಕುತನವನ್ನು ನೋಡಿ, ಇದೇ ಕಾರಣಕ್ಕೆ ಭಾರತದಲ್ಲಿ ಚಿರತೆಗಳು ವ್ಯಾಪಕವಾಗಿವೆ ವಾಟ್ಸಾಪ್‌ನಲ್ಲಿ ಬಂದಿರುವ ವಿಡಿಯೋ ಮಹಾರಾಷ್ಟ್ರದ ಯಾವುದು ಪ್ರದೇಶದಲ್ಲಿ ಎಂದು ಅವರು ಈ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಮತ್ತೊಂದು ಟ್ವಿಟ್‌ನಲ್ಲಿ ಅಧಿಕಾರಿ, ಚಿರತೆಗಳು ಬಹಳ ಚಾಣಾಕ್ಷ ಹಾಗೂ ಚುರುಕು ಪ್ರಾಣಿಗಳಾಗಿದ್ದು ಯಾವ ಪ್ರದೇಶದಲ್ಲಿ ಬೇಕಾದರೂ ವಾಸ ಮಾಡಬಲ್ಲವು. ಕಲ್ಲಿನಿಂದ ಕೂಡಿದ ಒಣ ಪ್ರದೇಶವಾದ ರಾಜಸ್ತಾನದಿಂದ (Rajasthan) ಬೆಟ್ಟ ಪ್ರದೇಶಗಳಿಂದ ಹಿಡಿದು, ಈಶಾನ್ಯದ (northeast) ಎತ್ತರದ ಕಾಡುಗಳವರೆಗೆ ಎಲ್ಲಾ ಪ್ರದೇಶಗಳಲ್ಲಿ ಚಿರತೆಗಳು ವಾಸ ಮಾಡುತ್ತವೆ. ಬಾಂಬೆ, ಗುರುಗ್ರಾಮದ ಜೊತೆಗೆ ಹಿಮಾಲಯದ (Himalaya) ಜನ ವಾಸ ಮಾಡದ ಪ್ರದೇಶದಲ್ಲಿಯೂ ಚಿರತೆಗಳು ವಾಸ ಮಾಡಬಲ್ಲವು. ಅಲ್ಲದೇ ಚಿರತೆಗಳ ಆಹಾರ ವ್ಯಾಪ್ತಿ ಕೂಡ ವಿಸ್ತಾರವಾಗಿದ್ದು, ಅವುಗಳು ಬಹಳಷ್ಟು ಬಲಿಷ್ಠ ಹಾಗೂ ಚುರುಕಾಗಿವೆ. ಇವುಗಳು ಎಲ್ಲೆಡೆಗೂ ಹೆಚ್ಚು ಹೊಂದಿಕೊಳ್ಳುತ್ತವೆ ಎಂದು ಅವರು ಬರೆದುಕೊಂಡಿದ್ದಾರೆ.  

Look at the agility of these cats. Somewhere from MH via WhatsApp. That is why leopards are omnipresent in India. pic.twitter.com/LruY3Hfnom

— Parveen Kaswan, IFS (@ParveenKaswan)

ಅವುಗಳು ಹೆಚ್ಚಾಗಿ ಚಹಾ ತೋಟಗಳಲ್ಲಿ ((tea gardens) ಹಾಗೂ ಕಬ್ಬಿನ ಗದ್ದೆಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ. ಅದರಲ್ಲೂ ಟೀ ಗಾರ್ಡನ್‌ಗಳು  ಅವರ ಇಷ್ಟದ ಸ್ಥಳ. ಸುಲಭವಾಗಿ ಆಹಾರ ಪಡೆಯಬಹುದು, ನೆರಳಿರುತ್ತವೆ. ಜೊತೆಗೆ ಮರಿಗಳನ್ನು ಸುಲಭವಾಗಿ ಸಾಕಬಹುದು ಎಂಬುದು ಇದಕ್ಕೆ ಕಾರಣ ನಿಜವಾಗಿಯೂ ಇವು ಭವ್ಯವಾದ ಪ್ರಾಣಿಗಳು ಎಂದು ಅವರು ತಮ್ಮ ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.  

ಭಾರತಕ್ಕೆ ಬಂದಿಳಿದ ಆಫ್ರಿಕನ್ ಚೀತಾಗೆ ಯಾಕಿಷ್ಟು ಮಹತ್ವ: ವನ್ಯಜೀವಿ ತಜ್ಞರ ಮಾತು ಕೇಳಿ
ಇತ್ತೀಚೆಗೆ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹುಟ್ಟುಹಬ್ಬದಂದು ಚಿರತೆಯ ಗುಂಪಿಗೆ ಸೇರುವ ಚೀತಾಗಳನ್ನು ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಕರೆತರಲಾಗಿತ್ತು. 1947ರಲ್ಲಿ ಈ ಆಫ್ರಿಕನ್ ಚೀತಾಗಳು ಭಾರತದಲ್ಲಿ ಕೊನೆಯ ಭಾರಿ ಕಾಣಿಸಿಕೊಂಡಿದ್ದವು. ಅಳಿದು ಹೋದ/ಅಳಿವಿನ ಅಂಚಿನ ಪ್ರಾಣಿ ಪುನರುತ್ಥಾನ ಯೋಜನೆಯ ಅಂಗವಾಗಿ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ವಿಶೇಷ ಕಾರ್ಗೋ ವಿಮಾನದಲ್ಲಿ ಭಾರತಕ್ಕೆ ಈ ಚೀತಾಗಳನ್ನು ಕರೆತರಲಾಗಿತ್ತು. 

ದಶಕಗಳ ಹಿಂದೆ ಭಾರತದಲ್ಲಿ ಸಾವಿರಾರು ಚೀತಾಗಳು (Cheeta) ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸಿಕೊಂಡಿದ್ದವು. ಆದರೆ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಅವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯಿತು ಅತಿಯಾದ ಬೇಟೆ, ಅವುಗಳ ನೈಸರ್ಗಿಕ ಆವಾಸಸ್ಥಾನದ ನಾಶದಿಂದ ದೇಶದಲ್ಲಿ ಚೀತಾ ಸಂತತಿ ಅಳಿಯಿತು. ಮಧ್ಯಪ್ರದೇಶದ ಮಹಾರಾಜ ರಾಮಾನುಜ ಪ್ರತಾಪ್‌ ಸಿಂಗ್‌ ದೇವ್‌ (Maharaja Ramanuja Pratap Singh Dev) ಅವರು 1947ರಲ್ಲಿ ಕೊನೆಯ ಚೀತಾವನ್ನು ಕೊಂದಿದ್ದರು. 1952ರಲ್ಲಿ ಭಾರತದಿಂದ ಚೀತಾ ನಾಮಾವಶೇಷವಾಗಿದೆ ಎಂದು ಘೋಷಿಸಲಾಗಿತ್ತು.

ಮರವೇರಿ ಮರಿಕೋತಿಯ ಬೇಟೆಯಾಡಿದ ಚೀತಾ: ವಿಡಿಯೋ ವೈರಲ್‌

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಭೇದ ಎನಿಸಿದ ಏಷಿಯಾಟಿಕ್‌ ಸಿಂಹಗಳಿದ್ದು(Asiatic lions), ಅವುಗಳ ವಾಸಕ್ಕೆ ಅನುಕೂಲಕರ ಪರಿಸರವಿದೆ. ಇದು ಚೀತಾ ವಾಸಕ್ಕೂ ಯೋಗ್ಯವೆನಿಸಿದ ಕಾರಣ ಇಲ್ಲಿಯೇ ಚೀತಾಗಳನ್ನು ಬಿಡಲಾಗಿದೆ. ಚೀತಾಗಳ ಬೇಟೆಗಾಗಿ ಚಿಂಕಾರ, ಜಿಂಕೆ ಹಾಗೂ ಕೃಷ್ಣಮೃಗಗಳು ಇಲ್ಲಿ ವ್ಯಾಪಕ ಸಂಖ್ಯೆಯಲ್ಲಿ ಇವೆ.
 

click me!