Accused got bail: ಮೋದಿ ಹಾಗೂ ಯೋಗಿಗೆ ಕೊಲೆ ಬೆದರಿಕೆಯೊಡ್ಡಿದ ಆರೋಪಿಗೆ ಜಾಮೀನು

By Suvarna NewsFirst Published Dec 2, 2021, 1:09 PM IST
Highlights

ಇತ್ತೀಚೆಗೆ ರಾಜಕೀಯ ನಾಯಕರಿಗೆ, ಚಿತ್ರರಂಗದ ತಾರೆಯರಿಗೆ ಇತ್ಯಾದಿ ಗಣ್ಯ ವ್ಯಕ್ತಿಗಳಿಗೆ ಜೀವ ಬೆದರಿಕೆ ಬರುವುದು ಸಾಮಾನ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿಗೆ ಈಗ ಕೋರ್ಟ್‌ ಜಾಮೀನು ನೀಡಿದೆ.

ಅಲಹಾಬಾದ್‌(ಡಿ.2): ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿದೆ. ಅಲಾಹಾಬಾದ್ ಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಂಕಜ್‌ ಭಟಿಯಾ(Pankaj Bhatia) ಅವರು ಆರೋಪಿ ಸಲ್ಮಾನ್‌(Salman)ಗೆ ಜಾಮೀನು ನೀಡಿದ್ದಾರೆ. ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದ್ದೂ, ಆರೋಪಿಯೂ 2021ರ ಆಗಸ್ಟ್‌ 31ರಿಂದ ಜೈಲಿನಲ್ಲಿದ್ದಾನೆ. 

ಎಫ್‌ಐಆರ್‌ನಲ್ಲಿ ಪ್ರಾಥಮಿಕವಾಗಿ ದಾಖಲಾದ ಈ ವಿಚಾರವನ್ನು ಗಮನದಲ್ಲಿರಿಸಿಕೊಂಡು, ಐಪಿಸಿ ಸೆಕ್ಷನ್‌ 506 ಹಾಗೂ ಸೆಕ್ಷನ್‌507ರ ಅಡಿ ಆರೋಪಿಯೂ ಅಪರಾಧ ಮಾಡಿದ್ದಾನೆ ಎಂದು ಹೇಳಬಹುದು. ಆದರೆ ಇವೆರಡು ಜಾಮೀನು ಸಿಗಬಹುದಾದಂತಹ ಸೆಕ್ಷನ್‌ಗಳಾಗಿದೆ. ಅಲ್ಲದೇ ಆರೋಪಿಯೂ 31ಆಗಸ್ಟ್‌ 2021 ರಿಂದಲೂ ಜೈಲಿನಲ್ಲಿದ್ದಾನೆ. ಅಲ್ಲದೇ ಜಾಮೀನು ನೀಡಿದರೆ ಆರೋಪಿಯೂ ತನಿಖೆಯ ಮೇಲೆ ಪರಿಣಾಮ ಬೀರುತ್ತಾನೆ ಎಂದು ಪ್ರತಿಪಾದಿಸಲು ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಆತನಿಗೆ ಜಾಮೀನು ನೀಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

Death Threat to Kangana: ಸೋನಿಯಾ ಗಾಂಧಿ ನೆರವು ಕೇಳಿದ ಕ್ವೀನ್

ಪ್ರಥಮ ಮಾಹಿತಿ ವರದಿ (FIR) ಪ್ರಕಾರ ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯ ತುರ್ತು ಸೇವೆಯ ಸಂಖ್ಯೆ ನಂ.112ಕ್ಕೆ ಆರೋಪಿಯ ಮೊಬೈಲ್‌ ಫೋನ್‌ನಿಂದ ಬೆದರಿಕೆ ಕರೆ ಬಂದಿದೆ.  ಕರೆ ಮಾಡಿದ ಈತ ಪ್ರಧಾನಿ ನರೇಂದ್ರ ಮೋದಿ(Prime Minister) ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ(Chief Minister) ಯೋಗಿ ಆದಿತ್ಯನಾಥ್‌ ಅವರ ಸಾರ್ವಜನಿಕ ಹೇಳಿಕೆಗಳನ್ನು ಗಮನಿಸಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ಇವರಿಬ್ಬರನ್ನು ಕೊಲೆ ಮಾಡಿದ ಬಳಿಕ ತಾನು ಜೈಲಿಗೆ ಹೋಗುವುದಾಗಿ ಆರೋಪಿ ಹೇಳಿದ್ದ.  ಕರೆಯ ಬಳಿಕ ತನಿಖೆ ಆರಂಭಿಸಿದ ಉತ್ತರ ಪ್ರದೇಶ ಪೊಲೀಸರು ಮೊಬೈಲ್‌ ಲೊಕೇಶನ್‌ ಆಧರಿಸಿ ಆರೋಪಿಯನ್ನು ಬಂಧಿಸಿದ್ದರು. ಅಲ್ಲದೇ ಆತನಿಂದ ಕರೆ ಮಾಡಲು ಬಳಸಿದ್ದ ಮೊಬೈಲ್‌ ಫೋನ್‌ನನ್ನು ವಶಕ್ಕೆ ಪಡೆದಿದ್ದರು.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 506(ಕ್ರಿಮಿನಲ್ ಬೆದರಿಕೆ) 507( ಅನಾಮಧೇಯ ಸಂವಹನದಿಂದ ಕ್ರಿಮಿನಲ್‌ ಬೆದರಿಕೆ) ಹಾಗೂ 505(1)(b)( ಸಾರ್ವಜನಿಕ ಹಿತಕ್ಕೆ ಭಂಗ ತರುವ ಹೇಳಿಕೆಗಳು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಎಫ್‌ಐಆರ್‌ನಲ್ಲಿ ಸೆಕ್ಷನ್ 506 ಹಾಗೂ ಸೆಕ್ಷನ್‌ 507ರಡಿ ಪ್ರಕರಣ ದಾಖಲಾಗಿದ್ದರು, ಇವು ಜಾಮೀನು ಸಿಗುವಂತಹ ಪ್ರಕರಣಗಳಾಗಿವೆ ಎಂದು ಆರೋಪಿಯ ವಕೀಲರು ಕೋರ್ಟ್‌ಗೆ ಹೇಳಿದರು. ಅದಾಗ್ಯೂ ಸರ್ಕಾರದ ಹೆಚ್ಚುವರಿ ವಕೀಲರು, ಆರೋಪಿಯ ಈ ಬೆದರಿಕೆ ಸಮಾಜದ ಹಿತಕ್ಕೆ ಮಾರಕವಾಗಿದೆ. ಆರೋಪಿಯೂ ದೇಶದ ಚುನಾಯಿತ ಪ್ರತಿನಿಧಿಗಳಿಗೆ ಬೆದರಿಕೆಯೊಡ್ಡಿದ್ದಾನೆ.  ಹೀಗಾಗಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ನ್ಯಾಯಾಧೀಶರು ಸೆಕ್ಷನ್‌ 506 ಹಾಗೂ 507 ರಡಿ ಬರುವ ಪ್ರಕರಣಗಳು ಜಾಮೀನು ನೀಡಬಹುದಾದ ಪ್ರಕರಣಗಳು ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದರು.  ಬಳಿಕ ಆರೋಪಿಗೆ ಜಾಮೀನಿ ನೀಡಲಾಯಿತು.


ವರುಣ್‌ ಧವನ್‌ ಗರ್ಲ್‌ಫ್ರೆಂಡ್‌ ನತಾಶರನ್ನು ಕೊಲ್ಲುವುದಾಗಿ ಬೆದರಿಸಿದ ಲೇಡಿ ಫ್ಯಾನ್‌!

ಇತ್ತೀಚೆಗೆ ಬಾಲಿವುಡ್‌  ನಟಿ ಕಂಗನಾ ತನಗೆ ಜೀವ ಬೆದರಿಕೆ ಇದೆ ರಕ್ಷಣೆ ನೀಡಿ ಎಂದು ಪೊಲೀಸರ ಮೊರೆ ಹೋಗಿದ್ದರು. ಜೊತೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೂ ನೆರವು ನೀಡುವಂತೆ ಮನವಿ ಮಾಡಿದ್ದರು. ಕಂಗನಾ ರಣಾವತ್ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸೋ ನಟಿಗೆ ಕೊಲೆ ಬೆದರಿಕೆ ಬಂದಿತ್ತು.  ಬಟಿಂಡಾ ನಿವಾಸಿಯೊಬ್ಬರ ವಿರುದ್ಧ ಕಂಗನಾ ದೂರು  ನೀಡಿದ್ದರು. ಇತ್ತೀಚೆಗೆ 26/11 ದಾಳಿಯ ಬಗ್ಗೆ ಮಾತನಾಡಿದ ನಂತರ ನನಗೆ ಈ ಬೆದರಿಕೆಗಳು ಬಂದಿವೆ  ಎಂದು ಅವರು ಹೇಳಿದ್ದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅವರು ಸೋನಿಯಾ ಗಾಂಧಿ(Sonia Gandhi) ಅವರಿಗೆ ಮನವಿ ಮಾಡಿದ್ದರು. 

click me!