ರಸಗೊಬ್ಬರದಲ್ಲಿ ಆತ್ಮನಿರ್ಭರ ಭಾರತ, ನ.12ಕ್ಕೆ ಪ್ರಧಾನಿ ಯೂರಿಯಾ ಉತ್ಪಾದನಾ ಘಟಕ ಉದ್ಘಾಟನೆ!

Published : Nov 09, 2022, 06:56 PM IST
ರಸಗೊಬ್ಬರದಲ್ಲಿ ಆತ್ಮನಿರ್ಭರ ಭಾರತ, ನ.12ಕ್ಕೆ ಪ್ರಧಾನಿ ಯೂರಿಯಾ ಉತ್ಪಾದನಾ ಘಟಕ ಉದ್ಘಾಟನೆ!

ಸಾರಾಂಶ

ರಸಗೊಬ್ಬರ ಉತ್ಪಾದನೆಯಲ್ಲಿ ಭಾರತವನ್ನು ಆತ್ಮನಿರ್ಭರ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ನವೆಂಬರ್ 12 ರಂದು ಮೋದಿ ಯೂರಿಯಾ ಉತ್ಪಾದನಾ ಘಟಕ ಉದ್ಘಾಟನೆ ಮಾಡಲಿದ್ದಾರೆ.  

ನವದೆಹಲಿ(ನ.09):  ಭಾರತ ಎಲ್ಲಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಬೇಕು. ಇತರ ದೇಶಗಳ ಅವಲಂಬನೆಯಿಂದ ಹೊರಬರಬೇಕು ಅನ್ನೋ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಬರ್ ಭಾರತ್ ಯೋಜನೆ ಜಾರಿಗೆ ತಂದಿದ್ದಾರೆ. ಇದರ ಅಡಿಯಲ್ಲಿ ಭಾರತ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದೆ. ಇದೀಗ ರಸಗೊಬ್ಬರ ಕ್ಷೇತ್ರದಲ್ಲೂ ಭಾರತ ಆತ್ಮನಿರ್ಭರ್ ಭಾರತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್ 12 ರಂದು ತೆಲಂಗಾಣದ ರಾಮಗುಂಡನಲ್ಲಿನ ನೂತನ ರಸಗೊಬ್ಬರ ಉತ್ಪಾದಕ ಘಟಕ ಉದ್ಘಾಟಿಸಲಿದ್ದಾರೆ. ರಾಮಗುಂಡಂ ರಸಗೊಬ್ಬರ ಘಟಕ ಯೋಜನೆಗೆ ಪ್ರಧಾನಿ ಮೋದಿ, 2016ರ ಆಗಸ್ಟ್ 7 ರಂದು ಶಂಕುಸ್ಥಾಪನೆ ಮಾಡಿದ್ದರು. ಇದೀಗ ಭಾರತ ಸ್ವಾವಲಂಬಿಯಾಗಿ ಯೂರಿಯೂ ಉತ್ಪಾದನೆ ಮಾಡಲಾಗಿದೆ. ಇದರಿಂದ ವಿದೇಶಗಳಿಂದ ಆಮದು ಮಾಡುವ ಪರಿಪಾಠ ತಪ್ಪಲಿದೆ.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪ್ರತಿ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರತೆ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. 2014ರ ಬಳಿಕ ಮೋದಿ ಮುಚ್ಚಿ ಹೋಗಿದ್ದ ಹಲವು ರಸಗೊಬ್ಬರ ಘಟಕಗಳನ್ನು ಪುನರುಜ್ಜೀವನ ಗೊಳಿಸುತ್ತಿದ್ದಾರೆ. ಈ ಮೂಲಕ ಯೂರಿಯೂ ಸೇರಿದಂತೆ ಕೃಷಿ ರಸಗೊಬ್ಬರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಬೇಕೆಂಬ ಉದ್ದೇಶ ಇಟ್ಟಿದ್ದರು. ಈ ಪ್ರಯತ್ನಕ್ಕೆ ಇದೀಗ ಮತ್ತೊಂದು ಯಶಸ್ಸು ಸಿಕ್ಕಿದೆ. 2021ರಲ್ಲಿ ಪ್ರಧಾನಿ ಮೋದಿ ಉತ್ತರ ಪ್ರದೇಶದ ಗೋರಖ್‌ಪುರದ ರಸಗೊಬ್ಬರ ಸ್ಥಾವರನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ಬರೋಬ್ಬರಿ 30 ವರ್ಷಗಳ ಕಾಲ ಮುಚ್ಚಿದ್ದ ಈ ಘಟಕಕ್ಕೆ ಮರು ಜೀವ ನೀಡಿದ್ದರು. ಆ ಯೋಜನೆಗೆ 2016ರ ಜುಲೈ ತಿಂಗಳಲ್ಲಿ ಮೋದಿ ಅಡಿಪಾಯ ಹಾಕಿದ್ದರು. 8,600 ಕೋಟಿ ರೂಪಾಯಿ ವೆಚ್ಚದಲ್ಲಿ ಗೋರಖಪುರ ರಸಗೊಬ್ಬರ ಕಾರ್ಖಾನೆಯನ್ನು ಪುನರ್ ನಿರ್ಮಾಣ ಮಾಡಿದ್ದರು.  

ರಸಗೊಬ್ಬರಕ್ಕೆ ಕೇಂದ್ರದ ಬಂಪರ್‌ ಸಬ್ಸಿಡಿ, ಬೆಲೆ ಏರಿಕೆ ಭೀತಿಯಿಂದ ರೈತರು ಪಾರು!

ಹಿಂದೂಸ್ಥಾನ್ ಉರ್ವಾರಕ್ ಹಾಗೂ ರಾಸಾಯನ್ ಲಿಮಿಟೆಡ್ ಬರೌನಿ ಘಟಕ ಕಳೆದ ತಿಂಗಳು ಉತ್ಪಾದನೆ ಆರಂಭಿಸಿದೆ. ಇದು ಯೂರಿಯಾ ಉತ್ಪಾದನಾ ಘಟಕವಾಗಿದೆ. 8,300 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಈ ಘಟಕ ಕಾರ್ಯಾರಂಭಿಸಲಾಗಿದೆ. ಈ ಘಟಕ 12.7 LMTPA ಯೂರಿಯಾ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.  2018ರಲ್ಲಿ ಪ್ರಧಾನಿ ನರೇಂದ್ರ ಮೋದಿ HURLನ ಸಿಂದ್ರಿ ರಸಗೊಬ್ಬರ ಘಟಕ ಯೋಜನೆಗೆ ಅಡಿಪಾಯ ಹಾಕಿದ್ದಾರೆ. ಈ ಯೋಜನೆ ಕೆಲಸ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಘಟಕವೂ ಕಾರ್ಯಾರಂಭಿಸಲಿದೆ. 2018ರ ಸೆಪ್ಟೆಂಬರ್ ತಿಂಗಳಲ್ಲಿ ತಾಲ್ಚರ್ ರಸಗೊಬ್ಬರ ಯೋಜನೆಗೆ ಅಡಿಪಾಯ ಹಾಕಿದ್ದಾರೆ. ಈ ಘಟಕ 2024ರಲ್ಲಿ ಕಾರ್ಯಾರಂಭ ಮಾಡಲಿದೆ. 

Fertilizer plant: 3 ದಶಕಗಳ ಬಳಿಕ ಗೋರಖ್‌ಪುರ ರಸಗೊಬ್ಬರ ಸ್ಥಾವರ ರೀ ಓಪನ್, ಯೋಗಿ ತಾಯ್ನಾಡಿಗೆ ಉಡುಗೊರೆ

ನವೆಂಬರ್ 12 ರಂದು ಉದ್ಘಾಟಿಸಲಿರುವ ರಾಮಗುಂಡ ಘಟಕ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಗೋರಖಪುರ ಘಟಕ, ಶೀಘ್ರದಲ್ಲೇ ಕಾರ್ಯಾರಂಭಿಸಲಿರುವ ಸಿಂದ್ರಿ, ಬರೌನಿ ಹಾಗೂ ತಾಲ್ಚೆರ್ ಘಟಕಗಳು ಯೂರಿಯೂ ಉತ್ಪಾದನೆ ಆರಂಭಿಸಿದರೆ, ವಾರ್ಷಿಕವಾಗಿ 63.5 LMT ಯೂರಿಯಾವನ್ನು ಭಾರತ ಉತ್ಪಾದಿಸಲಿದೆ. ಇದರಿಂದ ವಿದೇಶಗಳಿಂದ ಯೂರಿಯಾ ಆಮದು ಮಾಡಿಕೊಳ್ಳುವ ಅವಶ್ಯತೆ ಇರುವುದಿಲ್ಲ. ಈ ಮೂಲಕ ಯೂರಿಯೂ ಉತ್ಪಾದನೆ ಹಾಗೂ ಬಳಕೆಯಲ್ಲಿ ಭಾರತ ಸಂಪೂರ್ಣವಾಗಿ ಸ್ವಾಲಂಬಿಯಾಗಲಿದೆ. 

ರೈತರಿಗೆ ಸೂಕ್ತ ಕಾಲದಲ್ಲಿ ರಸಗೊಬ್ಬರ ಪೂರೈಕೆ ಮಾಡವು ನಿಟ್ಟಿನಲ್ಲಿ ಪ್ರಧಾನಿ ಮೋದಿ ಭಾರತದಲ್ಲೇ ರಸಗೊಬ್ಬರ ಉತ್ಪಾದನೆಗೆ ಯೋಜನೆ ರೂಪಿಸಿ ಕಾರ್ಯರೂಪಗೊಳಿಸಿದ್ದಾರೆ. ಮಹತ್ವಾಂಕ್ಷಿ ಯೋಜನೆಗಳಿಂದ ಭಾರತ ಇದೀಗ ಒಂದೊಂದೇ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುತ್ತಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ