ಆರೋಗ್ಯ ಸೇತು ಆ್ಯಪ್‌ನಿಂದ 1.4 ಲಕ್ಷ ಜನರಿಗೆ ಅಲರ್ಟ್‌

By Suvarna News  |  First Published May 12, 2020, 10:33 AM IST

ಕೊರೋನಾ ವೈರಸ್‌ ಮೇಲೆ ನಿಗಾ ಇಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್‌ ತನ್ನ 1.4 ಲಕ್ಷ ಮಂದಿ ಬಳಕೆದಾರರಿಗೆ ಸಂಭಾವ್ಯ ಸೋಂಕಿನ ಕುರಿತು ಮಾಹಿತಿ ನೀಡಿದೆ. 


ನವದೆಹಲಿ (ಮೇ. 12):  ಕೊರೋನಾ ವೈರಸ್‌ ಮೇಲೆ ನಿಗಾ ಇಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್‌ ತನ್ನ 1.4 ಲಕ್ಷ ಮಂದಿ ಬಳಕೆದಾರರಿಗೆ ಸಂಭಾವ್ಯ ಸೋಂಕಿನ ಕುರಿತು ಮಾಹಿತಿ ನೀಡಿದೆ.

ಸೋಂಕಿತ ವ್ಯಕ್ತಿಗಳ ಸನಿಹಕ್ಕೆ ಆ್ಯಪ್‌ ಬಳಕೆದಾರರು ಬಂದಾಗ ಬ್ಲೂಟೂತ್‌ ಸಹಾಯದಿಂದ ಬಳಕೆದಾರರಿಗೆ ಕೊರೋನಾ ಅಲರ್ಟ್‌ ನೀಡಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

undefined

ಮತ್ತೆ ನಗರಕ್ಕೆ ವಾಪಸ್‌ ಆಗುತ್ತಿರುವವರಿಗೆ ಪಿಜಿ, ಹಾಸ್ಟೆಲ್‌ಗೆ ನೋ ಎಂಟ್ರಿ!

ಇದೇ ವೇಳೆ ಈ ಆ್ಯಪ್‌ ಅನ್ನು ಈವರೆಗೆ 9.8 ಕೋಟಿ ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಈ ಸಂಖ್ಯೆ ಸದ್ಯದಲ್ಲೇ 10 ಕೋಟಿ ಗಡಿ ದಾಟುವ ಸಾಧ್ಯತೆ ಇದೆ. ಈ ಆ್ಯಪ್‌ನಿಂದಾಗಿ 697 ಸಂಭಾವ್ಯ ಹಾಟ್‌ಸ್ಪಾಟ್‌ಗಳ ಮಾಹಿತಿ ಸೃಷ್ಟಿಸಲು ಸಹಾಯವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದೇ ವೇಳೆ, ಲಾಕ್‌ಡೌನ್‌ ತೆರವಾದ ಬಳಿಕ ವಿಮಾನ ಪ್ರಯಾಣಿಕರಿಗೆ ಆರೋಗ್ಯ ಸೇತು ಆ್ಯಪ್‌ ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

click me!