ಮನೆಗೆ ಬಂದ ಜ್ಯೂನಿಯರ್ ಕೇಜ್ರಿ: ಕಂದನ ನೋಡಿ ಅರವಿಂದ್ ಗಾನ್ ಕ್ರೇಜಿ!

By Suvarna NewsFirst Published Feb 11, 2020, 9:41 AM IST
Highlights

ದೆಹಲಿ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ| ಆಪ್ 57 ಕ್ಷೇತ್ರಗಳಲ್ಲಿ, ಬಿಜೆಪಿ 13 ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಮುನ್ನಡೆ| ಕೇಜ್ರಿ ಮನೆಗೆ ಬಂದ ಜ್ಯೂನಿಯರ್ ಕೇಜ್ರಿ| ಅರವಿಂದ್ ಕೇಜ್ರಿವಾಲ್ ವೇಷ ತೊಟ್ಟು ಗಮನ ಸೆಳೆದ ಪುಟ್ಟ ಕಂದ| ಮಗುವನ್ನು ಮುದ್ದಾಡಿದ ದೆಹಲಿ ಸಿಎಂ ಕೇಜ್ರಿವಾಲ್| ಅರವಿಂದ್ ಕೇಜ್ರಿವಾಲ್’ಗೆ ಶುಭ ಕೋರಿದ ಮಕ್ಕಳ ಗುಂಪು| 

ನವದೆಹಲಿ(ಫೆ.11): ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕ್ರಿಯೆ ಆರಂಭಗೊಂಡಿದ್ದು, ಮತದಾನ ಎಣಿಕೆ ಕಾರ್ಯ ಆರಂಭವಾಗಿದೆ.

ಈಗಾಗಲೇ ಆಡಳಿತಾರೂಢ ಆಪ್ 57 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 13 ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Delhi Elections 2020: Counting of votes begins

Read Story | https://t.co/uxOMNlaSga pic.twitter.com/flfqzXkGXq

— ANI Digital (@ani_digital)

ಇನ್ನು ಮತ ಎಣಿಕೆ ಕಾರ್ಯ ಆರಂಭಕ್ಕೂ ಮೊದಲು ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ಪುಟ್ಟ ಮಕ್ಕಳ ಗುಂಪೊಂದು ಭೇಟಿ ನೀಡಿದ್ದು, ಪುಟ್ಟ ಕಂದನೋರ್ವ ಅರವಿಂದ್ ಕೇಜ್ರಿವಾಲ್ ವೇಷ ತೊಟ್ಟು ಗಮನ ಸೆಳೆದಿದ್ದಾನೆ.

ಬಿಜೆಪಿ 55 ಸೀಟು ಗೆದ್ರೆ ಅಚ್ಚರಿಪಡಬೇಡಿ: ಮನೋಜ್ ತಿವಾರಿ!

ಕೇಜ್ರಿವಾಲ್ ಮನೆಗೆ ಬಂದ ಮಕ್ಕಳಲ್ಲಿ ತಮ್ಮಂತೆ ವೇಷ ತೊಟ್ಟ ಮಗುವನ್ನು ಕಂಡು ಹರ್ಷಗೊಂಡ ಅರವಿಂದ್ ಕೇಜ್ರವಾಲ್, ಮಗುವನ್ನು ಎತ್ತಿ ಮುದ್ದಾಡಿದರು.

: An Aam Aadmi Party (AAP) supporter reaches Delhi Chief Minister Arvind Kejriwal's residence with his children. Counting for all 70 assembly seats in Delhi to begin at 8 am. pic.twitter.com/jFG9M6VZ4W

— ANI (@ANI)

ವಿಧಾನಸಭೆ ಚುನಾವಣೆಯಲ್ಲಿ ಆಪ್ ಮುನ್ನಡೆ ಸಾಧಿಸುತ್ತಿರುವುದನ್ನು ಸಂಭ್ರಮಿಸಿದ ಈ ಮಕ್ಕಳು, ಅರವಿಂದ್ ಕೇಜ್ರಿವಾಲ್ ಅವರಿಗೆ ಧನ್ಯವಾದ ಹೇಳಿ ಮನೆಯತ್ತ ಹೆಜ್ಜೆ ಹಾಕಿದರು.

click me!