ಪಟಿಯಾಲ(ಮೇ.23): ಪಂಜಾಬ್‌ನಲ್ಲಿ ಅಧಿಕಾರ ಹಿಡಿದ ಆಮ್ ಆದ್ಮಿ ಪಾರ್ಟಿಗೆ ಇದೀಗ ಹಿನ್ನಡೆಯಾಗಿದೆ. ಹಲ್ಲೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ, ಪಟಿಯಾಲ ಗ್ರಾಮಾಂತರದ ಕ್ಷೇತ್ರದ ಶಾಸಕ ಡಾ ಬಲ್ಬೀರ್ ಸಿಂಗ್‌ಗೆ ವಿರುದ್ಧ ತೀರ್ಪು ಪ್ರಕಟಗೊಂಡಿದೆ. ಕ್ರಿಮಿನಲ್ ಪ್ರಕರಣದಲ್ಲಿ ಬಲ್ಬೀರ್ ದೋಷಿ ಎಂದು ರೋಪರ್ ನ್ಯಾಯಾಲಯ ಹೇಳಿದೆ. ಇಷ್ಟೇ ಅಲ್ಲ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಲ್ಬೀರ್ ಸಿಂಗ್ ಪತ್ನಿ ಹಾಗೂ ಪುತ್ರನ ಮೇಲಿನ ಆರೋಪವೂ ಸಾಬೀತಾಗಿದೆ. ಹೀಗಾಗಿ ಶಾಸಕ ಬಲ್ಬೀರ್ ಜೊತೆಗೆ ಪತ್ನಿ ಹಾಗೂ ಪುತ್ರನಿಗೂ ಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. 2011ರ ಪ್ರಕರಣ ಇದಾಗಿದ್ದು, ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟಿಸಿದೆ.
ಹಾಟ್ ನಟಿ Kangana Sharma ಆಮ್ ಆದ್ಮಿ ಪಕ್ಷಕ್ಕೆ; ಟ್ರೋಲ್‌ಗೆ ಗುರಿ!
ಜೈಲು ಶಿಕ್ಷೆ ಪ್ರಕಟಗೊಂಡ ಬೆನ್ನಲ್ಲೇ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಮರುಕ್ಷಣದಲ್ಲೇ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬಲ್ಬೀರ್ ಸಿಂಗ್ ಪತ್ನಿ ಸಹದೋರಿ ರೂಪಿಂದರ್‌ಜಿತ್ ಕೌರ್ ಹಾಗೂ ಆಕೆಯ ಪತಿ ಮೇವಾ ಸಿಂಗ್ 2011ರಲ್ಲಿ ದೂರು ದಾಖಲಿಸಿದ್ದರು. ಚಮ್ಕೌರ್ ಸಾಹೀಬ್ ಬಳಿ ಇರುವ ಹೊಲಗಳಿಗೆ ನೀರು ಹಾಕುತ್ತಿದ್ದ ವೇಳೆ ಬಲ್ಬೀರ್ ಸಿಂಗ್ ಹಾಗೂ ಇತರ ಮೂವರು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಈ ಹೊಲ ತಮ್ಮದು ಎಂದು ನಕಲಿ ದಾಖಲಿ ಸೃಷ್ಟಿಸಿದ್ದಾರೆ. ಹೀಗಾಗಿ ಬಲ್ಬೀರ್ ಸಿಂಗ್ ಅವರಿಂದ ರಕ್ಷಣೆ ನೀಡಬೇಕು. ಹಾಗೂ ಬಲ್ಬೀರ್ ಸಿಂಗ್ ಅವರ ನಕಲಿ ದಾಖಲೆಯ ಸತ್ಯಾಸತ್ಯಯೆ ಬಯಲು ಮಾಡಿ ನಮ್ಮ ಜಮೀನಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ದೂರು ನೀಡಿದ್ದರು.
ಖಲಿಸ್ತಾನಕ್ಕೆ ಅರವಿಂದ್ ಕೇಜ್ರಿವಾಲ್ ಬೆಂಬಲ ಮತ್ತೊಮ್ಮೆ ಸಾಬೀತು!
ಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಸಮಾರಂಭ
ದೇವನಹಳ್ಳಿ ತಾಲೂಕು ಅಮ್ ಆದ್ಮಿ ಪಕ್ಷಕ್ಕೆ ಹೊಸಬರ ಸೇರ್ಪಡೆ ಹಾಗೂ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆ ಸಮಾರಂಭ ಇಲ್ಲಿನ ವೆಂಕಟೇಶ್ವರ ಚಿತ್ರಮಂದಿರ ಹಿಂಭಾಗದ ಕ್ರೀಡಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದ ಉದ್ಘಾಟಿಸಿದ ಆಪ್ ಪಕ್ಷದ ಜಿಲ್ಲಾ ಉಸ್ತುವಾರಿ ಬಿ. ಕೆ.ಶಿವಪ್ಪ ಮಾತನಾಡಿ, ನಮ್ಮ ಪಕ್ಷ ಜನಸಾಮಾನ್ಯರ ಪಕ್ಷವಾಗಿದ್ದು, ಹಿರಿಯರಾದ ಭೂವನಹಳ್ಳಿ ಮುನಿಕದಿರೆಪ್ಪ, ರೈತ ನಾರಾಯಣಪ್ಪ , ಶ್ರೀನಿವಾಸ್ ಹಾಗೂ ವಿಜಯಪುರ ಪತ್ರಕರ್ತ ಮುನಯ್ಯ, ಅಲ್ಲದೆ ವಿಜಯಪುರದ ಅಲ್ಪ ಸಂಖ್ಯಾತರ ಮಹಿಳಾ ಮುಖಂಡರಾದ ನಸ್ರೂನ್ ಅಲ್ಲದೆ ಇನ್ನೂ ಹಲವಾರು ಮಂದಿ ಆಪ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಅಭಿನಂದನೀಯ ಎಂದರಲ್ಲದೆ, ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಪ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಆಡಳಿತ ನಡೆಸಲಿದೆ ಎಂದರಲ್ಲದೆ ಸಾಮಾನ್ಯ ಜನರಿಗಾಗಿ ದೆಹಲಿಯಲ್ಲಿ ದೊರೆಯುವ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದರು.
ಆಪ್ ಸಂಸದನ ಮೇಲೆ ಮಸಿ ಎರಚಿ ಆಕ್ರೋಶ
ಹಾಥ್ರಸ್ ಸಾಮೂಹಿಕ ಅತ್ಯಾಚಾರದಲ್ಲಿ ಮೃತಪಟ್ಟದಲಿತ ಸಂತ್ರಸ್ತೆ ಕುಟುಂಬಸ್ಥರ ಭೇಟಿಗೆಂದು ತೆರಳಿದ್ದ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಮೇಲೆ ವ್ಯಕ್ತಿಯೊಬ್ಬ ಶಾಯಿ ಚೆಲ್ಲಿರುವ ಘಟನೆ ನಡೆದಿದೆ. ಸುದ್ದಿಗಾರರೊಂದಿಗಿ ಸಂಜಯ್ ಸಿಂಗ್ ಮಾತನಾಡುತ್ತಿದ್ದ ವೇಳೆ ಅವರ ಬಿಳಿಯ ಕುರ್ತಾದ ಮೇಲೆ ಶಾಯಿ ಚೆಲ್ಲಿದ ವ್ಯಕ್ತಿಯೊಬ್ಬ ‘ಪಾಪ್ಯುಲರ್ ಫ್ರಂಟ್ ಇಂಡಿಯಾ (ಪಿಎಫ್‌ಐ)ದ ದಲ್ಲಾಳಿ ವಾಪಸ್ ಹೋಗು’ ಎಂದು ಕೂಗಿದ್ದಾನೆ.ಈ ಪಿಎಫ್‌ಐ ಸಂಘಟನೆಯನ್ನು ಈ ಮುಂಚೆ ಉತ್ತರ ಪ್ರದೇಶ ಪೊಲೀಸರು ನಿಷೇಧಿಸಿದ್ದರು. ಘಟನೆ ಬೆನ್ನಲ್ಲೇ ಸಿಂಗ್ ಕಾರು ಹತ್ತಿ ವಾಪಸಾಗಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.