ಭ್ರಷ್ಟಾಚಾರ ಮುಚ್ಚಿಕೊಳ್ಳಲು ಆಪ್-ಕಾಂಗ್ರೆಸ್ ಏಕತೆ: ಪ್ರಧಾನಿ ಮೋದಿ ವಾಗ್ದಾಳಿ

By Kannadaprabha NewsFirst Published Apr 5, 2024, 8:03 AM IST
Highlights

'ಒಬ್ಬರ ಮೇಲೆ ಒಬ್ಬರು ಭ್ರಷ್ಟಾಚಾರದ ಆರೋಪ ಮಾಡಿಕೊಳ್ಳುತ್ತಿದ್ದ ಎರಡು ಪಕ್ಷಗಳು ಇಂದು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮೈತ್ರಿ ಮಾಡಿಕೊಂಡಿವೆ' ಎಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಆಮ್ ಆದ್ಮ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. 

ಜಮೂಯಿ (ಬಿಹಾರ): 'ಒಬ್ಬರ ಮೇಲೆ ಒಬ್ಬರು ಭ್ರಷ್ಟಾಚಾರದ ಆರೋಪ ಮಾಡಿಕೊಳ್ಳುತ್ತಿದ್ದ ಎರಡು ಪಕ್ಷಗಳು ಇಂದು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮೈತ್ರಿ ಮಾಡಿಕೊಂಡಿವೆ' ಎಂದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಆಮ್ ಆದ್ಮ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆಗೂಡಿ ತಮ್ಮ ಮೊದಲ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

'ಒಬ್ಬರ ಮೇಲೆ ಒಬ್ಬರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದವರು ಇಂದು ನನ್ನನ್ನು ದೂಷಿಸುತ್ತಿದ್ದಾರೆ' ಎಂದರು. ಆರ್‌ಜೆಡಿ ಕಾಂಗ್ರೆಸ್ ಮೈತ್ರಿಕೂಟವು ಅಯೋಧ್ಯೆಯ ರಾಮಮಂದಿರಕ್ಕೆ ಅವಹೇಳನ ಮಾಡಿವೆ. ಜೊತೆಗೆ ದೇಶದ ಉನ್ನತ ಸ್ಥಾನವಾದ ರಾಷ್ಟ್ರಪತಿ ಸ್ಥಾನಕ್ಕೆ ಒಬ್ಬ ಬುಡಕಟ್ಟು ಜನಾಂಗ ಮಹಿಳೆಯ ಆಯ್ಕೆಯನ್ನು ಈ ಪಕ್ಷಗಳು ವಿರೋಧಿಸಿದ್ದವು ಎಂದು ಮೋದಿ ಆರೋಪಿಸಿದರು. ನಿತೀಶ್ ಆಡಳಿತವನ್ನು ಹೊಗಳಿದರು.

ಭಗತ್, ಅಂಬೇಡ್ಕರ್ ಮಧ್ಯೆ ಕೇಜ್ರಿ ಫೋಟೋ: ಸಿಎಂ ಅರವಿಂದ್‌ ಕೇಜ್ರಿವಾಲ್‌ ಪತ್ನಿ ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ಈ ವರೆಗೆ ಗೋಡೆಯ ಮೇಲೆ ಭಗತ್ ಸಿಂಗ್‌ ,ಬಿ.ಆರ್. ಅಂಬೇಡ್ಕರ್ ಫೋಟೋ ಇರುತ್ತಿದ್ದವು. ಅದರ ಮಧ್ಯೆದಲ್ಲಿಯೇ ಈಗ ಜೈಲು ಕಂಬಿ ಹಿಂದಿನ ಕೇಜ್ರಿವಾಲ್‌ ಭಾವಚಿತ್ರನ್ನೂ ಗುರುವಾರ ನೇತು ಹಾಕಲಾಗಿದೆ. ಈ ಘಟನೆ ಸದ್ಯ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆಪ್ ನಾಯಕರ ನಡೆಗೆ ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದೆ. ‘ಮಹಾನ್ ನಾಯಕರ ಫೋಟೋ ಮಧ್ಯ ಕಡು ಭ್ರಷ್ಟನ ಭಾವಚಿತ್ರ ಹಾಕಿರುವುದು ವಿಷಾದನೀಯ’ ವೆಂದು ದೆಹಲಿ ಬಿಜೆಪಿ ಮುಖ್ಯಸ್ಥ ಸಚ್‌ದೇವ್ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ ನಲ್ಲಿ ಟೀಕಿಸಿದ್ದಾರೆ.

ಸೋನಿಯಾ ಗಾಂಧಿ ಈಗ ರಾಜ್ಯಸಭೆ ಸದಸ್ಯೆ: ಮೇಲ್ಮನೆ ಪ್ರವೇಶ ಇದೇ ಮೊದಲು

ಜೈಲಿಂದ ಕೇಜ್ರಿ ಮತ್ತೊಂದು ಸಂದೇಶ: ಅಬಕಾರಿ ಹಗರಣದ ಆರೋಪದಡಿ ಬಂಧನಕ್ಕೊಳಗಾಗಿ ಸದ್ಯ, ತಿಹಾರ ಕಾರಾಗೃಹದಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ಆಪ್ ಶಾಸಕರಿಗೆ ತಮ್ಮ ಪತ್ನಿ ಮೂಲಕ ಸಂದೇಶವೊಂದನ್ನು ರವಾನಿಸಿದ್ದಾರೆ. ‘ಕ್ಷೇತ್ರಗಳಿಗೆ ತೆರಳಿ ಕೆಲಸ ಮಾಡಿ, ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ’ ಎಂದು ಸೂಚಿಸಿದ್ದಾರೆ. ವಿಡಿಯೋ ಸಂದೇಶ ನೀಡಿರುವ ಸುನಿತಾ, ‘ದೆಹಲಿಯ 2 ಕೋಟಿ ಮತದಾರರು ನಮ್ಮ ಕುಟುಂಬವಿದ್ದಂತೆ. ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು . ಜನರ ಸಮಸ್ಯೆಗಳನ್ನು ನಾವು ಪರಿಹರಿಸಬೇಕಿದೆ ಎನ್ನುವ ಸಂದೇಶವನ್ನು ಜೈಲಿನಿಂದಲೇ ಅರವಿಂದ್ ನೀಡಿದ್ದಾರೆ’ ಎಂದು ಹೇಳಿದ್ದಾರೆ.

click me!