ಬಾಂಗ್ಲಾ ಉಗ್ರರಿಗೆ ನೆಲೆ ನೀಡಿದ ಮದರಸಾಕ್ಕೆ ಬುಲ್ಡೋಜರ್‌ ಶಾಕ್‌

By Kannadaprabha NewsFirst Published Aug 31, 2022, 10:46 AM IST
Highlights

ಬಾಂಗ್ಲಾದೇಶದ ಉಗ್ರ ಸಂಘಟನೆ ಅನ್ಸರುಲ್‌ ಬಾಂಗ್ಲಾ ಟೀಮ್‌ನ ಇಬ್ಬರು ಉಗ್ರರಿಗೆ 4 ವರ್ಷಗಳ ಕಾಲ ನೆಲೆ ನೀಡಿದ್ದ ಅಸ್ಸಾಮಿನ ಬಾರ್‌ಪೇಟಾದಲ್ಲಿರುವ ಮದರಸಾವನ್ನು ಜಿಲ್ಲಾಡಳಿತವು ಧ್ವಂಸಗೊಳಿಸಿದೆ.

ಗುವಾಹಟಿ: ಬಾಂಗ್ಲಾದೇಶದ ಉಗ್ರ ಸಂಘಟನೆ ಅನ್ಸರುಲ್‌ ಬಾಂಗ್ಲಾ ಟೀಮ್‌ನ ಇಬ್ಬರು ಉಗ್ರರಿಗೆ 4 ವರ್ಷಗಳ ಕಾಲ ನೆಲೆ ನೀಡಿದ್ದ ಅಸ್ಸಾಮಿನ ಬಾರ್‌ಪೇಟಾದಲ್ಲಿರುವ ಮದರಸಾವನ್ನು ಜಿಲ್ಲಾಡಳಿತವು ಧ್ವಂಸಗೊಳಿಸಿದೆ. ಶೈಖುಲ ಹಿಂದ್‌ ಮದ್ಮುದಲ ಹಸನ್‌ ಜಮೀಉಲ ಹುದಾ ಇಸ್ಲಾಮಿಕ್‌ ಅಕಾಡೆಮಿ ಎಂಬ ಈ ಮದರಸಾದಲ್ಲಿ ಬಾಂಗ್ಲಾದೇಶಿ ಉಗ್ರ ಮೊಹಮ್ಮದ್‌ ಸುಮನ್‌ ಶಿಕ್ಷಕನಾಗಿ ಸೇರಿಕೊಂಡಿದ್ದ. ಇದು ತಿಳಿದ ನಂತರ ಪೊಲೀಸರಿಂದ ತಲೆ ಮರೆಸಿಕೊಂಡಿದ್ದ. ಬಾಂಗ್ಲಾದೇಶದ ನಿರ್ಬಂಧಿತ ಉಗ್ರ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ಟೀಮ್‌ ಸದಸ್ಯನಾಗಿರುವ ಸುಮನ್‌ ಅಲ್‌ಖೈದಾ ಬೆಂಬಲಿತ ಸ್ಲೀಪರ್‌ ಸೆಲ್‌ಗಳನ್ನು ಅಸ್ಸಾಮಿನಲ್ಲಿ ಸಕ್ರಿಯವಾಗಿಟ್ಟಿದ್ದ. ಕಳೆದ ಮಾರ್ಚ್‌ನಲ್ಲಿ ಈತನನ್ನು ಬಂಧಿಸಲಾಗಿತ್ತು. ಈ ಹಿಂದೆ ಮದರಸಾದ ಪ್ರಾಂಶುಪಾಲರು, ಶಿಕ್ಷಕ ಹಾಗೂ ಇನ್ನೋರ್ವ ಸಿಬ್ಬಂದಿಯನ್ನು ಕ್ರೀಡಾ ಉಗ್ರಕೃತ್ಯಗಳಿಗೆ ನೆರವು ನೀಡಿದ್ದಕ್ಕೆ ಬಂಧಿಸಲಾಗಿತ್ತು. ಉಗ್ರರಿಗೆ ಆಶ್ರಯ ನೀಡಿದ್ದಲ್ಲದೇ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದಕ್ಕೆ ಮದರಸಾವನ್ನು ಧ್ವಂಸಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಮದರಸಾ ನಡೆಸುತ್ತಿದ್ದವರಿಗೆ ಅಲ್‌ಖೈದಾ ಉಗ್ರ ಸಂಘಟನೆ ನಂಟು

ಅಕ್ರಮವಾಗಿ ಮದರಸಾ ನಡೆಸುತ್ತಿದ್ದ ಇಬ್ಬರು ಸಹೋದರರಾದ ಅಕ್ಬರ್‌ ಅಲಿ ಹಾಗೂ ಅಬ್ದುಲ್‌ ಕಲಾಂ ಅಜಾದ್‌ರನ್ನು ಕೂಡಾ ಶನಿವಾರ ಬಂಧಿಸಲಾಗಿದೆ. ಇಬ್ಬರು ಸಹೋದರರು ಅಲ್‌ಖೈದಾ ಬೆಂಬಲಿತ ಜಿಹಾದಿ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾಗಿದೆ. ಬಂಧಿತರ ಕಾರನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.

ಉತ್ತರ ಪ್ರದೇಶದಲ್ಲಿ ಮದರಸಾಗಳಿಗೆ ಆಧುನಿಕ ಶಿಕ್ಷಣ ಮೊಬೈಲ್ ಅಪ್ಲಿಕೇಷನ್

ಈ ಹಿಂದೆಯೂ ಅಸ್ಸಾಂನಲ್ಲಿ ಬಾಂಗ್ಲಾದೇಶಿ ಉಗ್ರ ಸಂಘಟನೆ ಅನ್ಸರುಲ್‌ ಇಸ್ಲಾಂನೊಂದಿಗೆ ಸಂಪರ್ಕ ಹೊಂದಿದೆ ಎಂಬ ಕಾರಣಕ್ಕೆ ಅಸ್ಸಾಂನ ಮೋರಿಗಾಂವ್‌ ಜಿಲ್ಲೆಯಲ್ಲಿರುವ ಮಫ್ತಿ ಮುಸ್ತಫಾನಿಗೆ ಸೇರಿದ ಮದರಸಾವನ್ನು ಧ್ವಂಸ ಮಾಡಲಾಗಿತ್ತು. ಉಗ್ರ ಸಂಪರ್ಕ ಶಂಕೆಯಲ್ಲಿ ಮುಫ್ತಿ ಮುಸ್ತಫಾನನ್ನು ಬಂಧಿಸಿದ ಬಳಿಕ ಮೊಯಿರಾಬಾದ್‌ನಲ್ಲಿರುವ ಈ ಮದರಸಾವನ್ನು ಮುಚ್ಚಲಾಗಿತ್ತು. ಕಳೆದ ಮಾರ್ಚ್‌ನಲ್ಲಿ ಅಸ್ಸಾಂನಲ್ಲಿ ಬಂಧಿಸಲಾದ ಪ್ರಮುಖ ಉಗ್ರ ನೆಟ್ವರ್ಕ್‌ಗಳಲ್ಲಿ ಮೋರಿಗಾಂವ್‌ನಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿತ್ತು. ಈತ ನಡೆಸುತ್ತಿದ್ದ ಈ ಮದರಸಾವನ್ನು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಧ್ವಂಸ ಮಾಡಲಾಗಿದೆ. ಈ ಮದರಸಾವನ್ನು ನಿರ್ಮಾಣ ಮಾಡಲು ಯಾವುದೇ ಅನುಮತಿಯನ್ನು ತೆಗೆದುಕೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂ ಜಿಹಾದಿಗಳ ತಾಣವಾಗಿದೆ: ಶರ್ಮಾ

ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮುಫ್ತಿ ನಡೆಸುತ್ತಿದ್ದ ಮದರಸಾವನ್ನು ಧ್ವಂಸ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಜಿಹಾದಿಗಳ ತಾಣವಾಗಿಬಿಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅನ್ಸುರುಲ್‌ ಇಸ್ಲಾಂಗೆ ಸೇರಿದ ಸುಮಾರು 8 ಉಗ್ರರು ಅಸ್ಸಾಂ ಪ್ರವೇಶಿಸಿದ್ದು, ಯುವಕರ ತಲೆಗೆ ಉಗ್ರ ಸಿದ್ಧಾಂತಗಳನ್ನು ತುಂಬುವ ಪ್ರಯತ್ನ ಮಾಡಿದ್ದಾರೆ. ಈ ಜಿಹಾದಿ ವ್ಯವಸ್ಥೆ ಉಗ್ರವಾದಕ್ಕಿಂತ ವಿಭಿನ್ನವಾಗಿದೆ. ಹಲವಾರು ವರ್ಷಗಳ ಕಾಲ ಯುವಕರ ಮನಸ್ಸಿನಲ್ಲಿ ಮತೀಯವಾದವನ್ನು ತುಂಬಿ ಆನಂತರ ಅವರನ್ನು ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ, 2002ರ ಗುಜರಾತ್‌ ಗಲಭೆಗೆ ಸಂಬಂಧಪಟ್ಟ ಎಲ್ಲಾ ಕೇಸ್‌ ಕ್ಲೋಸ್‌: ಸುಪ್ರೀಂ ಕೋರ್ಟ್‌ ನಿರ್ಧಾರ!

ಮದರಾಸಗಳಲ್ಲಿ ಓದುವವರ ಸಂಖ್ಯೆ ಇಳಿಕೆ

ಉತ್ತರ ಪ್ರದೇಶದ (Uttar Pradesh) ಮದರಸಾಗಳಲ್ಲಿ(madrasa) ಓದುವ ಹೊಸ ಪೀಳಿಗೆಯ ಮುಸ್ಲಿಂ ಬಾಲಕರ ಆಸಕ್ತಿ ನಿರಂತರವಾಗಿ ಕಡಿಮೆಯಾಗುತ್ತಿದೆ. ಮದರಸಾ ಶಿಕ್ಷಣ ಪರಿಷತ್ತಿನ (Madrasa Education Council ) ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಆರು ವರ್ಷಗಳಲ್ಲಿ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ತರಗತಿಗಳಲ್ಲಿ ನೋಂದಾಯಿತ ವಿದ್ಯಾರ್ಥಿಗಳ ಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆಯಾಗಿದೆಯಂತೆ. ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಮತ್ತು ಇಲ್ಲಿ ಪಡೆದ ಪ್ರಮಾಣಪತ್ರಗಳ ಪ್ರಾಮುಖ್ಯತೆಯ ಕೊರತೆಯೇ ಮದರಸಾಗಳಲ್ಲಿ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಈ ಇಳಿಕೆಗೆ ದೊಡ್ಡ ಕಾರಣ ಎಂದು ಹೇಳಲಾಗುತ್ತಿದೆ. ಯುಪಿ ಮದರಸಾ ಶಿಕ್ಷಾ ಪರಿಷತ್ತು (UP Madrasa Shiksha Parishad) ಯಾವುದೇ ಭಾಷಾ ವಿಶ್ವವಿದ್ಯಾನಿಲಯದಿಂದ ಅದರ ಸಂಬಂಧವನ್ನು ಪಡೆಯಲು ಅಥವಾ ಅದರ ಕೋರ್ಸ್‌ಗಳ ಮಾನ್ಯತೆಯನ್ನು ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ, ಮದ್ರಸಾ ಪ್ರಮಾಣಪತ್ರಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ.

2016ರಲ್ಲಿ ಯುಪಿಯಲ್ಲಿ 4 ಲಕ್ಷ 22 ಸಾವಿರದ 627 ವಿದ್ಯಾರ್ಥಿಗಳು ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ತರಗತಿಗಳಲ್ಲಿ ನೋಂದಾಯಿಸಿಕೊಂಡಿದ್ದರು. ಈ ವರ್ಷ ಈ ಸಂಖ್ಯೆ 92 ಸಾವಿರಕ್ಕೆ ಇಳಿದಿದೆ. ಅಂದರೆ, ಈ ಆರು ವರ್ಷಗಳಲ್ಲಿ 3.30 ಲಕ್ಷ ಇಳಿಕೆಯಾಗಿದೆ. ಅದಲ್ಲದೆ, ಯುಪಿಯ ಮದರಸಾಗಳಿಂದ ಹೊರಬರುವ ವಿದ್ಯಾರ್ಥಿಗಳು ತಮ್ಮ ಪ್ರಮಾಣಪತ್ರಗಳ ಆಧಾರದ ಮೇಲೆ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಮದರಸಾಗಳಲ್ಲಿ ನೀಡುವ ಕೋರ್ಸ್ ಮೂಲಗಳ ಪ್ರಕಾರ, ಮದರಸಾ ಶಿಕ್ಷಣವನ್ನು ಉದ್ಯೋಗ ಆಧಾರಿತವಾಗಿಸುವುದು ಈಗ ಆದ್ಯತೆಯಾಗಿದೆ. ಈ ಎಲ್ಲ ವಿಷಯಗಳ ಕುರಿತು ಕೂಲಂಕಷವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಪರಿಷತ್  ನಿರ್ಧರಿಸಲಿದೆ.

click me!