
ನವದೆಹಲಿ: 5 ವರ್ಷ ದಾಟಿದ ಮಕ್ಕಳ ಆಧಾರ್ ಬಯೋಮೆಟ್ರಿಕ್ ಕಡ್ಡಾಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು, ಶಾಲೆಗಳಿಗೆ ತೆರಳಿ ಆಧಾರ್ ಅಪ್‌ಡೇಟ್ ಯೋಜನೆ ಜಾರಿಗೆ ಮುಂದಾಗಿದೆ. 2 ತಿಂಗಳ ಬಳಿಕ ಹಂತಹಂತವಾಗಿ ದೇಶವ್ಯಾಪಿ ಈ ಪ್ರಕ್ರಿಯೆ ನಡೆಯಲಿದೆ.
ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಿಇಒ ಭುವನೇಶ್ ಕುಮಾರ್ ಮಾಹಿತಿ ನೀಡಿದ್ದು, ‘5 ವರ್ಷದ ದಾಟಿದ ಸುಮಾರು 7 ಕೋಟಿ ಮಕ್ಕಳು ಇದುವರೆಗೆ ಆಧಾರ್‌ನ್ನು ಬಯೋಮೆಟ್ರಿಕ್ ಮಾಡಿಸಿಕೊಂಡಿಲ್ಲ. ಹೀಗಾಗಿ ಪ್ರಾಧಿಕಾರ ಪೋಷಕರ ಒಪ್ಪಿಗೆಯೊಂದಿಗೆ ಮಕ್ಕಳ ಆಧಾರ್‌ಕಾರ್ಡ್‌ನ್ನು ಶಾಲೆಗಳಲ್ಲಿಯೇ ನವೀಕರಿಸಲು ಕೆಲಸ ಮಾಡುತ್ತಿದೆ. ಇದಕ್ಕಾಗಿ ತಂತ್ರಜ್ಞಾನ ರೂಪುಗೊಳ್ಳುತ್ತಿದ್ದು, 45-60 ದಿನಗಳಲ್ಲಿ ಸಿದ್ಧವಾಗಲಿದೆ’ ಎಂದಿದ್ದಾರೆ.
5 ವರ್ಷ ದಾಟಿದ ಮಕ್ಕಳ Aadhaar Card ಅಪ್‌ಡೇಟ್ ಮಾಡಿಲ್ವಾ? ಫ್ರೀ ಆಗಬೇಕಿದ್ರೆ ಕೂಡ್ಲೇ ಮಾಡಿಸಿ
ಇದೀಗ ಸಾಮಾನ್ಯವಾಗಿ ಎಲ್ಲರ ಭಾರತೀಯರ ಬಳಿಯೂ ಆಧಾರ್ ಕಾರ್ಡ್ ಇದ್ದೇ ಇದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಹಲವಾರು ಸೌಲಭ್ಯಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇದನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿರುವ ಆಧಾರ್ ಕಾರ್ಡ್ ಇದ್ದರೆ ಈಗ ಹಲವಾರು ಕೆಲಸಗಳು ಸುಲಭ ಜೊತೆಗೆ ಸರ್ಕಾರಿ ಸೌಲಭ್ಯಗಳಿಗೆ ಇವು ಕಡ್ಡಾಯವಾಗಿ ಬೇಕು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದೇ ರೀತಿ ಚಿಕ್ಕಮಕ್ಕಳಿಗೂ ಇದೀಗ ಆಧಾರ್ ಕಾರ್ಡ್ಗಳು ಇವೆ. ಆದರೆ, ಒಮ್ಮೆ ಆಧಾರ್ ಕಾರ್ಡ್ ಮಾಡಿಸಿ ಸುಮ್ಮನೇ ಇಟ್ಟುಬಿಟ್ಟಿದ್ದೀರಾ? ನಿಮ್ಮ ಮಕ್ಕಳಿಗೆ 5 ವರ್ಷ ದಾಟಿದ್ಯಾ? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ನೀವು ಓದಲೇ ಬೇಕು. ಏಕೆಂದರೆ, ಶಾಲಾ ದಾಖಲಾತಿ, ವಿದ್ಯಾರ್ಥಿವೇತನ, ನಗದು ವರ್ಗಾವಣೆ ಯೋಜನೆಗಳಂತಹ ಪ್ರಯೋಜನಗಳನ್ನು ಪಡೆಯಲು ಆಧಾರ್ ಬಯೋಮೆಟ್ರಿಕ್ ವಿವರಗಳು ಅಪ್‌ಡೇಟ್ ಆಗಿರುವುದು ಅವಶ್ಯಕವಾಗಿದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವಾಗ ಅವರ ಬಯೋಮೆಟ್ರಿಕ್ ವಿವರಗಳನ್ನು ತೆಗೆದುಕೊಂಡಿರುವುದಿಲ್ಲ. ಏಕೆಂದರೆ ಅವರ ಕೈರೇಖೆಗಳು ಅಷ್ಟಾಗಿ ಸ್ಪಷ್ಟವಾಗಿರುವುದಿಲ್ಲ. ಆದ್ದರಿಂದ ಒಮ್ಮೆ ಮಗುವಿಗೆ 5 ವರ್ಷ ದಾಟಿದರೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬೇಕಾಗುತ್ತದೆ. ಇದರ ಅರ್ಥ ಅವರ ಕಣ್ಣಿನ ಗುರುತು ಮತ್ತು ಬೆರಳಚ್ಚುಗಳನ್ನು ನೀಡುವ ಬಯೋಮೆಟ್ರಿಕ್ ಮೂಲಕ ಅಪ್‌ಡೇಟ್ ಮಾಡಬೇಕು. ಬಳಿಕ 15 ವರ್ಷವಾದ ಮೇಲೆ ಇನ್ನೊಮ್ಮೆ ಅಪ್‌ಡೇಟ್ ಮಾಡಿಸಬೇಕು. ಇಲ್ಲದಿದ್ದರೆ ಮುಂದೆ ಕೆಲವೊಂದು ಕೆಲಸಗಳಿಗೆ ತೊಂದರೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಗುವಿಗೆ 5 ರಿಂದ 7 ವರ್ಷವಾಗಿದ್ದರೆ ಉಚಿತವಾಗಿ ಕೂಡಲೇ ಇದನ್ನು ಸಮೀಪದ ಕೇಂದ್ರಗಳಿಗೆ ಹೋಗಿ ಅಪ್‌ಡೇಟ್ ಮಾಡಿಸಿಕೊಳ್ಳಬಹುದು. ಇದು ಬಯೋಮೆಟ್ರಿಕ್ ಆಗಿರುವ ಕಾರಣ, ಮಗುವಿನ ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡುವುದರಿಂದ ಆಧಾರ್ ಕೇಂದ್ರಗಳಲ್ಲಿಯೇ ಹೋಗಿ ಮಾಡಿಸಬೇಕು.
ಒಂದು ವೇಳೆ ಮಗುವಿಗೆ ಏಳು ವರ್ಷ ದಾಟಿದರೆ, ಇದುವರೆಗೂ ನೀವು ಆಧಾರ್ ಅಪ್‌ಡೇಟ್ ಮಾಡದೇ ಹೋದರೆ 100 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. 100 ರೂಪಾಯಿ ಹಣ ಕೊಟ್ಟು ನೀವು ಕೂಡಲೇ ಅಪ್‌ಡೇಟ್ ಮಾಡಿಸಬೇಕು. ಇದಾಗಲೇ 7 ವರ್ಷ ಕಳೆದರೂ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಮಾಡದ ಮಕ್ಕಳ ಆಧಾರ್ ಕಾರ್ಡ್‌ಗಳನ್ನು ಗುರುತಿಸಿ, ಅವರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಯುಐಡಿಎಐ ಸಂದೇಶಗಳನ್ನು ಕಳುಹಿಸುತ್ತಿದೆ. ಒಂದು ವೇಳೆ ಮೆಸೇಜ್ ಬರದೇ ಹೋದರೂ ನೀವು ಕೂಡಲೇ ಹೀಗೆ ಮಾಡಿಸುವುದು ಒಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ